ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮ ದಿನಾಚರಣೆ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 24 : ತಾಲೂಕಿನ ಹಾಲಾಪೂರ ಗ್ರಾಮದ ಅರವಿಂದ್ ಘೋಷ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮ ದಿನಾಚರಣೆ ಆಚರಿಸಲಾಯಿತು.

ಅರವಿಂದ್ ಘೋಷ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಭಾವ ಚಿತ್ರಕ್ಕೆ ಹೂವಿನ ಮಾಲೆ ಹಾಕಿ ಪೂಜೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಿದ್ದಾರ್ಥ ಪಾಟೀಲ್ ಮಾತನಾಡುತ್ತಾ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ರವರ ಪಾತ್ರ ಬಹಳ ದೊಡ್ಡದು, ಅವರು ಸಣ್ಣ ವಯಸ್ಸಿನಲ್ಲಿ ಅಗಾಧವಾದ ದೇಶ ಪ್ರೆಮ ಮೈಗೂಡಿಸಿಕೊಂಡಿದ್ದರು,ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು.ತಮ್ಮದೆ ಆದ ಐ ಎನ್ ಎ ಸೈನ್ಯವನ್ನು ಕಟ್ಟಿ ಸುಮಾರು 45,000 ಸಾವಿರ ಯುವಕರ ಪಡೆ ಕಟ್ಟಿ ಸೈನಿಕರ ತರಬೇತಿ ಕೊಟ್ಟು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಅಪ್ರತಿಮ ದೇಶಭಕ್ತ ರಾಗಿದ್ದಾರೆ ಎಂದು ನೆರೆದ ಸರ್ವ ಶಿಕ್ಷಕ ವೃಂದಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಸಿದ್ದಾರ್ಥ ಪಾಟೀಲ್ ಉಪನ್ಯಾಸಕರು ತಮ್ಮ ಭಾಷಣದಲ್ಲಿ ತಿಳಿಸಿದರು. ಶಿಕ್ಷಕರಾದ ವಿನೋದ ಪಾಟೀಲ್ ಚಂದ್ರಶೇಖರ ,ಮನೊಜಕುಮಾರ, ರೇಖಾ ಪಾಟೀಲ್,ಬಸವಲಿಂಗಯ್ಯ ನಂದಿಹಾಳ ಮಾತನಾಡಿದರು. ಕೊನೆಯದಾಗಿ ವಿದ್ಯಾರ್ಥಿಗಳು ನೇತಾಜಿ ರವರ ವೇಷಭೂಷಣ ಧರಿಸಿ ಪ್ರದರ್ಶನ ಮಾಡಿದರು.

Post a Comment

Previous Post Next Post