ಕೊಪ್ಪಳ ಲೋಕಸಭಾ ಕ್ಷೇತ್ರದ ಎಐಸಿಸಿ ವೀಕ್ಷಕರಾದ ಜೆ.ಬಿ. ಮಾಥೂರ ಭೇಟಿ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 25 : ಪಟ್ಟಣದ ಕಾಂಗ್ರೆಸ್ ಕಛೇರಿಗೆ ಸೋಮವಾರ ಸಂಜೆ ಕೊಪ್ಪಳ ಲೋಕಸಭಾ ಕ್ಷೇತ್ರದ ಎಐಸಿಸಿ ವೀಕ್ಷಕರಾದ ಜೆ.ಬಿ. ಮಾಥೂರ ಭೇಟಿ ನೀಡಿ ಚುನಾವಣೋತ್ತರ ಪ್ರಸ್ತುತ ರಾಜಕೀಯ ಮಾಹಿತಿ ಪಡೆದು ಕ್ಷೇತ್ರದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಜೊತೆ ಚರ್ಚಿಸಿದರು.


ಕೇರಳ ರಾಜ್ಯದ ರಾಜ್ಯಸಭೆ ಸದಸ್ಯರು ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಎಐಸಿಸಿ ವೀಕ್ಷಕರಾದ ಜೆ.ಬಿ. ಮಾಥೂರ ಅವರು ಮಸ್ಕಿ ಕಾಂಗ್ರೆಸ್ ಕಛೇರಿಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಮುಂಬರುವ 2023 ರ ಸಾರ್ವತ್ರಿಕ ಚುನಾವಣೆ ಮತ್ತು ಪಕ್ಷ ಸಂಘಟನೆ, ಬೂತ್ ಮಟ್ಟದ ಬಗ್ಗೆ ಕುರಿತು ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ
ಕಾರ್ಯಕರ್ತ ರೊಂದಿಗೆ ಚುನಾವಣೆ ಬಗ್ಗೆ
ಚರ್ಚಿಸಿದರು.

ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ನಾಯಕ್ ಮಾತನಾಡಿ ವಿಧಾನಸಭಾ ಚುನಾವಣೆಗೆ ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಈಗನಿಂದಲೇ ಸಿದ್ಧರಾಗಬೇಕು ಎಂದರು.
ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಮಾತನಾಡಿ ಕೆಲವೇ ತಿಂಗಳುಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ಬರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಿದ್ಧರಾಗಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಬಡವರ ಬಗ್ಗೆ ಕಾಳಜಿ ಇಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಸುಭದ್ರ ಆಡಳಿತ ನಡೆಸಿ ಹಲವಾರು ಯೋಜನೆಗಳನ್ನು ಜಾರಿಗೆ ಮಾಡಿದ್ದಾರೆ ಎಂದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ನಿರುಪಾದಪ್ಪ ವಕೀಲರು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ ಪಾಟೀಲ್, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿ ಪಾರೂಕಸಾಬ ತುರ್ವಿಹಾಳ, ಕಿಸಾನ್ ಶೆಲ್ ಅಧ್ಯಕ್ಷ ಮೈಬುಸಾಬ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಬಸನಗೌಡ ಮುದವಾಳ, ಕೃಷ್ಣಾ ಡಿ.ಚಿಗರಿ, ಜಿ.ಪಂ.ಮಾಜಿ ಅಧ್ಯಕ್ಷ ಶ್ರೀ ಶೈಲಪ್ಪ ಬ್ಯಾಳಿ, ಆದನಗೌಡ ಮಾಲಿಪಾಟೇಲ್, ಸಿದ್ದನಗೌಡ ಮಾಟೂರು, ವೆಂಕಟರೆಡ್ಡಿ ಹಾಲಾಪೂರ, ಸೋಮಶೇಖರ್, ಅಬ್ದುಲ್ ಗನಿ, ಮಲ್ಲನಗೌಡ ಸುಂಕನೂರು, ಬಸವಂತಪ್ಪ ಮಟ್ಟೂರು, ಹುಲುಗಪ್ಪ ಉಪ್ಪಲದೂಡ್ಡಿ , ಮಲ್ಲಯ್ಯ ಮುರಾರಿ, ಹಾಗೂ ಇನ್ನಿತರ ಮುಖಂಡರು ಉಪಸ್ಥಿತರು ಇದ್ದರು.

Post a Comment

Previous Post Next Post