UDAYAVANI NEWS
ಲಿಂಗಸಗೂರು, ಜನವರಿ 30 : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳು ಕಾರ್ಯಾಲಯ ಲಿಂಗಸಗೂರು ಸಮೂಹ ಸಂಪನ್ಮೂಲ ಕೇಂದ್ರ ಪೈದೊಡಿ
2022 ಮತ್ತು 23ನೇ ಸಾಲಿನ ಪೈದೊಡ್ಡಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಸರಕಾರಿ ಉನ್ನತೀಕರಿಸಿದ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ರಾಯದುರ್ಗದಲ್ಲಿ ಹಮ್ಮಿಕೊಳ್ಳಲಾಯಿತು.
ಕಲಿಕಾ ಹಬ್ಬ ಕಾರ್ಯಕ್ರಮದ ಪ್ರಯುಕ್ತ ಎಲ್ಲರೂ ಭಾಗವಹಿಸಿ ಶಾಲೆಯ ವಿವಿಧ ವಿದ್ಯಾರ್ಥಿಗಳು ಪ್ರಮುಖ ನಾಯಕರ ವೇಶಭೂಷಣಗಳನ್ನು ಧರಿಸಿ ಊರಿನ ಪ್ರಮುಖ ಬೀದಿಬೀದಿಗಳಲ್ಲಿ ಎತ್ತಿನ ಬಂಡೆಯಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಈ ಮೇಲಿನ ಮುಖಂಡರು ಕಲಿಕಾ ಹಬ್ಬದ ಕಾರ್ಯಕ್ರಮವನ್ನು ಕುರಿತು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶ್ರೀ ಗೋವಿಂದ ನಾಯಕ ಅವರು ಮಾತನಾಡಿ ಪ್ರತಿಯೊಂದು ಶಾಲೆಯು ಮೂಲಭೂತವಾದ ಅಗತ್ಯ ಸೌಲಭ್ಯಗಳು ಬೇಕಾಗಿದೆ ಮಕ್ಕಳು ಇಂಥಹ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದರ ಮುಖಾಂತರ ತಮ್ಮ ಕಲಿಕಾ ಪ್ರಗತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಆದಪ್ಪ ಜೋಗುರ, ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ವೆಂಕಟೇಶ ಗುತ್ತೇದಾರ್ ಮುಖ್ಯ ಅತಿಥಿಗಳಾಗಿ ಶ್ರೀ ಗೋವಿಂದ ನಾಯಕರು, ನೋಡಲ್ ಅಧಿಕಾರಿಗಳಾದ ಶ್ರೀ ಹುಸೇನಪ್ಪ, ಪ್ರಾ.ಶಿ.ಶಿ ಸಂಘದ ಕಾರ್ಯದರ್ಶಿಗಳಾದ ಶ್ರೀ ಜಗದೀಶ್, ಪೈದೊಡ್ಡಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಗಂಗಾಧರ್ ಪೈದೊಡ್ಡಿ ಗ್ರಾಂ, ಪಂ, ಉಪಾಧ್ಯಕ್ಷರಾದ ಶ್ರೀ ಮತಿ ನೀಲಮ್ಮ ಗಂಡ ಪ್ರಭುಗೌಡ, ಸದಸ್ಯರಾದ ಶ್ರೀ ಬಸಪ್ಪ ಮಂಗ್ಯಾಳ್, ಶ್ರೀ ದುರ್ಗಪ್ಪ ಬಡಿಗೇರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಚಂದಪ್ಪ ಜೋಗುರ್, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಂಬರೀಶ್ ಅಲದಾಳ್ ಹಾಗೂ ರಾಯದುರ್ಗ ಶಾಲೆಯ ಮುಖ್ಯ ಗುರುಗಳಾದ ಶ್ರೀ ಹುಲಗಪ್ಪ .ಎನ್ ಹಾಗೂ ಇತರ ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರು, ಊರಿನ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Tags
ಜಿಲ್ಲಾ ಸುದ್ದಿಗಳು