UDAYAVANI NEWS
ಮಸ್ಕಿ,ಜನವರಿ 30 : ಪಟ್ಟಣದ ವಾರ್ಡ್ ನಂಬರ್ 15 ರಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಜನಪ್ರಿಯ ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್ ಚಾಲನೆ ನೀಡಿದರು.
15 ನೇ ವಾರ್ಡನ ಪ್ರತಿ ಮನೆ ಮನೆಗೆ ತೆರಳಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಕರ ಪತ್ರವನ್ನು ಮಸ್ಕಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ಸರದಾರ ಎಂದೇ ಖ್ಯಾತಿ ಪಡೆದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ರವರು ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೆರಗು ನೀಡಿದರು.ನಂತರ ಯುವ ಕಾರ್ಯಕರ್ತರು ಮನೆ ಮನೆಗೆ ಕರ ಪತ್ರವನ್ನು ನೀಡಿ ವಿಜಯ ಸಂಕಲ್ಪ ಅಭಿಯಾನದ ಸ್ಟಿಕರ್ ಅನ್ನು ಕಾರ್ಯಕರ್ತರ ವಾಹನಗಳಿಗೆ ಅಂಟಿಸಿದರು.
ಇದೇ ಸಂದರ್ಭದಲ್ಲಿ
ಯುವ ಮೋರ್ಚಾ ಅಧ್ಯಕ್ಷರು ಶರಣೆಗೌಡ ತೀಡಿಗೋಳು ಹಾಗೂ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಂಬಳಿಮಠ, ಬಸವರಾಜ್ ಬುಕ್ಕಣ್ಣ, ಮಲ್ಲು ಗೋನಾಳ, ಬಸವರಾಜ್ ತೀಡಿಗೊಳ, ಶಶಿ ಕುಮಾರ್, ಹನುಮಂತ್ ಕೆಳಗಿನಮನೆ , ಸಂತೋಷ್ ಜೈ ರಾಮ,ಯುವ ಮೋರ್ಚಾದ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಬಿಜೆಪಿಯ ಯುವ ಮುಖಂಡರು ಮುಂತಾದವರು ಭಾಗಿಯಾಗಿದ್ದರು.
Tags
ಜಿಲ್ಲಾ ಸುದ್ದಿಗಳು