UDAYAVANI NEWS
ಮಸ್ಕಿ,ಜನವರಿ 30 : ಅಭಿನಂದನ್ ಸಂಸ್ಥೆಯ ವತಿಯಿಂದ ಜಾರಿಗೆ ತರಲಾದ ಸ್ವಚ್ಛತಾ ಅಭಿಯಾನ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಭಾಗವಾಗಿ 82ನೇ ವಾರದ ಸೇವಾ ಕಾರ್ಯದ ಮೂಲಕ ಮೆದಿಕಿನಾಳ ಗ್ರಾಮದ ಕರಿಗುಡ್ಡ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯನ್ನು ಸ್ವಚ್ಛಗೊಳಿಸಿ ಶಾಲೆಯ ಕಟ್ಟಡಗಳು ಕಾಂಪೌಂಡ್ ಗೋಡೆ ಹಾಗೂ ಕಂಬಗಳಿಗೆ ಬಣ್ಣವನ್ನು ಹಚ್ಚುವ ಮೂಲಕ ಶಾಲೆಗೆ ಮರು ಸೊಬಗನ್ನು ನೀಡಲಾಯಿತು.
ಭಾನುವಾರ 82ನೇ ವಾರದ ಸೇವಾ ಕಾರ್ಯದ ಮೂಲಕ ಮೆದಿಕಿನಾಳ ಗ್ರಾಮದ ಕರಿಗುಡ್ಡ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯನ್ನು ಸ್ವಚ್ಛಗೊಳಿಸಿ ಶಾಲೆಯ ಕಟ್ಟಡಗಳು ಕಾಂಪೌಂಡ್ ಗೋಡೆ ಹಾಗೂ ಕಂಬಗಳಿಗೆ ಬಣ್ಣವನ್ನು ಹಚ್ಚುವ ಮೂಲಕ ಶಾಲೆಗೆ ಮರು ಸೊಬಗನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭಿನಂದನ ಸಂಸ್ಥೆಯ ಸಂಸ್ಥಾಪಕರು ಹಾಗೂ ಈ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ರೂವಾರಿಗಳು ಆಗಿರುವ ರಾಮಣ್ಣ ಹಂಪರಗುಂದಿ ಅವರು ಸ್ವಚ್ಛ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಹೆಜ್ಜೆಗಳನ್ನಾಕುತ್ತಾ ಸಾಗುತ್ತಿರುವ ನಮ್ಮ ಈ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಮುಖ್ಯ ಉದ್ದೇಶ ಸ್ವಚ್ಛ ಭಾರತದ ಗುರಿಯನ್ನು ಆದಷ್ಟು ಬೇಗ ಸಾಧಿಸಬೇಕು ಎಂಬುದಾಗಿದೆ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳನ್ನು ರಕ್ಷಿಸುವ ಸಲುವಾಗಿ ಹಾಗೂ ಶಾಲೆಯ ಮಕ್ಕಳಲ್ಲಿ ಸ್ವಚ್ಛ ಭಾರತದ ಕನಸನ್ನು ಬಿತ್ತರಿಸಲು ಹೆಚ್ಚಾಗಿ ಸರಕಾರಿ ಶಾಲೆಗಳನ್ನೇ ಆಯ್ಕೆ ಮಾಡಿಕೊಂಡು ಮುನ್ನಡೆಯುತ್ತಿದ್ದೇವೆ. ಆದ್ದರಿಂದ ಸರಕಾರಿ ಶಾಲೆಗಳ ಉದ್ಧಾರವೇ ನಮ್ಮ ಮುಖ್ಯ ಧ್ಯೇಯವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಈ ಸಂಡೆ ಫಾರ್ ಸೋಶಿಯಲ್ ವರ್ಕ್ ನ ಮೂಲ ಉದ್ದೇಶಗಳ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ
ಶಾಲೆಯ ಮುಖ್ಯ ಗುರುಗಳಾದ ರವಿಕುಮಾರ್, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶೇಖರಪ್ಪ ಕಾರಟಗಿ, ಅಭಿನಂದನ್ ಸಂಸ್ಥೆಯ ಪದಾಧಿಕಾರಿಗಳಾದ ಜಾಫರಮಿಯ, ಮಲ್ಲಿಕಾರ್ಜುನ ಬಡಿಗೇರ್, ರವಿಚಂದ್ರ, ಕಿಶೋರ್, ಅಭಿನಂದನ್ ಸ್ಪೂರ್ತಿಧಾಮದ ಮಕ್ಕಳು, ಶಾಲೆಯ ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು