ಪಟ್ಟಣದಲ್ಲಿ ಮಹಿಳಾ ಪಥ ಸಂಚಲನ ಯಶಸ್ವಿ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ,ಜನವರಿ 29 :  ರಾಷ್ಟ್ರ ಸೇವಿಕಾ ಸಮಿತಿ ಮಸ್ಕಿ ತಾಲೂಕ ವತಿಯಿಂದ ಸಂಕ್ರಾಂತಿ ಉತ್ಸವ ನಿಮಿತ್ತ ಮಸ್ಕಿ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಪಥ ಸಂಚಲನವು ಶಾಂತಿಯುತವಾಗಿ ಜರುಗಿತು.

ಶನಿವಾರ ಸಂಜೆ 4:00 ಗಂಟೆಗೆ ರಾಷ್ಟ್ರ ಸೇವಿಕಾ ಸಮಿತಿ ಮಸ್ಕಿ ತಾಲೂಕ ವತಿಯಿಂದ ಸಂಕ್ರಾಂತಿ ಉತ್ಸವ ನಿಮಿತ್ತ ಮಸ್ಕಿ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಪಥ ಸಂಚಲನವು ಕೇಂದ್ರ ಶಾಲೆಯಿಂದ ಪ್ರಾರಂಭವಾಗಿ ರಾಣಿ ಚನ್ನಮ್ಮ ವೃತ್ತ, ಭಾಗ್ಯ ಲಕ್ಷ್ಮೀ ಮೆಡಿಕಲ್ ಸ್ಟೋರ್,ವಿಜಯ್ ನರ್ಸಿಂಗ್ ಹೋಮ್, ಗಾಡಿಬಾಯಿ ವೃತ್ತ, ತೇರ್ ಬಜಾರ್ ಮಾರ್ಗವಾಗಿ ಸಾಗಿ ನರಸನ ಗೌಡ ಪಾಟೀಲ್ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೇರಿದರು. ಮಹಿಳೆಯರ ಪಥ ಸಂಚಲನ ಪಟ್ಟಣದ ಎಲ್ಲಾ ಸಾರ್ವಜನಿಕರ ಗಮನ ಸೆಳೆದು ಪೋಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಸಾಗಿದ ಪಥ ಸಂಚಲನ ಶಾಂತಿಯುತವಾಗಿ ನಡೆಯಿತು.

Post a Comment

Previous Post Next Post