ಅಕ್ಷರದವ್ವ ಸಾವಿತ್ರಿಬಾಯಿ ಪುಲೆ 2023 ರ ಪ್ರಶಸ್ತಿಗೆ ಇಬ್ಬರು ಮಹಿಳಾ ಸಾಧಕೀಯರು ಆಯ್ಕೆ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 29 : ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕ ಬೆಂಗಳೂರು ವತಿಯಿಂದ ಕೊಡ ಮಾಡಲ್ಪಡುವಂತಹ ರಾಜ್ಯಮಟ್ಟದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆರವರ 2023 ರ ಪ್ರಶಸ್ತಿಯು ಪ್ರತಿ ಜಿಲ್ಲೆಯ ಇಬ್ಬರು ಅಥವಾ ಮೂವರು ಮಹಿಳಾ ಸಾಧಕೀಯರನ್ನು ಗುರುತಿಸಿ ಪ್ರಶಸ್ತಿ ಕೊಡಲಾಗುತ್ತದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರು ಪತ್ರಿಕೆಗೆ ತಿಳಿಸಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಸಾಧನೆ ಮಾಡಿದಂತಹ ಮಹಿಳಾ ಸಾಧಕೀಯರನ್ನು ಗುರುತಿಸಿ ದಲಿತ ವಿದ್ಯಾರ್ಥಿ ಪರಿಷತ್ತು ಕೊಡ ಮಾಡುವ ಈ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಪ್ರಶಸ್ತಿಗೆ ರಾಯಚೂರು ಜಿಲ್ಲೆಯಿಂದ ಇಬ್ಬರು ಮಹಿಳಾ ಸಾಧಕೀಯರು ಆಯ್ಕೆಯಾಗಿದ್ದಾರೆ.

ಕರ್ನಾಟಕದ ಇತಿಹಾಸದಲ್ಲೇ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಶಿಕ್ಷಕಿ ರಾಯಚೂರಿನ ಈ ನಮ್ಮ ಸಾಧಕಿ ಪೂಜಾ ನೀರಮಾನವಿ.
ಶೋಷಿತ ಸಮುದಾಯದಲ್ಲಿ ಹುಟ್ಟಿ ಅವನು ಅವಳಾಗಿ ಪೂಜಾ ಎಂಬ ಹೆಣ್ಣಾಗಿ ತಿರಸ್ಕರಿಸಿದವರಿಂದಲೇ ಪುರಸ್ಕರಿಸಲ್ಪಟ್ಟ ಸಾಧಕೀಯ ಹೆಸರೇ ಪೂಜಾ.
ಕಷ್ಟಪಟ್ಟು ಓದಿ ಡಿಗ್ರಿ ಪಡೆದು ಬಿ.ಇಡಿ ಮುಗಿಸಿ ಪರೀಕ್ಷೆ ಬರೆದು ಇಂದು ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಆಯ್ಕೆಯಾಗಿದ್ದಾರೆ.
ಅದೇ ರೀತಿ ಮತ್ತೋರ್ವ ಸಾಧಕೀಯಾದ ಪಲ್ಲವಿ ಕೋಸಗಿಯವರು ರಾಯಚೂರಿನಲ್ಲಿ ಬಿ.ಎಸ್ ಸಿ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿ ಜೊತೆಗೆ ವಿದ್ಯಾರ್ಥಿಗಳಿಗೆ ಅಕ್ಷರದ ಅರಿವು ಮೂಡಿಸುತ್ತಾ ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ಓದಲು ಸಹಾಯ ಮಾಡಿ ಸಾಮಾಜಿಕ ಜನಪ್ರಿಯತೆಯನ್ನು ಪಡೆದಿದ್ದಾರೆ.
ಇವರಿಬ್ಬರ ಈ ಗಣನೀಯ ಸಾಧನೆಯನ್ನು ಗುರುತಿಸಿ, ಇದೇ ದಿನಾಂಕ 31.01.2023 ರಂದು ಬಿಜಾಪುರದ ಹನುಮಂತರಾಯ ರಂಗಮಂದಿರದಲ್ಲಿ ಮಾತೆ ಸಾವಿತ್ರಿಬಾಯಿ ಪುಲೆ ಜನ್ಮದಿನದ ಅಂಗವಾಗಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುತ್ತದೆ ಎಂದು 
ರಾಯಚೂರು ಜಿಲ್ಲಾ ಸಂಚಾಲಕರಾದ
 ಮೌನೇಶ ಜಾಲವಾಡಗಿ ಹಾಗೂ ಮಸ್ಕಿ ತಾಲೂಕ ಸಂಚಾಲಕರಾದ ಮೌನೇಶ ತುಗ್ಗಲದಿನ್ನಿ ಪತ್ರಿಕೆಗೆ ತಿಳಿಸಿದ್ದಾರೆ.

Post a Comment

Previous Post Next Post