ಹೇಲಿಪ್ಯಾಡ್ ಗ್ರೌಂಡ್ ನಲ್ಲಿ ಹೂಗುಚ್ಚ ನೀಡುವ ಮೂಲಕ ದೇಶದ ಪ್ರಧಾನಿಗೆ ಜಿಲ್ಲಾಡಳಿತದಿಂದ ಅದ್ಧೂರಿ ಸ್ವಾಗತ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS
ಹುಣಸಗಿ, ಜನವರಿ 20 : ನಮ್ಮದು ಡಬಲ್ ಇಂಜೀನ್ ಸರಕಾರವಾಗಿದ್ದು ದೇಶವನ್ನು ವಿಕಾಸದೇಡೆಗೆ ಕರೆದೊಯ್ಯುವ ಸರಕಾರವಾಗಿದ್ದು ವಿಕಾಸದ ಆಕಾಂಕ್ಷೇಯನ್ನು ಹೊಂದಿದ್ದು ಯಾದಗಿರಿ ಜಿಲ್ಲೆಗೆ ಸಮೃದ್ಧ ಇತಿಹಾಸವಿದ್ದು ನಮ್ಮ ಪೂರ್ವಜರ ಸಾಮರ್ಥ್ಯದ ಪ್ರತೀಕವಾಗಿದೆ ಹಾಗಾಗಿ ನಮ್ಮ ಸಂಸ್ಕೃತಿ, ಪರಂಪರೆ ಬೆಳೆದಿದೆ ಅಲ್ಲದೇ ಸುರಪುರದ ಮಹಾನ್ ರಾಜ ವೆಂಕಟಪ್ಪ ನಾಯಕ ತಮ್ಮ ಆಡಳಿತದಿಂದ ದೇಶದಲ್ಲಿ ಖ್ಯಾತಿ ಗಳಿಸಿದರು ಎಂದು ಹೇಳಿದರು.
ಜ.19 ರಂದು 10813 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಕೋಡೆಕಲ್ ಬಳಿ ಏರ್ಪಡಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಗುರುವಾರ ಚಾಲನೆ ನೀಡಿ ಎಲ್ಲ ಸಹೋದರ, ಸಹೋದರಿಯರಿಗೆ ನನ್ನ ವಂದನೆಗಳು ಎಂದು ಕೈ ಮುಗಿದು ಕನ್ನಡದಲ್ಲಿ ಭಾಷಣ ಆರಂಭಿಸಿ ಮಾತನಾಡಿದರು.

ಕರ್ನಾಟಕದ ವಿಕಾಸಕ್ಕಾಗಿ 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಯೋಜನೆಗೆ ಶಿಲಾನ್ಯಾಸ ಹಾಗೂ ಶಂಕುಸ್ಥಾಪನೆಗೆ ಬಂದಿದ್ದೇನೆ. ಈ ಯೋಜನೆಯಿಂದ ಯಾದಗಿರಿ, ಕಲಬುರಗಿ, ವಿಜಯಪುರ, ಹಾಗೂ ರಾಯಚೂರು ಜಿಲ್ಲೆಗಳ ಜನತೆಗೆ ನೀರಾವರಿ, ಕುಡಿಯುವ ನೀರಿಗೆ ಸಾಕಷ್ಟು ಉಪಯೋಗವಾಗಲಿದೆ. ಜನರ ಜೀವನ ಮಟ್ಟ ಸುಧಾರಿಸಲಿದ್ದು ಉದ್ಯೋಗ ಪ್ರಮಾಣ ಹೆಚ್ಚಾಗಲಿದೆ. ಒಟ್ಟಾರೆ ಜಿಲ್ಲೆಗಳ ವಿಕಾಸವಾಗಲಿದ್ದು ಈ ಯೋಜನೆ ಆರಂಭಕ್ಕೆ ನಾನು ಸಿಎಂ ಬೊಮ್ಮಾಯಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸಿದರು ಜೊತೆಗೆ ಭಾರತ ಇಂದು ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದ್ದು. ಮುಂದಿನ 25 ವರ್ಷಗಳಲ್ಲಿ ಭಾರತ ಅಮೃತ ಸಮಯವನ್ನು ಕಾಣಲಿದೆ. ಇದರಲ್ಲಿ ಕರ್ನಾಟಕದ ಕೊಡುಗೆಯೂ ಸಾಕಷ್ಟಿದೆ . ಇದಕ್ಕೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ನಾವು ವಿಕಾಸದ ಮೂಲಕ ಜನರ ವೋಟ್ ಬ್ಯಾಂಕ್ ನೋಡುತ್ತೇವೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡ ಯಾದಗಿರಿ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದರು. ಕಾಲಜ್ಞಾನಿಯ ನಾಡಿನಲ್ಲಿ ಈ ಅಪರೂಪದ ಕ್ಷಣಕ್ಕೆ ಯಾದಗಿರಿ, ರಾಯಚೂರು, ವಿಜಯಪುರ ಜಿಲ್ಲೆಯ ಅಸಂಖ್ಯಾತ ಜನರು ಸಾಕ್ಷಿಯಾದರು. ಜಿಲ್ಲೆಯಾದ ನಂತರ ಈ ರೀತಿಯ ಬೃಹತ್ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಇದೆ ಮೊದಲು. ರೂ.4,699 ಕೋಟಿ ವೆಚ್ಚದಲ್ಲಿ ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ, ಪುನಃಶ್ಚೇತನ ಹಾಗೂ ಆಧುನೀಕರಣ ಯೋಜನೆಯನ್ನು ಲೋಕಾರ್ಪಣೆಗೊಳಿಸಿದರು.
ನಾರಾಯಣಪುರ ಎಡದಂಡೆ ಕಾಲುವೆ ಜಾಗದಲ್ಲಿ ರೈತರಿಗೆ ನೀರನ್ನು ಬೇಡಿಕೆಯಾನುಸಾರ ಸಮನಾಂತರವಾಗಿ ಹಂಚಿಕೆ ಮಾಡಿ ನೀರಾವರಿ ಸೌಲಭ್ಯ ವಂಚಿತ ಪ್ರದೇಶಕ್ಕೆ ನೀರನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ನಾರಾಯಣಪುರ ಎಡದಂಡೆ ಕಾಲುವೆಯು 10 ಸಾವಿರ ಕ್ಯೂಸೆಕ್ ನೀರು ಹರಿವಿನ ಸಾಮರ್ಥ್ಯವನ್ನು ಹೊಂದಿದ್ದು, ಉತ್ತರ ಕರ್ನಾಟಕದ ಬರಪೀಡಿತ ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ 4.50 ಲಕ್ಷ ಹೆಕ್ಟರ್ ಪ್ರದೇಶಕ್ಕೆ ಹುಣಸಗಿ ಶಾಖಾ ಕಾಲುವೆ, ಶಹಾಪುರ ಶಾಖಾ ಕಾಲುವೆ ಹಾಗೂ ಇಂಡಿ ಏತ ನೀರಾವರಿ ಕಾಲುವೆಗಳ ಮುಖಾಂತರ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. 

ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ಪುನಶ್ಚೇತನ, ಹುಣಸಗಿ, ಶಹಾಪುರ, ಮುಡಬಾಳ, ಇಂಡಿ ಹಾಗೂ ಜೇವರ್ಗಿ ಶಾಖಾ ಕಾಲುವೆಗಳ ಪುನಶ್ಚೇತನ, ವಿತರಣಾ ಕಾಲುವೆ ಲ್ಯಾಟರಲ್, ಹಾಗೂ ಉಪ ಕಾಲುವೆಗಳ ಪುನಶ್ಚೇತನ ಕಾಮಗಾರಿಗಳನ್ನು ಯೋಜನೆಯಡಿ ಕೈಗೊಂಡಿದ್ದು, ಹೆಡ್ ರೆಗ್ಯೂಲೇಟರ್, ಕ್ರಾಸ್ ರೆಗ್ಯೂಲೇಟರ್, ಡಿಸ್ಟ್ರಿಬ್ಯೂಟರಿ, ಲ್ಯಾಟರಲ್ ಹಾಗೂ ಉಪ ಕಾಲುವೆಗಳಿಗೆ ಸ್ಕಾಡಾ ಆಧಾರಿತ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಲಾಗಿದೆ. 

ಈ ಯೋಜನೆಯಿಂದ ಕಾಲುವೆ ಜಾಲದಡಿ ಬರುವ ರೈತರಿಗೆ ನ್ಯಾಯಯುತವಾಗಿ ಸಮಾನಾಂತರವಾಗಿ ಹಾಗೂ ಪರಿಣಾಮಕಾರಿಯಾಗಿ ನೀರಿನ ವಿತರಣೆ ಮಾಡಲಾಗುತ್ತಿದೆ. ಕಾಲುವೆ ಜಾಲಗಳ ಕೊನೆ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರನ್ನು ತಲುಪಿಸಲಾಗುತ್ತದೆ. ನೀರು ಪೋಲಾಗುವ ಪ್ರಮಾಣ ಕಡಿಮೆಯಾಗುವ ಮೂಲಕ ನೀರಿನ ಬಳಕೆಯ ದಕ್ಷತೆಯನ್ನು ಶೇ.31.75 ರಿಂದ ಶೆ.51ರಷ್ಟು ಹೆಚ್ಚಾಗುತ್ತದೆ. ಅದಲ್ಲದೇ 3ಲಕ್ಷಕ್ಕೂ ಅಧಿಕ ರೈತರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. 

ಜೆಜೆಎಂ ಅಡಿ ರೂ.2004 ಕೋಟಿ ಮೊತ್ತದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ: ಜಲಜೀವನ್ ಮಿಷನ್ ಯೋಜನೆ ಅಡಿ ಯಾದಗಿರಿ ಜಿಲ್ಲೆಯ ರೂ.2,004 ಕೋಟಿ ಮೊತ್ತದ 
ಬಹುಗ್ರಾಮ ಕುಡಿಯುವ ನೀರಿನ ಯೋಜನಾ ಕಾಮಗಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಉವ ಮೂಲಕ ಈ ಯೋಜನೆಯಡಿ 117 ಎಂ.ಎಲ್.ಡಿ ಸಾಮರ್ಥ್ಯದ ಜಲಶುದ್ಧೀಕರಣ ಘಟಕವನ್ನು ನಿರ್ಮಿಸಲಾಗುತ್ತದೆ. ನಾರಾಯಣಪುರ ಅಣೆಕಟ್ಟೆಯಿಂದ 15.84 ಲಕ್ಷ ಜನರಿಗೆ ಶುದ್ಧೀಕರಿಸಿದ ನೀರನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. 710 ಗ್ರಾಮೀಣ ವಸತಿ ಪ್ರದೇಶಗಳ 2,32,470 ಮನೆಗಳು ಹಾಗೂ ಕಕ್ಕೇರಾ, ಕೆಂಭಾವಿ ಹಾಗೂ ಹುಣಸಗಿ ಪಟ್ಟಣಗಳಲ್ಲಿ ಸುಸ್ಥಿರ, ಶುದ್ಧ ನೀರು ಸರಬರಾಜು ಮಾಡಲಾಗುತ್ತದೆ. ಈ ಮೂಲಕ ಇಡೀ ಯಾದಗಿರಿ ಜಿಲ್ಲೆಗೆ ಈ ಯೋಜನೆಯ ಪ್ರಯೋಜನವಾಗಲಿದೆ. 




ರೂ. 4 ಸಾವಿರ ಕೋಟಿ ವೆಚ್ಚದಲ್ಲಿ ಪ್ರವೇಶ ನಿಯಂತ್ರಿತ ಗ್ರೀನ್ ಫೀಲ್ಡ್ ಹೆದ್ದಾರಿ (ಸೂರತ್-ಚೆನ್ನೈ) ಕಾಮಗಾರಿಗಳಿಗೆ ಶಿಲಾನ್ಯಾಸ: 
ರೂ.4 ಸಾವಿರ ಕೋಟಿ ವೆಚ್ಚದಲ್ಲಿ ಪ್ರವೇಶ ನಿಯಂತ್ರಿತ ಗ್ರೀನ್ ಫೀಲ್ಡ್ ಹೆದ್ದಾರಿ(ಸೂರತ್-ಚೆನ್ನೈ) ಕಾಮಗಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು.
ರೂ. 1999.24 ಕೋಟಿ ರೂ.ವೆಚ್ಚದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 65 ಕಿ.ಮೀ ಉದ್ದದ ಗ್ರೀನ್ ಫೀಲ್ಡ್ ಹೆದ್ದಾರಿ ಹಾಗೂ 2,110.52 ಕೋಟಿ ರೂ.ವೆಚ್ಚದಲ್ಲಿ ಕಲಬುರಗಿ ಜಿಲ್ಲೆಯಲ್ಲಿ 71 ಕಿ.ಮೀ ಉದ್ದದ ಪ್ರವೇಶ ನಿಯಂತ್ರಿತ ಗ್ರೀನ್ ಫೀಲ್ಡ್ ಹೆದ್ದಾರಿ ಇರಲಿದೆ. ಈ ಯೋಜನೆಯಿಂದ ಒಳನಾಡು ಪ್ರದೇಶಗಳ ಅಭಿವೃದ್ಧಿಯಾಗಲಿದೆ. ಕಡಿಮೆ ಅಭಿವೃದ್ಧಿಯಾಗಿರುವ ಹಾಗೂ ಅಭಿವೃದ್ಧಿ ಹೊಂದದ ಪ್ರದೇಶಗಳ ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ. ಪೂರ್ವ ಹಾಗೂ ಪಶ್ಚಿಮ ಕರಾವಳಿ ಪ್ರದೇಶಗಳ ಬಂದರುಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಪ್ರಯಾಣದ ದೂರವನ್ನು 330 ಕಿ.ಮೀಗಳಷ್ಟು ಹಾಗೂ ಸಮಯವನ್ನು ಎಂಟು ಗಂಟೆಗಳಷ್ಟು ಈ ನೂತನ ಹೆದ್ದಾರಿ ಕಡಿಮೆ ಮಾಡಲಿದೆ. ಪ್ರಮುಖ ಪಟ್ಟಣಗಳು ಹಾಗೂ ದಟ್ಟಣೆಯಿಂದ ಕೂಡಿದ ಪ್ರದೇಶಗಳ ಮೂಲಕ ಹಾದು ಹೋಗುವುದರಿಂದಾಗಿ ಆಗುವ ವಿಳಂಬವನ್ನು ತಪ್ಪಿಸುತ್ತದೆ ಮತ್ತು. ಗ್ರೀನ್-ಫೀಲ್ಡ್ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಕೃಷಿ ಹಾಗೂ ಕೈಗಾರಿಕೆ ಉತ್ಪನ್ನಕ್ಕೆ ಉತ್ತೇಜನ ದೊರೆಯಲಿದೆ. ಎಂದು ಹೇಳಿದರು. 

ಸಿ.ಎಂ. ಬೊಮ್ಮಾಯಿ ಮಾತನಾಡಿ 1857 ನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ನಡೆಸಿದ ರಾಜಾವೆಂಕಟಪ್ಪ ನಾಯಕ ಅವರಿಗೆ ಗೌರವ ಸಲ್ಲಿಸಿ ಮಾತನಾಡಿದರು. ೨೦೧೧ ರಿಂ ಪ್ರಾಂಭವಾಗಿ ೨೦೧೨ ರಲ್ಲಿ ಬಿ.ಜೆಪಿ ಸರಕಾರದ ಅನುಮತಿ ಪಡೆದುಕೊಂಡು ಈ ಸ್ಕಾಡಾ ಕಾಲುವೆಯ ಯೋಜನೆಗೆ ಜಾರಿಗೊಳಿಸಲಾಯಿತು. ನಂತರ ನಮ್ಮ ರಾಜ್ಯಕ್ಕೆ ೧೧ ಸಾವಿರ ಕೋಟಿ ಬಜೆಟ್ ಅನ್ನು ಕೇಂದ್ರ ಸರಕಾರವು ಕೊಟ್ಟಿದೆ. ೪.೫ ಲಕ್ಷ ಇರುವ ಕೆ.ಬಿ.ಜೆ.ಎನ್.ಎಲ್ ವ್ಯಾಪ್ತಿಗೆ ಬರುವ ಕೆಳಭಾಗದ ರೈತರಿಗೆ ಈ ಯೋಜನೆಯು ಉಪಯೋಗವಾಗಲಿದೆ ಮತ್ತು ೮ ಸ್ಕಾಡಾ ಯೋಜನೆಯಿಂದ ನೀರು ಉಳಿತಾಯವಾಗಲಿದ್ದು ಎಲ್ಲಾ ರೈತರಿಗೆ ನೀರು ತಲುಪುತ್ತದೆ. ಈ ಯೋಜನೆಯು ರಾಷ್ಟ್ರದಲ್ಲಿಯೇ ಅತ್ಯಂತ ದೊಡ್ಡ ಯೋಜನೆಯಾಗಿದ್ದು. ನಿರೀನ ನಿರ್ವಹಣೆ, ಕುಡಿಯುವ ಯೋಜನೆ, 4.5 ಲಕ್ಷ ಹೆಕ್ಟೇರ್ ಜಮೀನುಗಳಿಗೆ ಅನುಕೂಲವಾಗಲಿದೆ. ನೀರಾವರಿಯಲ್ಲಿ ದೊಡ್ಡ ಕ್ರಾಂತಿಯಾಗಲಿದ್ದು ಮುಂದಿನ ಹತ್ತು ವರ್ಷಗಳಲ್ಲಿ ಹೆಚ್ಚು ಹಣವನ್ನು ಈ ನೀರಾವರಿ ಯೋಜನೆಗೆ ಮೀಸಲಿಡಲಾಗುವುದು ಎಂದು ಹೇಳಿದರು.

ರಾಜ್ಯ ನೀರಾವರಿ ಸಚೀವ ಕಾರಜೋಳ ಮಾತನಾಡಿ ನೀರಾವರಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಎಲ್ಲಾ ಭಾಗದ ರೈತರಿಗೆ ನೀರು ದೊರೆಯುವಂತೆ ಆಗಬೇಕೆಂದು ಮಾನ್ಯ ನರೇಂದ್ರ ಮೋದಿ ಅವರು ಸ್ಕಾಡಾ ಯೋಜನೆಯನ್ನು ಜಾರಿಗೆ ತರಲಾಗಿದ್ದು ಇದರಿಂದಾಗಿ ನೀರು ಸೋರಿಕೆಯನ್ನು ತಡೆಯಬಹುದಾಗಿದೆ ಜೊತೆಗೆ ಆಲಮಟ್ಟಿ ಜಲಾಶಯದಲ್ಲಿ ೧೩೦ ಟಿ.ಎಮ್.ಸಿ ನೀರು ಲಭ್ಯವಿದೆ. ಸಾಮಾಜಿಕ ಕಳಕಳಿ, ದೇಶದ ಭದ್ರತೆ, ದೇಶದ ಕಳಕಳಿ 49 ಜನರಿಗೆ ಸನ್ಮಾನ್ಯ ನರೇಂದ್ರ ಮೋದಿ ಸರಕಾರದಲ ಮಂತ್ರಿಮಂಡಳದಲ್ಲಿ ಅವಕಾಶವನ್ನು ಕಲ್ಪಿಸಿದ್ದಾರೆ. ಜೊತೆಗೆ ಬಡವರ, ದೀನದಲಿತರ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮತ್ತು ಭ್ರಷ್ಟಾಚಾರ ಹೋಗಲಾಡಿಸುವ ಮೂಲಕ ಒಳ್ಳೆಯ ಆಡಳಿತವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಬಾಕ್ಸ್: ರಾಜುಗೌಡರ ಭುಜ ತಟ್ಟಿದ ಮೋದಿ: ತಮ್ಮ ಭಾಷಣದ ನಂತರ ಕೊನೆಯಲ್ಲಿ ವೇದಿಕೆಯಿಂದ ತೆರಳುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಸಕ ಸುರಪುರ ಶಾಸಕ ನರಸಿಂಹನಾಯಕ (ರಾಜುಗೌಡ) ಅವರ ಭುಜ ತಟ್ಟುವ ಮೂಲಕ ಶಹಬ್ಬಾಷ್ ಹೇಳಿದರು. 

ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಭಗವಂತ ಖೂಬಾ,ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚವ್ಹಾಣ, ಸ್ಥಳೀಯ ಶಾಸಕರು ಆಗಿರುವ ಸುರಪುರದ ರಾಜುಗೌಡ (ನರಸಿಂಹನಾಯಕ್), ಸಂಸದರಾದ ರಾಜಾ ಅಮರೇಶ್ವರ ನಾಯಕ್, ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ಸ್ನೇಹಲ್ ಆರ್ ಸೇರಿದಂತೆ ಅನೇಕರು ಇದ್ದರು.

Post a Comment

Previous Post Next Post