UDAYAVANI NEWS
ಬೆಂಗಳೂರು,ಜನವರಿ 07 : ಬೆಂಗಳೂರಿನ ಮಿಟೂ ಫೌಂಡೇಶನ್ ರವರು ಕಳೆದ ಮೂರು ತಿಂಗಳಿನಿಂದ ಮುಟ್ಟು ಎಂದರೇನು? ಯಾಕೆ ಮುಟ್ಟಾಗುತ್ತೇವೆ? ಪೌಷ್ಟಿಕ ಆಹಾರ, ಆರೋಗ್ಯ, ಮುಕ್ತ ಮಾತುಕತೆ ಮತ್ತು ಮುಟ್ಟಾದಾಗ ಬಳಸುವ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಎಷ್ಟು ಪೂರಕ ಎನ್ನುವುದರ ಬಗ್ಗೆ ತರಬೇತಿಯನ್ನು ನೀಡಲಾಯಿತು.
ಮುಟ್ಟಿಗೆ ಸಂಬಂಧಿಸಿದಂತೆ ಹಲವು ಮೌಡ್ಯ ಆಚರಣೆಗಳು ಹಾಗೂ ಅಪೌಷ್ಟಿಕತೆಯಿಂದ ಆಗುವ ಪರಿಣಾಮಗಳ ಕುರಿತಾಗಿ ಬೆಂಗಳೂರಿನ ಮಿಟೂ ಫೌಂಡೇಶನ್ ರವರು ಕಳೆದ ಮೂರು ತಿಂಗಳಿನಿಂದ ಮುಟ್ಟು ಎಂದರೇನು? ಯಾಕೆ ಮುಟ್ಟಾಗುತ್ತೇವೆ? ಪೌಷ್ಟಿಕ ಆಹಾರ, ಆರೋಗ್ಯ, ಮುಕ್ತ ಮಾತುಕತೆ ಮತ್ತು ಮುಟ್ಟಾದಾಗ ಬಳಸುವ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಎಷ್ಟು ಪೂರಕ ಎನ್ನುವುದರ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿತ್ತು. ಪಿಲಾಜನಹಳ್ಳಿ, ದಾಸನಹಟ್ಟಿ, ಬಡಗೊಲ್ಲರ ಹಟ್ಟಿ ಹೀಗೆ ಒಟ್ಟು ನಾಲ್ಕು ಹಳ್ಳಿಯ ಹೆಣ್ಣುಮಕ್ಕಳ ಜೊತೆ ಈ ರೀತಿಯ ತರಬೇತಿಯನ್ನು ಮಾಡುತ್ತಾ ಬಂದಿರುತ್ತೇವೆ. ಈಗ ಇದು ಸಮಾರೋಪ ಸಮಾರಂಭವು ಕೆಂಚನಹಟ್ಟಿ ಗ್ರಾಮದಲ್ಲಿ ನಡೆಯಿತು. ಇಂದು ವೇದಿಕೆಯಲ್ಲಿ ಎಲೆದಕೆರೆ ವೈದ್ಯಾರದ ಡಾ. ನಿತ್ಯ, ಪ್ರಾಥಮಿಕ ಶಾಲಾ ಶಿಕ್ಷಕಿ ಕವಿತಾ ಕೆಂಚನಹಟ್ಟಿ, ಅಂಗನವಾಡಿ ಸೂಪ್ರವೈಸರ್ ಸುಪ್ರಿಯಾ ಹಿರಿಯೂರು, ಗ್ರಾಮ ಪಂಚಾಯತಿ ಯ ಸದಸ್ಯರು ಭೋಜರಾಜ್ , ರೇಖಾ, ಊರಿನ ಯುವಜನರ ಸಂತೋಷ ಬೆಂಗಳೂರಿನ ಮಿಟೂ ಸಂಸ್ಥೆಯ ಗಾಯತ್ರಿಬಾಯಿ ಮತ್ತು ಮಂಜುಳಾ ಸರಸ್ವತಿ , ಕೆಂಚನಹಟ್ಟಿಯ ಅಂಗನವಾಡಿ ಕಾರ್ಯಕರ್ತೆ ತಾರಾ, ಆಶಾ ಕಾರ್ಯಕರ್ತೆ ಭಾಗ್ಯ ಮತ್ತು ಊರಿನ ಹಿರಿಯರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.
Tags
ರಾಜ್ಯ ಸುದ್ದಿಗಳು