UDAYAVANI NEWS
ಮಸ್ಕಿ,ಜನವರಿ 07 : ಪಟ್ಟಣದ ಬಸವೇಶ್ವರ ನಗರದಲ್ಲಿರುವ ಸಾರ್ವಜನಿಕ ಶಾಖಾ ಗ್ರಂಥಾಲಯಕ್ಕೆ ಮೂಲಭೂತ ಸೌಕರ್ಯ ಮತ್ತು ಮೇಲ್ದರ್ಜೆಗೆ ಏರಿಸಲು ಅಧಿಕಾರಿಗಳು ,ರಾಜಕಾರಣಿಗಳು, ಸಾರ್ವಜನಿಕರು ಸಹಕಾರ ಅಗತ್ಯವಾಗಿದೆ ಹಾಗೂ ಮಾದರಿಯ ಗ್ರಂಥಾಲಯವನ್ನಾಗಿ ಮಾಡುವುದೇ ನಮ್ಮ ಗುರಿಯೆಂದು ಗ್ರಂಥ ಪಾಲಕರ ಗುರಿ ಎಂದು ಸಿಬ್ಬಂದಿ ಮಾದ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ವೀಕ್ಷಣೆಗೆಂದು ಗ್ರಂಥಾಲಯಕ್ಕೆ ತೆರಳಿದ್ದಾಗ ಸಾರ್ವಜನಿಕ ಶಾಖಾ ಗ್ರಂಥಾಲಯದ ಸಿಬ್ಬಂದಿ ಹೇಳುತ್ತಾ ದಿನ ನಿತ್ಯವು ಗ್ರಂಥ ಪಾಲಕರು ತಮ್ಮ ಸ್ವಂತ ಖರ್ಚಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದು, ಸರಕಾರ ಒಂದು ಉತ್ತಮ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ಓದುಗರಿಗೆ ಅನುಕೂಲ ಮಾಡಿಕೊಡಬೇಕು ಹಾಗೆಯೇ ಗ್ರಂಥ ಪಾಲಕರು ಸಾರ್ವಜನಿಕರ ಮತ್ತು ಓದುಗರ ಜೊತೆ ಒಳ್ಳೆಯ ಸಂಪರ್ಕ ಹೊಂದಿದ್ದು, ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸುವ ಪಣ ತೊಟ್ಟಿದ್ದಾರೆ. ಮೇಲ್ದರ್ಜೆಗೇರಿಸಲು ಪುರಸಭೆ,ಇನ್ನಿತರೆ ಇಲಾಖೆಗಳು ಸಹಕರಿಸಿ ಇಲ್ಲಿರುವ ಸಣ್ಣ ಪುಟ್ಟ ಸಮಸ್ಯೆಗಳಿಗೆ ಸ್ಪಂದಿಸಿ, ಸಾರ್ವಜನಿಕ ಶಾಖಾ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಲು ಸಹಕರಿಸಬೇಕು ಎಂದರು. ಹಾಗೆಯೇ ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅವಶ್ಯಕವಿದ್ದು, ಇನ್ನೂ ಹೆಚ್ಚಿನ ಜ್ಞಾನಕ್ಕಾಗಿ ಕಂಪ್ಯೂಟರ್ ಕೋಣೆ ನಿರ್ಮಿಸಿ ಓದುಗರ ತಾಂತ್ರಿಕ ಜ್ಞಾನ ಪರೀಕ್ಷೆಗೆ ಗಣಕ ಯಂತ್ರಗಳನ್ನು ಒದಗಿಸಿ ಓದುಗರ ಜ್ಞಾನಾರ್ಜನೆಗೆ ಅನುಕೂಲ ಮಾಡಬೇಕು ಎಂಬುದು ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಒಂದು ಕನಸಿನ ಮಾತಾಗಿದೆ. ಹಾಗೂ ಗ್ರಂಥಾಲಯದ ರಕ್ಷಣೆಯ ವಿಷಯವಾಗಿ ಮತ್ತು ಮಹಿಳೆಯರ ರಕ್ಷಣೆಯ ಹಿತದೃಷ್ಟಿಯಿಂದ ಸಿಸಿ ಕ್ಯಾಮರಾ ಒದಗಿಸಿ ಎಂಬುದು ಇಲ್ಲಿನ ಆಡಳಿತ ವರ್ಗದ ಬೇಡಿಕೆಯಾಗಿದೆ. ಮುಂಬರುವ ದಿನಮಾನಗಳಲ್ಲಿ ಅಧಿಕಾರಿಗಳು,ರಾಜಕಾರಣಿಗಳು ಗ್ರಂಥ ಪಾಲಕರ,ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ವಿದ್ಯಾರ್ಥಿಗಳ ಕನಸು ನನಸಾಗುತ್ತಾ ಅಥವಾ ಕನಸು ಕನಸಾಗಿಯೇ ಉಳಿಯುತ್ತಾ ಎಂದು ಕಾದು ನೋಡಬೇಕಿದೆ.
ಹೇಳಿಕೆ 1
ತಾತ್ಕಾಲಿಕವಾಗಿ ಹೊರಗಿನ ಕುಡಿಯುವ ನೀರು
ಒದಗಿಸುತ್ತಿದ್ದೇವೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಅಧಿಕಾರಿಗಳು ಸಹಕರಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಹಲವು ವಿದ್ಯಾರ್ಥಿಗಳು ಓದುತ್ತಿದ್ದು,ಆ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಜ್ಞಾನಕ್ಕಾಗಿ ಹಾಗೂ ಸ್ಪರ್ಧಾತ್ಮಕ ತಯಾರಿ ನಡೆಸಲು ಹೆಚ್ಚಿನ ಪುಸ್ತಕದ ಅವಶ್ಯವಿದೆ.
ಸೊಮಶೇಖರ್ ಎಸ್. ಹೆಳವರ ಗ್ರಂಥಾಲಯ ಸಹಾಯಕರು ಮಸ್ಕಿ
ಹೇಳಿಕೆ 2
ಐಎಎಸ್, ಐಪಿಎಸ್,ಕೆ.ಎ.ಎಸ್, ಎಫ್. ಡಿ. ಎ , ಎಸ್. ಡಿ. ಎ ಗೆ ಹಾಗೂ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆ ಗೆ ಸಂಭಂಧಿಸಿದ ಪುಸ್ತಕಗಳನ್ನು ಒದಗಿಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಸೌಭಾಗ್ಯ ವಿದ್ಯಾರ್ಥಿನಿ ಮಸ್ಕಿ,
Tags
ಜಿಲ್ಲಾ ಸುದ್ದಿಗಳು