ಅನ್ನದಾಸೋಹ ಎಂಬುದು ಶಿವನ ಪ್ರಸಾದವಿದ್ದಂತೆ ;ರಾಜುಗೌಡ ಅಭಿಮಾನಿ ಬಳಗದಿಂದ ಅನ್ನ ಸಂತರ್ಪಣೆ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಹುಣಸಗಿ, ಜನವರಿ 22 : ಅನ್ನ ದಾಸೋಹ ಎಂಬುದು ಶಿವನ ಪ್ರಸಾದವಿದ್ದಂತೆ ಅನ್ನವನ್ನು ಯಾರೂ ಕೆಡಿಸಬಾರದು ಪ್ರತಿಯೊಬ್ಬರೂ ಅನ್ನ ಸಂತರ್ಪಣೆ ಮಾಡುವ ಮೂಲಕ ಬಡವರು ನಿರ್ಗತಿಕರಿಗೆ ಆಶ್ರಯವಾಗಬೇಕೆಂದು ವಿನೋದ ನಾಯಕ ದೊರೆ ಹೇಳಿದರು. 

ರಾಜುಗೌಡ ಅಭಿಮಾನಿ ಬಳಗದ ವತಿಯಿಂದ ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಕೆ ಶಿವಕುಮಾರ ಸ್ವಾಮಿಗಳ ನಾಲ್ಕನೇ ವರ್ಷದ ಪುಣ್ಯತಿಥಿ ಅಂಗವಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ ರೋಗಿಗಳಿಗೆ ಹಾಗೂ ಎ.ಪಿ.ಎಂ.ಸಿ ಆವರಣದಲ್ಲಿರುವ ಜೋಪಡಿಯ ನಿವಾಸಿಗಳಿಗೆ ಅನ್ನ ಸಂತರ್ಪಣೆ ಮಾಡಿ ಇಂದು ಜಗತ್ತಿನಲ್ಲಿ ಎಷ್ಟೋ ಜನರು ಅನ್ನವನ್ನು ಕಾಣದೇ ಬಿದಿಯಲ್ಲಿ ಉಪವಾಸ ಇರುವ ಸ್ಥಿತಿಯನ್ನು ಕಾಣುತ್ತೇವೆ ಅಂಥವರಿಗೆ ನಮ್ಮ‌ ಕೈಲಾದಷ್ಟು ಸಹಾಯ ಮಾಡುವುದರೊಂದಿಗೆ ಉಳ್ಳವರು ಸ್ವಲ್ಪ ಮಟ್ಟಿಗಾದರೂ ಅನ್ನ ದಾಸೋಹವನ್ನು ಮಾಡಿ ತಮ್ಮ ಸೇವೆಯನ್ನು ಬಡವರಿಗೆ ಮೀಸಲಿಡಬೇಕು ಜೊತೆಗೆ ತುಮಕೂರಿನ ಸಿದ್ದಗಂಗಾ ಶ್ರೀಗಳು ಹೇಗೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಜೀವನವನ್ನೇ ಕಳೆದು ಹೋಗಿದ್ದು ಅನ್ನ ದಾಸೋಹವೆಂಬುದು ಶಿವನ ಪ್ರಸಾದವಿದ್ದಂತೆ ಹಾಗಾಗಿ ಪ್ರತಿಯೊಬ್ಬರೂ ಸಿದ್ದಗಂಗಾ ಶ್ರೀಗಳ ಹಾದಿಯಲ್ಲಿ ನಡೆಯೊಣ ಮತ್ತು ಯಾರು ಬಡವರು ನಿರ್ಗತಿಕರು ಇರುತ್ತಾರೋ ಅಂಥವರಿಗೆ ಒಂದೊತ್ತಿನ ಊಟವನ್ನು ನೀಡುವ ಮೂಲಕ ಸಿದ್ಧಗಂಗಾ ಶ್ರೀಗಳು ಹಾಕಿಕೊಟ್ಟಂತಹ ಮಾರ್ಗದಲ್ಲಿ ನಡೆದುಕೊಂಡು ಹೋಗೊಣ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಆನಂದ ಬಾರಿಗಿಡದ, ರುದ್ರೇಶ ದೇಸಾಯಿ, ನೀಲಕಂಠ ಚಿಂಚೋಳಿ, ಸಂಗನಗೌಡ ಕೊಣ್ಣೂರು, ಮಹೇಶ ಸ್ಥಾವರಮಠ, ಮಂಜುನಾಥ ಗುಡಿಹಾಳ ಸೇರಿದಂತೆ ಇತರರು ಇದ್ದರು.   

Post a Comment

Previous Post Next Post