UDAYAVANI NEWS
ಮಸ್ಕಿ,ಜನವರಿ 21 : ತಾಲೂಕಿನ ಮೆದಿಕಿನಾಳದಲ್ಲಿ ಗಜಾನನ ಯುವಕ ಮಂಡಳಿ ಮೆದಿಕಿನಾಳ ಗ್ರಾಮದ ವತಿಯಿಂದ ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವುಕುಮಾರ ಸ್ವಾಮೀಜಿಯ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯ ನಿಮಿತ್ತ ವಿವಿಧ ಬೀದಿಗಳಲ್ಲಿ ಫೋಟೋ ಮೆರವಣಿಗೆ ಮಾಡಲಾಯಿತು.
ಗಜಾನನ ಯುವಕ ಮಂಡಳಿ ಮೆದಿಕಿನಾಳ ಗ್ರಾಮದ ವತಿಯಿಂದ ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಸಿದ್ದಗಂಗಾ ಸ್ವಾಮೀಜಿಯ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯ ನಿಮಿತ್ತ ಗ್ರಾಮ ಪಂಚಾಯಿತಿ ಯಿಂದ ಆರಂಭವಾಗಿ ಅರಳಿಕಟ್ಟೆ,ಬಸವೇಶ್ವರ ಕಟ್ಟೆ,ಹಳ್ಳದ ಕಟ್ಟೆ,ಸೇರಿದಂತೆ ವಿವಿಧ ಬೀದಿಗಳಲ್ಲಿ ಫೋಟೋ ಮೆರವಣಿಗೆಯ ಮೂಲಕ ಭಕ್ತಿಯಿಂದ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಗಜಾನನ ಯುವಕ ಮಂಡಳಿ ಸದಸ್ಯರು, ಭಕ್ತರು ,ಸಾರ್ವಜನಿಕರು ಸೇರಿದಂತೆ ಮಕ್ಕಳು ಇದ್ದರು.
Tags
ಜಿಲ್ಲಾ ಸುದ್ದಿಗಳು