ನಿಜ ಶರಣ ಅಂಬಿಗರ ಚೌಡಯ್ಯ ರವರ ಜನ್ಮ ದಿನಾಚರಣೆಯನ್ನು ತಾಲೂಕ ಆಡಳಿತದ ವತಿಯಿಂದ ಆಚರಣೆ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಜನವರಿ 21 : ಪಟ್ಟಣದ ನಿಜ ಶರಣ ಅಂಬಿಗರ ಚೌಡಯ್ಯ ವೃತ್ತದ ಬಳಿ, ತಹಶೀಲ್ದಾರ ಕಛೇರಿ ಬಿಜೆಪಿ ಕಛೇರಿಯಲ್ಲಿ ತಾಲೂಕಿನ ವಿವಿಧ ಕಛೇರಿಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ರವರ ಜನ್ಮ ದಿನಾಚರಣೆಯನ್ನು ತಾಲೂಕ ಆಡಳಿತದ ವತಿಯಿಂದ ಹೂಮಾಲೆ ಹಾಕಿ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.

ಪಟ್ಟಣದ ಗಚ್ಚಿನಮಠದ ಮುಂಭಾಗದ ದಲ್ಲಿ
ಏರ್ಪಡಿಸಿದ್ದ ಶಿವಶರಣ ಅಂಬಿಗರ ಚೌಡಯ್ಯರ 
ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹನ್ನೆರಡನೇ ಶತಮಾನದ ವಚನಕಾರರಲ್ಲಿ ಶಿವಶರಣ ಅಂಬಿಗರ ಚೌಡಯ್ಯ ವಿಭಿನ್ನ ರೀತಿಯ ವಚನ ಸಾಹಿತ್ಯಕ್ಕೆ ಹೆಗ್ಗಳಿಕೆ ಪಡೆದ ಮಹಾನ್ ಸಂತ ಎಂದು ಶಾಸಕ ಆರ್. ಬಸವನಗೌಡ ತುರುವಿಹಾಳ 
ಹೇಳಿದರು. 
ನಂತರ ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯಲ್ಲಿ ಸ್ಥಾನ ಪಡೆದು ಕಾಯಕವೇ ಕೈಲಾಸ ಎಂಬ ತತ್ವದ ಅಡಿಯಲ್ಲಿ ನಡೆದು ಬಂದ ವ್ಯಕ್ತಿ ಹಾಗೂ ಆಚಾರ-ವಿಚಾರಗಳಲ್ಲಿ ದ್ವಂದ್ವ ಬದುಕನ್ನು ಸಾಗಿಸುವವರ ವಿರುದ್ಧ ಧ್ವನಿ ಎತ್ತಿದ ಮಹಾನ್ ಚೇತನ ಎಂದರು. ಅಂಬಿಗರ ಚೌಡಯ್ಯ ಭಾವಸಾಗರವನ್ನು ದಾಟಿಸುವ ಅಂಬಿಗ ಎಂಬ ಹೆಗ್ಗಳಿಕೆ ಪಡೆದ ಮಹಾನ್ ವ್ಯಕ್ತಿ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಬದುಕು ಹಸನಾಗಿಸಿಕೊಳ್ಳಬೇಕಿದೆ ಎಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ರವರು ಹೇಳಿದರು. 
ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಗಳನ್ನು ಸಲ್ಲಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಇಡೀ ಸಮಾಜದ ವ್ಯವಸ್ಥೆ ಹಾಗೂ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಪಣತೊಟ್ಟ ಅದೆಷ್ಟು ಮಹನೀಯರು ತಮ್ಮ ಜೀವನವನ್ನು ಧಾರೆ ಎರೆದಿದ್ದಾರೆ. ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಸರಳವಾದ ವಚನಗಳ ಹಾಗೂ ಆಡು ಭಾಷೆಯಲ್ಲಿ ಸಮಾಜದ ಏಳಿಗೆಗಾಗಿ ಶ್ರಮಿಸಿದವರಲ್ಲಿ ಅಂಬಿಗರ ಚೌಡಯ್ಯ ಸಹ ಒಬ್ಬರು. ಇವರು ತಮ್ಮ ಕಾಯಕದ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದಂತಹ ಮಹಾಪುರಷ ಎಂದು ಬಣ್ಣಿಸಿದರು. 

ಕೊನೆಯದಾಗಿ ನಾಗಭೂಷಣ ಬಾರಿಕೇರ
ಮಾತನಾಡಿ, ಅಂಬಿಗರ ಚೌಡಯ್ಯ ಅವರು ತಾನು ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲ್ಯವುಳ್ಳವ ಎಂದು ಹೇಳಿಕೊಂಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ 
ರಾಜನಾಯಕ ಸಮಾಜದ ಅಧ್ಯಕ್ಷ
ನಾಗಭೂಷಣ ಬಾರಿಕೇರ,ಮಂಜುನಾಥ ನಂದಿಹಾಳ,ಅಪ್ಪಾಜಿ ಗೌಡ,ಆಂದಾನಪ್ಪ ಗುಂಡಳ್ಳಿ, ಸಿದ್ದನಗೌಡ ಮಾಟೂರು,ಬಸವರಾಜ,ಮಲ್ಲಯ್ಯ ಮುರಾರಿ , ಭರತ್ ಕುಮಾರ,ಆಂಜನೇಯ ಜೀರಾಳಾ,ಮಲ್ಲಪ್ಪ ಬಾರಿಕೇರ್,ಮುದುಕಪ್ಪ ಸುಂಕನೂರು,ಶರಣಬಸವ ಸೊಪ್ಪಿಮಠ,ಬಸವರಾಜ ಚೌಡಲಿ ಪಾಮನಕೆಲ್ಲೂರೂ,ಅಮರೇಶ್ ಹುನುಕುಂಟಿ,ಹನುಮಂತ ಸೃಷ್ಟಿ,ಬಸವರಾಜ ಚಿತ್ತರಿಗಿ,ಮಲ್ಲಯ್ಯ ಕುರುಕುಂದಿ,ಪರಮೇಶ್ವಪ್ಪ ಸಾನಬಾಳ,ದುರ್ಗಪ್ಪ ಜಲಗಾರ,
ರವಿಕುಮಾರ್JCB, ನರಸಪ್ಪ ಕಬ್ಬೇರ,ಶಿವು ಸಾನಬಾಳ,ಹನುಮಂತ ಸಾನಬಾಳ,ಅಶೋಕ ನಾಯಕ,
ಮೌನೇಶ್ ಕಬ್ಬೇರ,ಶಿವಪ್ಪ ಲಿಂಗಸಗೂರು ಸೇರಿದಂತೆ ತಾಲೂಕ ಆಡಳಿತದ ಷಣ್ಮುಖಪ್ಪ ಮಾನವಿ ಕಂದಾಯ ಇಲಾಖೆ, ಪುರಸಭೆ ಇಲಾಖೆ ಅಧಿಕಾರಿಗಳು ಮತ್ತು ಗಂಗಾಮತಸ್ಥ ಸಮಾಜದ ಬಂಧುಗಳು ಇದ್ದರು.

Post a Comment

Previous Post Next Post