UDAYAVANI NEWS
ಮಸ್ಕಿ, ಜನವರಿ 22 : ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ಭಾನುವಾರ ಪಟ್ಟಣದ ಗಾಂಧಿನಗರದ ಅಲೆಮಾರಿ ಜನಾಂಗದ ಕಾಲೋನಿಯಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್ ಚಾಲನೆ ನೀಡಿದರು.
ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ಗಾಂಧಿನಗರದ ಅಲೆಮಾರಿ ಜನಾಂಗದ ಕಾಲೋನಿಯಲ್ಲಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ ಜನಪ್ರಿಯ ನಾಯಕರಾದ ಪ್ರತಾಪಗೌಡ ಪಾಟೀಲ್ ಮಾಜಿ ಶಾಸಕರು ಮನೆ ಮನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಧನೆಯ ಕರಪತ್ರಗಳನ್ನು ನೀಡಿ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ಮೊಬೈಲ್ ಮೂಲಕ ಮಿಸ್ ಕಾಲ್ ಕೊಡುವ ಜೊತೆಗೆ ಸದಸ್ಯತ್ವ ನೊಂದಣಿ ಮಾಡಿಕೊಳ್ಳಿ ಎಂಬ ಸಂದೇಶವನ್ನು ಸಾರುತ್ತಾ, ಸದಸ್ಯತ್ವವನ್ನು ಮಾಡಿಕೊಳ್ಳಲು ಕರೆ ಕೊಟ್ಟು ವಿಜಯ ಸಂಕಲ್ಪ ಅಭಿಯಾನವನ್ನು ಯಶಸ್ವಿಗೊಳಿಸಲಾಯಿತು.
ಈ ಸಂದರ್ಭದಲ್ಲಿ
ಬಿಜೆಪಿ ಹಿರಿಯ ಮುಖಂಡರಾದ ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ್, ಅಂದಾನಪ್ಪ ಗುಂಡಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ದೇಶಪಾಂಡೆ, ಜಿಲ್ಲಾ ಉಪಾಧ್ಯಕ್ಷರಾದ ಅಪ್ಪಾಜಿಗೌಡ ಪಾಟೀಲ್ ಮಸ್ಕಿ, ಮಂಡಲ ಬಿಜೆಪಿ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಯುವ ಮುಖಂಡರಾದ ಪ್ರಸನ್ನ ಪಾಟೀಲ್, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಮತಿ ಶಾರದ ರಾಥೋಡ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಶರಣಬಸವ ವಕೀಲ ಉಮಲೂಟಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ ಮಸ್ಕಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ನಾಗರಾಜ, ಪಕ್ಷದ ಮುಖಂಡರಾದ ದೊಡ್ಡಪ್ಪ ಕಡಬೂರು, ಬಸಪ್ಪ ಬ್ಯಾಳಿ, ಪಂಪಣ್ಣ ಗುಂಡಳ್ಳಿ, ರಾಜ ನಾಯಕ್, ಅಭಿಜಿತ್ ಮಾಲಿ ಪಾಟೀಲ್,ಗವಿಸಿದ್ದಪ್ಪ ಸಾಹುಕಾರ, ವೆಂಕನಗೌಡ ಹಡಗಲಿ, ಮೋರ್ಚಾ ಅಧ್ಯಕ್ಷರಾದ ಶರಣೆಗೌಡ ಪೊಲೀಸ್ ಪಾಟೀಲ್, ಶ್ರೀಮತಿ ಪ್ರಮೀಳಾ,ಶಾಂತಮ್ಮ ಎಸ್ಸಿ ಮೋರ್ಚಾ ಅಧ್ಯಕ್ಷರಾದ
ಬಾಲಸ್ವಾಮಿ ಜಿನ್ನಾಪೂರ, ಪುರಸಭೆ ಸದಸ್ಯರಾದ ಚೇತನ್ ಪಾಟೀಲ್, ಸೇರಿದಂತೆ ಇನ್ನಿತರೇ ಬಿಜೆಪಿ ಮುಖಂಡರು ಹಾಜರಿದ್ದರು.
Tags
ಜಿಲ್ಲಾ ಸುದ್ದಿಗಳು