UDAYAVANI NEWS
ಮಸ್ಕಿ, ಜನವರಿ 04 : ಇಂದು ಪ್ರಕೃತಿ ಫೌಂಡೇಶನ್ (ರಿ) ಮಸ್ಕಿ ವತಿಯಿಂದ ಬಳಗಾನೂರಿನ ಶ್ರೀ ಮಾರುತಿದೇವಸ್ಥಾನದ ಹತ್ತಿರ ವಿಜಯಪುರದ ಜ್ಞಾನ ಯೋಗಾಶ್ರಮದ ಅನಂತ ಚೇತನ, ಶತಮಾನದ ಸಂತ, ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಅಗಲಿಕೆಯಿಂದ ಅಪಾರ ನೋವುಂಟಾಗಿದೆ. ಶ್ರೀಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತುಸಲ್ಲಿಸಲಾಯಿತು.
ಶ್ರೀಗಳು 82 ವರ್ಷ ಗಳ ಕಾಲ ಭಕ್ತಾದಿಗಳ ಜೊತೆಯಲ್ಲಿ ನಿಷ್ಕಲ್ಮಶ ನಗುವಿನ ಮೌನ ಯೋಗಿ ಶ್ರೀಗಳ ನೆನಪಿಗಾಗಿ 82 ಸಸಿ ಭಕ್ತರಿಗೆ ನೀಡಿ ಈ ಸಸಿಯನ್ನು ನೆಟ್ಟು ಪಾಲನೆ ಪೋಷಣೆ ಮಾಡಿ ಬೆಳೆಸಿ ಸಕಲವನ್ನು ತೊರೆದು ಆಧ್ಯಾತ್ಮದ ಆಗಸದಲ್ಲಿ ದೇವರಾದ ಮಹಾತ್ಯಾಗಿ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿ ಲಕ್ಷಾಂತರ ಭಕ್ತಾದಿಗಳ ಕಣ್ಣಿನಿಂದ ದೂರವಾಗಿದ್ದಾರೆ. ಆದರೆ ಲಕ್ಷಾಂತರ ಭಕ್ತರ ಹೃದಯದಲ್ಲಿ ಸದಾ ಶ್ರೀಗಳು ಜೀವಂತ. ಭಗವಂತನಲ್ಲಿ ಲೀನ ಮತ್ತೆ ಈ ಭರತ ಮಾತೆಯ ಮಡಿಲಲ್ಲಿ ಬನ್ನಿ ಅಪ್ಪಾಜಿ ಎಂದು ಈ ಸಂದರ್ಭದಲ್ಲಿ ಪ್ರಕೃತಿ ಫೌಂಡೇಶನ್ (ರಿ) ಮಸ್ಕಿಸಂಸ್ಥಾಪಕ ಅಧ್ಯಕ್ಷರು ಶಿವಮೂರ್ತಿ ಗದ್ಗಿಮಠ ಮಾತನಾಡಿದರು.
ಇದೇ ಸಂದರ್ಭದಲ್ಲಿ
ರಂಗನಾಥ ಪೂಜಾರಿ,ಬಸವರಾಜ್ ಎಸ್,ಶರಣಪ್ಪ ಮರಡ್ಡಿ,ಸೂರ್ಯನರಸಿಂಹ,
ಬಿ ಮೌನೇಶ್,ಮಂಜುನಾಥ್ ತಡಕಲ್, ಹನುಮತ,ದೀಪಕ್ ಜೈನ್,ಪಾಂಡುರಂಘ, ಸಂದೀಪ,ಯಂಕಣ್ಣಗೌಡ,ರಾಚಪ್ಪಕಲ್ಲೂರ್,ಶರಣಪ್ಪ ಎಸ್.ರಮೇಶ್, ಅಂದನಪ್ಪ, ಹಾಗೂ ಭಕ್ತಾದಿಗಳು ಮತ್ತು ಪ್ರಕೃತಿ ಫೌಂಡೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು