UDAYAVANI NEWS
ಮಸ್ಕಿ, ಜನವರಿ 05 : ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಯುವಕರನ್ನು ಶಾಸಕ ಬಸನಗೌಡ ತುರುವಿಹಾಳ ಕಡೆಗಣಿಸಿದ್ದಾರೆ ಎಂದು ಹುಸೇನಪ್ಪ ನಾಯಕ ಗುಂಡಾ
ಪತ್ರಿಕೆ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ನಿಷ್ಠಾವಂತ ಕಾಂಗ್ರೇಸ್ ಕಾರ್ಯಕರ್ತರನ್ನು ಬಳಸಿಕೊಂಡು ಗೆಲುವು ಸಾಧಿಸಿದ ಆರ್.ಬಸನಗೌಡ ತುರುವಿಹಾಳ ಅವರು ಈಗ ನಿಷ್ಠಾವಂತ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳದೆ ದೊಡ್ಡ ವ್ಯಕ್ತಿಗಳ ಮಾತುಗಳೇ ವೇದ ಎಂದು ತಿಳಿದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಯುವಕರನ್ನು ಕಡೆಗಣಿಸಿದ್ದಾರೆ ಎಂದು ಹುಸೇನಪ್ಪ ನಾಯಕ ಗುಂಡಾ
ಪತ್ರಿಕೆ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸುವುದಲ್ಲದೆ,ಮಸ್ಕಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಗಲು - ರಾತ್ರಿ ಎನ್ನದೇ ದುಡಿದವರನ್ನು ಕಡೆಗಣಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮಸ್ಕಿ ವಿಧಾನಸಭೆಯಲ್ಲಿ ಒಡೆದ ಮನೆಯಂತಾಗಿದೆ. ಇದರಿಂದ ಮುಂದೆ ಜರುಗಲಿರುವ 2023 ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೋಲು ಕಾಣುವುದು ಖಚಿತ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Tags
ಜಿಲ್ಲಾ ಸುದ್ದಿಗಳು