ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ದಲ್ಲಿಶ್ರೀ ಸಿದ್ಧೇಶ್ವರ ಸ್ವಾಮೀಜಿ ನೆನೆದು ಭಾವುಕರಾದ : ಪ್ರತಾಪ್ ಗೌಡ ಪಾಟೀಲ್

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಜನವರಿ 04 : ಪಟ್ಟಣದ ದೈವದ ಕಟ್ಟೆ ಹತ್ತಿರ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀಶ್ರೀಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಭಾವ ಚಿತ್ರಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಗೌರವಿಸಲಾಯಿತು.
ಶತಮಾನದ ಸಂತ ನಡೆದಾಡುವ ದೇವರು 
ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷ,
ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀಶ್ರೀಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರು ಇಂದು ನಾಡಿನಾದ್ಯಂತ ಅಪಾರ ಭಕ್ತವರ್ಗವನ್ನು ಅಗಲಿ ಲಿಂಗೈಕ್ಯರಾಗಿ ಅಮರರಾಗಿದ್ದಾರೆ ತಮ್ಮ ಪ್ರವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಶ್ರೀಗಳು ಸಾಕಷ್ಟು ಶ್ರಮಿಸಿದ್ದರು. ಎಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದರು.

ಪಟ್ಟಣದ ದೈವದ ಕಟ್ಟೆ ಹತ್ತಿರ ಸಿದ್ದೇಶ್ವ ಸ್ವಾಮೀಜಿಯವರ ಭಾವಪೂರ್ಣ ಶ್ರದ್ಧಾಂಜಲಿ 
ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು
ಮನುಕುಲದ ಉದ್ಧಾರಕ್ಕೆ ಜಾತಿ, ಮತ, ಪಂಥಗಳನ್ನು ಮೀರಿ ಅಧ್ಯಾತ್ಮ ಜೀವಿಯಾಗಿ ಬಾಳಲು ತಿಳಿಸುವ ಅವರ ಶೈಲಿಗೆ ಅವರೇ ಸಾಟಿ. ಸ್ವತ್ತಾಗಿದ್ದ ತತ್ವಜ್ಞಾನವನ್ನು ಸರಳ, ಸುಂದರವಾಗಿ ನಿರೂಪಿಸುತ್ತ ಸಾಗುವ ಶ್ರೀಗಳವರು ಭಾಷೆಯನ್ನು ಬಳಸುವ ವಿಧಾನ ವಿಶಿಷ್ಟವಾದುದು. ಅಲ್ಲಿಆತ್ಮೀಯತೆಯ ಲೇಪನವಿರುತ್ತದೆ, ಅದು ಅಂತರಾಳದಿಂದ ಬಂದ ಆತ್ಮೀಯತೆ ಇರುತ್ತದೆ. ಹೀಗಾಗಿ ಅವರ ಹಿತವಚನ ನೇರವಾಗಿ ಹೃದಯಕ್ಕೆ ಸ್ಪಂದಿಸುತ್ತದೆ. ತ್ಯಾಗಮಯ ಜೀವನ, ಸದಾಚಿಂತನೆಯ ಮನೋಭಾವ, ವರ್ಷವಿಡಿ ಪ್ರವಚನಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕಾಗಿ ದುಡಿಯುತ್ತಿರುವ ಮಾತೃ ಹೃದಯದ ಮಹಾನುಭಾವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಎಂದು ಭಾವುಕ ರಾದರು.


ಈ ಸಂದರ್ಭದಲ್ಲಿ
ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಬಾಳೆ ಕಾಯಿ ಸೂಗಣ್ಣ,ಶರಣಯ್ಯ ಸೊಪ್ಪಿಮಠ ಪುರ ಸಭೆ ಸದಸ್ಯರು,ಸೇರಿದಂತೆ ಸಿದ್ದೇಶ್ವರ ಸ್ವಾಮೀಜಿ ಭಕ್ತರು ಇದ್ದರು.

Post a Comment

Previous Post Next Post