ಕೆ ಆರ್ ಎಸ್ ಪಕ್ಷದ ಕಛೇರಿಯಲ್ಲಿ 74 ನೇ ಗಣರಾಜ್ಯೋತ್ಸವ ಆಚರಣೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಸಿಂಧನೂರು, ಜನವರಿ 26 : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಯಚೂರು ಜಿಲ್ಲಾ ಘಟಕ ಹಾಗೂ ಸಿಂಧನೂರು ತಾಲೂಕ ಘಟಕದ ವತಿಯಿಂದ ಸಿಂಧನೂರು ನಗರದ ಪಕ್ಷದ ಕಚೇರಿಯಲ್ಲಿ 74 ನೇ ಗಣ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. 

ಕಾರ್ಯಕ್ರಮದಲ್ಲಿ ಕೆ ಆರ್ ಎಸ್ ಪಕ್ಷದ ರಾಯಚೂರು ಜಿಲ್ಲಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ, ಬಿ. ಆರ್ ಅಂಬೇಡ್ಕರ್ ಅವರು ಈ ದೇಶದ ಸಮಗ್ರ ಅಭಿವೃದ್ಧಿಗಾಗಿ,ದೇಶದಲ್ಲಿ ಸಾಮಾಜಿಕ ,ಆರ್ಥಿಕ,ಶೈಕ್ಷಣಿಕ ,ರಾಜಕೀಯ ವ್ಯವಸ್ಥೆಯನ್ನು ಬದಲಿಸಲು ,ಕಾರ್ಯಾಂಗ ಶಾಸಕಾಂಗ ನ್ಯಾಯಾಂಗದ ,ಉಳಿವಿಗಾಗಿ ಒಂದು ಅಸ್ತ್ರವನ್ನು ಕೊಟ್ಟಿದ್ದಾರೆ ಅದುವೇ ಭಾರತ ರಾಷ್ಟ್ರ ಸಂವಿಧಾನ ಇದರ ಸದುಪಯೋಗ ರಾಷ್ಟ್ರದ ಜನತೆ ಪಡೆದು ಮೂಲಭೂತ ಹಕ್ಕುಗಳು,ರಾಜ್ಯ ನಿರ್ದೇಶಕ ತತ್ವಗಳು, ಕಾಯಿದೆ ಕಾನೂನುಗಳ ಉಳಿವಿಗಾಗಿ ಶ್ರಮಿಸಬೇಕು ,ಪ್ರಸ್ತುತ ಸಮಾಜದಲ್ಲಿ ಅನ್ಯಾಯ , ಆಕ್ರಮ ಬ್ರಷ್ಟಚಾರ ,ಜನ ಸಾಮಾನ್ಯರ ಮೇಲೆ ದಬ್ಬಾಳಿಕೆ, ದೌರ್ಜನ್ಯ ,ನಡೆಯುತ್ತಿದೆ ಇದನ್ನು ಬದಲಿಸಲು ಪ್ರತಿಯೊಬ್ಬರೂ ಸಂವಿಧಾನದ ಮೂಲ ಅಂಶಗಳನ್ನು ತಿಳಿಯಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು .. 74ನೇ ಗಣರಾಜ್ಯೋತ್ಸವ ಆಚರಣೆ ವಿಶಿಷ್ಟವಾಗೀ ಆಚರಿಸಲು ಪಕ್ಷದ ತಾಲೂಕ ಪದಾಧಿಕಾರಿಗಳು ಸೇರಿ ಸಿಂಧನೂರಿನ ಆಶ ಕಿರಣ ಅನಾಥ ಮಕ್ಕಳ ಹಾಗೂ ಬಡ ಮಕ್ಕಳ ವಸತಿ ನಿಲಯಕ್ಕೆ ಭೇಟಿ ಕೊಟ್ಟು ಅಲ್ಲಿನ ಮಕ್ಕಳ ಜೊತೆ ಚರ್ಚಿಸಿ ,ವಸತಿ ನಿಲಯಕ್ಕೆ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಕೈಲಾದ ಸಹಾಯ ಮಾಡಲಾಗುತ್ತದೆ ,ಎಂದು ಭರವಸೆ ಕೊಟ್ಟು ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು ನೀಡಿ ಶುಭ ಹಾರೈಸಿದರು.
ತಾಲೂಕ ಅಧ್ಯಕ್ಷ ಚನ್ನಬಸವ ಎಸ್ ಮಾತನಾಡಿ ಪ್ರಸ್ತುತ ಸಮಾಜದಲ್ಲಿನ ಬ್ರಷ್ಟ ರಾಜಕಾರಣಿಗಳು ,ಬ್ರಷ್ಟ ಆಡಳಿತ ಅಧಿಕಾರಿಗಳು ಸಮಾಜದ ಸುವ್ಯವಸ್ಥೆಯ ಅದಗೆಡಿಸಿ ದೇಶದ ಕಾಯ್ದೆ ಕಾನೂನುಗಳ ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆ ,ಇಂತಹ ವ್ಯವಸ್ಥೆಯನ್ನು ಕೆತ್ತೆಸೆಯಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ದಿನನಿತ್ಯ ರಾಜ್ಯದಾದ್ಯಂತ ಹಲವಾರು ಜಿಲ್ಲಾ ಕೇಂದ್ರಗಳಲ್ಲಿ ತಾಲೂಕ ಕೇಂದ್ರಗಳಲ್ಲಿ ಸರಕಾರಿ ಇಲಾಖೆಯಲ್ಲಿ ಆಗುತ್ತಿರುವ ಅನ್ಯಾಯ, ಮೋಸ,ದಬ್ಬಾಳಿಕೆಯನ್ನು ತಡೆಯುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿಸಂದರ್ಭದಲ್ಲಿ
 ತಾಲೂಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರಣಪ್ಪ ಗೋರೆಬಾಳ,ತಾಲೂಕ ಉಪಾಧ್ಯಕ್ಷ ಶರಣಪ್ಪ ಹಂಚಿನಾಳ ,ಯುವ ಘಟಕದ ಅಧ್ಯಕ್ಷ ಸ್ವಾಮಿ ವಿವೇಕಾನಂದ,ಸಿದ್ರಾಮಪ್ಪ ಎಲೇಕೂಡ್ಲಿಗಿ,ನಾಗರಾಜ , ಹುಸೇನಪ್ಪ ಬಾದರ್ಲಿ, ದ್ಯಾವಣ್ಣ ಪುಲದಿನ್ನಿ , ಅಭಿಷೇಕ್ ಮತ್ತಿತರರು ಇದ್ದರು.

Post a Comment

Previous Post Next Post