ಹೈ ಲೈಫ್ ನಿಂದ ವಿಶಿಷ್ಟ ಕಲಾಕೃತಿ, ಆಭರಣಗಳ ಪ್ರದರ್ಶನ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಬೆಂಗಳೂರು, ಜನವರಿ 26 : ಭಾರತದ ಉತ್ತಮ ಫ್ಯಾಷನ್ ಪ್ರಿಯರ ವಿಶಿಷ್ಟ ವಸ್ತ್ರಾಭರಣಗಳ ಸಂಗ್ರಹಗಳ ಪ್ರದರ್ಶನ ಹೈ ಲೈಫ್ ನಿಂದ ಜನವರಿ 26 ರಿಂದ 28 ರವರೆಗೆ ಲಲಿತ ಅಶೋಕ್ ಹೋಟೆಲ್ ನಲ್ಲಿ ಆಯೋಜಿಸಲಾಗಿದೆ.   

ವಿನೂತನ ವಿನ್ಯಾಸದ ವಸ್ತ್ರಾಭರಣಗಳ ಪ್ರದರ್ಶನ ಇದಾಗಿದ್ದು, ವಧುವಿನ ಉಡುಗೆ, ವಿನ್ಯಾಸದ ಉಡುಪುಗಳು ಆಭರಣಗಳು, ಫ್ಯಾಶನ್ ಪರಿಕರಗಳು, ಕಲಾಕೃತಿಗಳು ಮತ್ತು ಅಲಂಕಾರಕ ಆಭರಣಗಳ ಪ್ರದರ್ಶನ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.
ಮದುವೆಯ ಉಡುಗೆ, ವಧುವಿನ ಉಡುಗೆ, ವಧುವಿನ ಆಭರಣಗಳು, ಪರಿಕರಗಳು ಮತ್ತು ಹೆಚ್ಚಿನವುಗಳ ಮೋಡಿಮಾಡುವ ಸಂಗ್ರಹವನ್ನು ಹೊಂದಿರುತ್ತದೆ. ಬ್ರೈಡಲ್ ವೇರ್, ವೆಡ್ಡಿಂಗ್ ಗೌನ್‌ಗಳು, ಬ್ರೈಡಲ್ ವೇರ್‌ನಿಂದ ವಧುವಿನ ಆಭರಣಗಳು ಭಾರತದಾದ್ಯಂತ ಅತ್ಯುತ್ತಮ ಬ್ರಾಂಡ್ ಗಳು ಮತ್ತು ವಿನ್ಯಾಸದ ವಸ್ತ್ರಾಭರಣಗಳ ಮಾರಾಟ ಮೇಳ ಇದಾಗಿದ್ದು ಎಂದು ಹೈ ಲೈಫ್ ಎಕ್ಸಿಬಿಷನ್ ನ ವ್ಯವಸ್ಥಾಪಕ ನಿರ್ದೇಶಕ ಪಿ. ಡೊಮಿನಿಕ್ ತಿಳಿಸಿದ್ದಾರೆ.

ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಅಪರೂಪದ ಚಿನ್ನಾಭರಣಗಳು ಕರಕುಶಲ ವಸ್ತುಗಳು ಹೀಗೆ ಎಲ್ಲಾ ಅಗತ್ಯಗಳು ಒಂದೇ ಸೂರಿನಡಿ ದೊರೆಯಲಿವೆ. ಫ್ಯಾಷನ್ ಲೋಕದ ಖ್ಯಾತ ವಸ್ತ್ರ ವಿನ್ಯಾಸಕಾರ ಕಲಾತ್ಮಕ ಸಂಗ್ರಹಗಳು, ಮನೆಯ ಅಲಂಕಾರ ಸಂಬಂಧಿತ ವಸ್ತುಗಳನ್ನು ಸಹ ಇಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಹೇಳಿದ್ದಾರೆ.

Post a Comment

Previous Post Next Post