UDAYAVANI NEWS
ವಿಜಯಪುರ,ಡಿಸೆಂಬರ್ 29 : ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ ಎಂದು ಕೃಷ್ಣಾ ಕಾಡಾ ನಿರ್ದೇಶಕ ರವಿ ಖಾನಾಪುರ ಕಿಡಿಕಾರಿದ್ದಾರೆ.
ಕರ್ನಾಟಕದ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಬದ್ಧ ಎಂಬ ನಿರ್ಣಯವನ್ನು ಅಲ್ಲಿನ ವಿಧಾನ ಮಂಡಲ ಅಂಗೀಕರಿಸಿರುವದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗಡಿಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಮೂಲ ಸೌಕರ್ಯ, ಅಭಿವೃದ್ಧಿ ಕಲ್ಪಿಸುವಲ್ಲಿ ವಿಫಲರಾಗಿದ್ದು, ಇದನ್ನು ಮುಚ್ಚಿಕೊಳ್ಳಲು ಅಲ್ಲಿನ ಎಲ್ಲಾ ರಾಜಕಾರಣಿಗಳು ಪಕ್ಷಾತೀತವಾಗಿ ಒಂದಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಯಲ್ಲಿ ಟೀಕಿಸಿದ್ದಾರೆ.
ಕನಾ೯ಟಕದಲ್ಲಿರುವ ಮರಾಠಿಗರನ್ನು ಒಡ ಹುಟ್ಟಿದವರಂತೆ ನೋಡಿಕೊಳ್ಳುತ್ತಿದ್ದೇವೆ. ಇದೇ ಭಾವನೆಯನ್ನು ಮಹಾರಾಷ್ಟ್ರ ದಲ್ಲಿರುವ ಕನ್ನಡಿಗರ ಬಗ್ಗೆಯೂ ತೋರಿಸಿ.
ರಾಜ್ಯದ ಗಡಿಬಾಗದಲ್ಲಿ ಬೆಳಗಾವಿಯಲ್ಲಿನ ಕುತಂತ್ರಿ ಎಂ.ಇ.ಎಸ್ ಅನಗತ್ಯ ವಿವಾದ ಮಾಡಿ ಕನ್ನಡಿಗರ ಮತ್ತು ಮರಾಠಿಗರ ಮದ್ಯ ಬಿರುಕು ಮೂಡಿಸಿದ್ದನ್ನು ಬಿಟ್ಟರೆ ಉಳಿದೆಲ್ಲಕಡೆ ಸಹೋದರ ಸಂಬಂಧಂತೆ ಇದ್ದೇವೆ ಆದರೆ ಮಹಾರಾಷ್ಟ್ರ ಸರಕಾರ ರಾಜಕೀಯ ಹಿತಾಸಕ್ತಿಯ ಕಾರಣದಿಂದ ಇಲ್ಲದ ವಿವಾದ ಸೃಷ್ಟಿಸಬೇಡಿ ಎಂದು ಮಹಾ ರಾಜಕಾರಣಿಗಳ ಕಿವಿ ಹಿಂಡಿದ್ದಾರೆ.
ಗಡಿ ವಿವಾದ ಕುರಿತಂತೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸರಕಾರಕ್ಕೆ ಮಹಾಜನ್ ವರದಿಯೇ ಅಂತಿಮ ಅಂತ ಗೊತ್ತಿದ್ದರು ಇಲ್ಲಿ ಮಹಾರಾಷ್ಟ್ರ ಸರಕಾರ ಗಡಿ ಜನರ ಬಾವನೆಗಳಿಗೆ ಧಕ್ಕೆ ತರುತ್ತಿರುವುದು ಕಾನೂನಿನ ಮತ್ತು ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆ ಆಗುತ್ತೆ ಅನ್ನೋದು ಮರೆಯಬೇಡಿ ಎಂದು ಆಕ್ರೋಷ ವ್ಯಕ್ತ ಪಡಿಸಿದ್ದಾರೆ.
Tags
ಜಿಲ್ಲಾ ಸುದ್ದಿಗಳು