UDAYAVANI NEWS
ಮಸ್ಕಿ ,ಡಿಸೆಂಬರ್ 29 : ತಾಲೂಕಿನ ಇರಕಲ್ ಮಠದಲ್ಲಿ ಮಂಗಳವಾರ ಪರಮ ಪೂಜ್ಯ ಶ್ರೀ ಬಸವ ಪ್ರಸಾದ ಮಹಾಸ್ವಾಮಿಗಳ ಆರ್ಶೀವಾದದೊಂದಿಗೆ ಮಸ್ಕಿ ವನಸಿರಿ ಫೌಂಡೇಶನ್ ನೂತನ ತಾಲೂಕ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಪರಮ ಪೂಜ್ಯ ಶ್ರೀ ಬಸವ ಪ್ರಸಾದ ಮಹಾಸ್ವಾಮಿಗಳು ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮನುಷ್ಯರು ಸಾಕು ಪ್ರಾಣಿಗಳಿಗೆ ಹೆಸರಿಟ್ಟು ತನ್ನ ಪ್ರೀತಿ ವಾತ್ಸಲ್ಯವನ್ನು ತೋರಿಸುತ್ತಾರೆ ಆದರೆ ಇಲ್ಲೊಬ್ಬ ಪರಿಸರ ಪ್ರೇಮಿ ಕಡಿದು ಹಾಕಿದ ಆಲದ ಮರವನ್ನು ತಂದು ಜೀವಕಳೆ ತುಂಬಿ ಅದಕ್ಕೆ ಅಮರ ಶ್ರೀ ಎಂದು ನಾಮಕರಣಗೊಳಿಸಿ ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಅವರೇ ನಮ್ಮ ಸಿಂಧನೂರಿನ ಯುವಕ,ಪರಿಸರ ಪ್ರೇಮಿ,ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪೂರ. ಇವರು ತಮ್ಮ ಸಹಚರರೊಂದಿಗೆ ಸೇರಿ ಗಿಡಗಳನ್ನು ಮಕ್ಕಳಂತೆ ಸಾಕುವುದು ಇವರ ವಿಶೇಷ ಕಾರ್ಯವಾಗಿದೆ.
ಇಂದು ನಮ್ಮ ಶ್ರೀಮಠದಲ್ಲಿ ನೆಟ್ಟ ಸಸಿಗಳೆಲ್ಲವೂ ಅಮರೇಗೌಡ ಮಲ್ಲಾಪೂರ ಅವರ ಕೊಡುಗೆಗಳಾಗಿವೆ.ಕಳೆದ ಮೂರು ವರ್ಷಗಳ ಹಿಂದೆ ಈ ಶ್ರೀಮಠದಿಂದ ಅಮರೇಗೌಡ ಮಲ್ಲಾಪೂರ ಅವರಿಗೆ ಯುವಸ್ಪೂರ್ತಿ ಚೇತನ ಎಂಬ ಪ್ರಶಸ್ತಿ ನೀಡಿ ಗೌರವಿಸಿತ್ತು.ಈ ಪ್ರಶಸ್ತಿ ಪಡೆದಾಗನಿಂದ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ ಹಾಗೂ ಪತ್ರಿಕಾ ಹಾಗೂ ಮಾಧ್ಯಮದಲ್ಲಿ ಕೂಡ ಹೆಚ್ಚು ಹೆಚ್ಚು ಪರಿಚಯವಾಗಿ ಸುವರ್ಣ ನ್ಯೂಸ್ ಚಾನಲ್ ನಲ್ಲಿ ಹಿರೋ ಹಾಗಿ ಹೊರಮ್ಮಿದರು.ಅದೇರೀತಿ ಕಳೆದ 10 ರಿಂದ 15 ವರ್ಷಗಳಿಂದ ಪ್ರತಿ ವರ್ಷ ಜಾತ್ರೆಯಲ್ಲಿ ಸುಮಂಗಲೆಯರಿಗೆ 1008 ಸಸಿಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಇಂದು ಭಕ್ತರ ಮನೆಯಂಗಳದಲ್ಲಿ ಹತ್ತಾರು ಸಾವಿರ ಸಸಿಗಳು ಬೆಳದು ನಿಂತಿದ್ದಾವೆ ಎಂದರೆ ಅದಕ್ಕೆ ಅಮರೇಗೌಡ ಮಲ್ಲಾಪೂರ ಅವರ ಪರಿಶ್ರಮವೇ ಕಾರಣ.ಅದೇರೀತಿಯಾಗಿ ಇಂದು ಕೂಡ ತನ್ನ ಸಹಚರನಾದ ರಾಜು ಬಳಗಾನೂರ ಅವರನ್ನು ಮಸ್ಕಿ ತಾಲೂಕಿನ ಪರಿಸರ ಸೇವಕರಾಗಿ ನೇಮಿಸಿರುವುದು ತುಂಬಾ ಸಂತೋಷ.ಅವರ ಈ ಪರಿಸರ ಸೇವೆ ನಿಸ್ವಾರ್ಥ ಸೇವೆಯಾಗಿರಲಿ, ತುಂಬಾ ಉತ್ಸಾಹಿಗಳಾಗಿ ಕಾರ್ಯನಿರ್ವಹಿಸಲಿ ಎಂದು ಆರ್ಶೀವದಿಸಿದರು.
ಇದೇ ಸಂದರ್ಭದಲ್ಲಿ ಮಸ್ಕಿ ತಾಲೂಕಿನ ವನಸಿರಿ ಫೌಂಡೇಶನ್ ತಾಲೂಕ ಅದ್ಯಕ್ಷರಾಗಿ ನೇಮಕವಾದ ರಾಜು ಬಳಗಾನೂರ ಅವರಿಗೆ ಪರಮ ಪೂಜ್ಯ ಶ್ರೀ ಬಸವ ಪ್ರಸಾದ ಮಹಾಸ್ವಾಮಿಗಳು ಸನ್ಮಾನಿಸಿ ಆರ್ಶೀವದಿಸಿದರು.
ಈ ಸಂದರ್ಭದಲ್ಲಿ: ಪರಮಪೂಜ್ಯ ಶ್ರೀ ಬಸವಪ್ರಸಾದ ಮಹಾಸ್ವಾಮಿಗಳು ಸುಕ್ಷೇತ್ರ ಮಠ ಇರಕಲ್,ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಶರಣೆಗೌಡ ಹೇಡಿಗಿನಾಳ ರಾಜ್ಯ ಪ್ರಧಾನ ಕಾರ್ಯದರ್ಶಿ,ಮಸ್ಕಿ ನೂತನ ತಾಲೂಕ ಅದ್ಯಕ್ಷ ರಾಜು ಬಳಗಾನೂರ ಮುದಿಯಪ್ಪ ಹೊಸಳ್ಳಿ ಕ್ಯಾಂಪ್,
ಕಿರಣ ಎಲೆಕೂಡ್ಲಿಗಿ, ರಮೇಶ ಬಳಗಾನೂರ,ಶಿವು ಮಸ್ಕಿ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
Tags
ಜಿಲ್ಲಾ ಸುದ್ದಿಗಳು