UDAYAVANI NEWS
ಮಸ್ಕಿ, ಡಿಸೆಂಬರ್ 29 : ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯಿತಿಯ ದಲಿತ ನೌಕರನೆಂಬ ಕಾರಣಕ್ಕೆ ರಂಗಪ್ಪ ಕಂಪ್ಯೂಟರ್ ಆಪರೇಟರ್ ರವರ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಪದೇ ಪದೇ ವಿನಾ ಕಾರಣ ಮಾನಸಿಕ ಹಿಂಸೆ ನೀಡುತ್ತಿದ್ದು, ಹಾಗೇಯೇ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಲ್ಲಿಕಾರ್ಜುನ ರವರ ಮೇಲೆ ಬೆದರಿಕೆಯ ಒತ್ತಡ ಹಾಕುತ್ತಿದ್ದಾರೆ ಎಂದು ಹಾಲಾಪೂರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಸಾಬಮ್ಮ ಗಂಡ ಗಂಗಪ್ಪ ರವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಹಾಲಾಪೂರ ಗ್ರಾಮ ಪಂಚಾಯಿತಿಯ ಕಾರ್ಯಾಲಯದಲ್ಲಿ ಮಂಗಳವಾರ ದಂದು ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು ಅದರಲ್ಲಿ ರಂಗಪ್ಪ ಕಂಪ್ಯೂಟರ್ ಆಪರೇಟರ್ ಅವರ ಬಗ್ಗೆ ವಿನಾಕಾರಣ ಪದೇಪದೇ ಚರ್ಚೆ ಮಾಡಿ ಅಂದರೆ ಈಗಾಗಲೇ ನವಂಬರ್ 7ರಂದು ಸುಖಾ ಸುಮ್ಮನೆ ಠರಾವು ಪಾಸ್ ಮಾಡಿ ಕೆಲಸದಿಂದ ವಜಾ ಮಾಡಿ ಆದೇಶ ಕೊಟ್ಟಿದ್ದರು. ಆಗ ಸಹಿತ ನಾನು ಉಪಾಧ್ಯಕ್ಷನಾಗಿದ್ದೇನೆ. ಈ ರೀತಿ ಏಕಾಏಕಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದು ಸರಿಯಲ್ಲ ಎಂದು ವಿರೋಧ ಮಾಡಿರುತ್ತೇನೆ. ಆದರೂ ಕೂಡ ರಂಗಪ್ಪನನ್ನು ಕೆಲಸದಿಂದ ತೆಗೆದು ಆದೇಶ ಮಾಡಿದರು. ನಂತರ ರಂಗಪ್ಪ ರವರು ಕಲ್ಬುರ್ಗಿ ಉಚ್ಚ ನ್ಯಾಯಾಲಯಕ್ಕೆ ಹೋಗಿ ಗ್ರಾಮ ಪಂಚಾಯತಿ ಅವರು ಮಾಡಿರುವ ತರಾವು ರದ್ದುಪಡಿಸಿ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಆದೇಶ ಮಾಡಿತು.ಕಾನೂನು ಹೋರಾಟದ ಮೂಲಕ ನ್ಯಾಯಾಲಯದ ಆದೇಶದಂತೆ ರಂಗಪ್ಪ ರವರು ದಿನಾಂಕ 22 -11 - 2022 ರಂದು ಮರಳಿ ಕೆಲಸಕ್ಕೆ ಬಂದಿರುತ್ತಾರೆ. ಆದರೆ ರಂಗಪ್ಪನನ್ನು ಕೆಲಸದಿಂದ ತೆಗೆದುಹಾಕುವಂತೆ ಹೋರಾಟ ಮಾಡಿ ಠರಾವು ಪಾಸ್ ಮಾಡಿ ಕೆಲಸದಿಂದ ತೆಗೆದು ಹಾಕಿದರು ಕಾನೂನು ಹೋರಾಟದ ಮೂಲಕ ಮತ್ತೆ ಕೆಲಸಕ್ಕೆ ಹಾಜರು ಆದರೂ ಎಂಬ ಒಂದೇ ಕಾರಣಕ್ಕೆ ರಂಗಪ್ಪನ ಕಡೆಯಿಂದ ಕೆಲಸ ಮಾಡಿಸುವುದು ಬೇಡ ನಾವು ಬೇರೆ ಆಪರೇಟರ್ ಅವರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸುತ್ತೇವೆ ಎಂದರು. ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತೆ ಹೇಗೆ ಇವರನ್ನು ಕೆಲಸದಿಂದ ತೆಗೆಯುವುದು ಎಂದುದಿನಾಂಕ 27-12-2022 ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲನಗೌಡ ರವರಿಗೆ ಮತ್ತೆ ಕಂಪ್ಯೂಟರ್ ಆಪರೇಟರ್ ಅನ್ನು ಕೆಲಸದಿಂದ ತೆಗೆಯುವಂತೆ ಬೆದರಿಕೆ ಹಾಕಿದರು. ಆಗ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲನಗೌಡರು ಕಂಪ್ಯೂಟರ್ ಆಪರೇಟರ್ ರಂಗಪ್ಪ ರವರು ನ್ಯಾಯಾಲಯದಿಂದ ಆದೇಶ ತಂದಿರುತ್ತಾರೆ. ನಾನು ನ್ಯಾಯಾಲಯದ ಆದೇಶದ ವಿರುದ್ಧ ಯಾವುದೇ ಠರಾವು ಪಾಸ್ ಮಾಡಲು ಬರುವುದಿಲ್ಲವೆಂದು ಹೇಳಿದರು. ಆದರೂ ಸಹ ಅವರ ಮಾತಿಗೆ ಬೆಲೆ ಕೊಡದೆ ನೀನು ನಾವು ಹೇಳಿದ ಹಾಗೆ ಬರೆಯುವುದಾದರೆ ಬರೆ ಇಲ್ಲವಾದರೆ ಇಲ್ಲಿಂದ ಎದ್ದು ಹೋಗು ಎಂದು ಸದಸ್ಯರುಗಳು ಬಾಯಿಗೆ ಬಂದಂತೆ ಒಬ್ಬ ಅಧಿಕಾರಿಯಂತೆಯೂ ನೋಡಲಾರದೆ ಮಾತನಾಡಿ ಬೈದು ಅವರನ್ನು ಹೊರಗಡೆ ಕಳಿಸಿರುತ್ತಾರೆ. ನಾನು ಕೂಡ ಈ ಸಭೆಯಲ್ಲಿ ಹಾಜರಿದ್ದೆ. ಮಲ್ಲನಗೌಡ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಶ್ರೀ ಕಂಪ್ಯೂಟರ್ ಆಪರೇಟರ್ ರಂಗಪ್ಪ ರವರದ್ದು ಯಾವುದೇ ರೀತಿಯ ತಪ್ಪುಗಳು ಇರುವುದಿಲ್ಲ ದಲಿತ ನೌಕರನೆಂಬ ಕಾರಣಕ್ಕಾಗಿ ರಂಗಪ್ಪನವರಿಗೆ ಇಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ಆದ್ದರಿಂದ ಎಲ್ಲಾ ದಲಿತ ಪರ ಸಂಘಟನೆಗಳು ಈ ಕಡೆ ಗಮನ ಹರಿಸಬೇಕೆಂದು ಪತ್ರಿಕಾ ಹೇಳಿಕೆ ಮೂಲಕ ಹಾಲಾಪೂರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಸಾಬಮ್ಮ ಗಂಡ ಗಂಗಪ್ಪ ರವರು ವಿನಂತಿಸಿಕೊಂಡಿದ್ದಾರೆ.
Tags
ಜಿಲ್ಲಾ ಸುದ್ದಿಗಳು