UDAYAVANI NEWS
ಮಸ್ಕಿ, ಡಿಸೆಂಬರ್ 31 : ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಪ್ರತಿ ವರ್ಷದಂತೆ ನಡೆಯುವ ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಹಾಗೂ ಜನಜಾಗೃತಿ ಕಾರ್ಯಕ್ರಮವನ್ನು ಶ್ರೀ ವಾಲ್ಮೀಕಿ ಗುರುಪೀಠದ ಪರಮಪೂಜ್ಯ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣಿ ಮಾಡಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಭಿಕರಿಗೆ ತಿಳಿಸಿದರು.
ಜನಜಾಗೃತಿ ಮತ್ತು ವಾಲ್ಮೀಕಿ ಜಾತ್ರಾ ಪೂರ್ವಭಾವಿ ಸಭೆ ಯನ್ನು ಉದ್ಧೇಶಿಸಿ ಶ್ರೀಗಳು ಮಾತನಾಡುತ್ತಾ ಜಾತ್ರೆ ಎಂದರೆ ಏಕರೂಪಿಯಾಗುತ್ತಿರುವ ಮನುಷ್ಯನ ಬದುಕಿನ ಲಯಕ್ಕೆ ಬಹುರೂಪಿತ ಸ್ಪರ್ಶ ನೀಡಿ ಹೊಸ ಚೈತನ್ಯವನ್ನೇ ತುಂಬುವುದಾಗಿದೆ. ಸಾಮಾನ್ಯವಾಗಿ ನಾವುಗಳು ಹಿಂದಿನಿಂದ ಆಚರಿಸಿಕೊಂಡು ಬರುತ್ತಿರುವ ಜಾತ್ರೆಗಳು ಜಾತ್ಯಾತೀತ ಮನೋಭಾವನೆಯ ಮೂಲಕ ಎಲ್ಲರಲ್ಲೂ ಸಾಮರಸ್ಯ ಬೆಸೆಯುವ ಕೊಂಡಿಯಾಗಿದೆ. ಅದು ಇಂದಿಗೂ ಸಹ ಮುಂದುವರೆದಿದೆ. ಹಾಗೆಯೇ ರಾಜ್ಯದ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿರುವ ಬೇಡ ವಾಲ್ಮೀಕಿ ನಾಯಕ ಸಮುದಾಯ, ಸಂಘ ಸಂಸ್ಥೆಗಳ ಅಡಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮೂಲಕ ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ಸಂಘಟಿತರಾಗುತ್ತಿದ್ದೆವು. ಪಕ್ಷಾತೀತವಾಗಿ ರಾಜ್ಯ ಮಟ್ಟದಲ್ಲಿ ಬೃಹತ್ ವೇದಿಕೆ ಅವಶ್ಯಕತೆ ಇತ್ತು. ಅದು ಸಾಧ್ಯವಾಗಿದ್ದು ಮಹರ್ಷಿ ವಾಲ್ಮೀಕಿ ಜಾತ್ರೆಯ ಮೂಲಕ.ಮಹರ್ಷಿ ವಾಲ್ಮೀಕಿ ಜಾತ್ರೆ ಎಂದರೆ ಜಾಗೃತಿ (ಸಂಘಟನೆ). ಯಾವ ಸಮಾಜ ಜೀವಂತ ಇರುತ್ತದೋ ಜಾಗೃತವಾಗಿರುತ್ತದೆ. ಸತ್ತ ಸಮಾಜ ಸಮಾದಿಯಾಗುತ್ತದೆ. ಆದ್ದರಿಂದ ಸಮುದಾಯ ಪ್ರತಿ ಹಂತದಲ್ಲೂ ಜಾಗೃತವಾಗಿರಬೇಕು ಮತ್ತು ಸಂಘಟಿತರಾಗಬೇಕು. ಆ ಮೂಲಕ ಸಮುದಾಯಕ್ಕೆ ಸಿಗಬೇಕಾದ ಸಾಂವಿಧಾನಿಕ ಹಕ್ಕಿಗಾಗಿ ಆಗ್ರಹಿಸುವ ಮಹಾ ವೇದಿಕೆಯಾಗಬೇಕು ಎಂಬ ಸದುದ್ದೇಶದಿಂದ ವಾಲ್ಮೀಕಿ ಜಾತ್ರೆ ಆರಂಭಿಸಲಾಯಿತು. ಸ್ವಾಭಿಮಾನದ ಸಂಕೇತವಾಗಿರುವ ಐದನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ ಹಾಗೂ ನೂತನ ರಥೋತ್ಸವ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ತಾವೆಲ್ಲರೂ ಕುಟುಂಬ ಸಮೇತರಾಗಿ ಪಾಲ್ಗೊಂಡು ತನು ಮನ ಧನ ಸಹಕಾರದೊಂದಿಗೆ ಈ ಮಹತ್ವಾಕಾಂಕ್ಷಿಯ ಮಹತ್ಕಾರ್ಯದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ಎಂದು ಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಎಂದರು.
ಸಭೆಯ ಪೂರ್ವದಲ್ಲಿ ಕಾಟಗಲ್ ಗ್ರಾಮಕ್ಕೆ ತೆರಳಿ ಶ್ರೀಗಳು ಧರಣಿ ಸತ್ಯಾಗ್ರಹ ನಿರತ ಸಂದರ್ಭದಲ್ಲಿ 100 ನೇ ದಿನದ ತಾಲ್ಲೂಕು ಮಟ್ಟದ ಹೋರಾಟದಲ್ಲಿ ಹೃದಯಾಘಾತದಿಂದ ಮೃತರಾದ ಶ್ರೀ ದಿ. ಶೇಖರಗೌಡ ಮಾಲಿ ಪಾಟೀಲ್ ಅವರ ಮನೆಗೆ ತೆರಳಿ ಮೃತರ ಕುಟುಂಬಕ್ಕೆ ಸ್ವಾಂತನ ಹೇಳಲಾಯಿತು.ಇಂದಿನ ಈ ಸಭೆಯಲ್ಲಿ ಜಾತ್ರಾ ಮಹೋತ್ಸವ ಪೋಸ್ಟರ್ ಬಿಡುಗಡೆ ಹಾಗೆ ಜಾತ್ರಾ ಸಮಿತಿ ತಾಲ್ಲೂಕು ಮಟ್ಟದ ವಿ ಎಸ್ ಎಸ್ ಅಧ್ಯಕ್ಷರಾಗಿ ಬಸವರಾಜ ನಾಯಕ ರಂಗಾಪೂರ, ಸದಸ್ಯರಾಗಿ ವೆಂಕಟೇಶ ನಾಯಕ ಮಂಗನಾಳ ಮಸ್ಕಿ , ಸಿದ್ದಾರ್ಥ ಪಾಟೀಲ್ ಹಾಲಾಪೂರ, ಯಮನೂರು ನಾಯಕ ಗೊನ್ವಾರ,ದುರಗೇಶ ಕಣ್ಣೂರು,ಎಚ್ ಎಲ್ ನಾಯಕ ಬಳಗಾನೂರು ಈ ರೀತಿಯಲ್ಲಿ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಶೇಖರಗೌಡ ಜಾಲಿ ಬಳಗಾನೂರ, ಅಮರೇಗೌಡ ತಿಮ್ಮಾಪುರ ವಕೀಲರು, ಬಸನಗೌಡ ಪೋಲೀಸ್ ಪಾಟೀಲ್, ನಾರಾಯಣಪ್ಪ ಕಾಸ್ಲಿ ,ಭೀಮಣ್ಣ ನಾಯಕ ಕಾಚಾಪೂರ,ಶರಣೇಗೌಡ ಗ್ರಾಮ ಪಂಚಾಯತಿ ಅದ್ಯಕ್ಷರು ಕನ್ನಾಳ,ಬಸವರಾಜ ನಾಯಕ ತುಗ್ಗಲದಿನ್ನಿ,ಮೌನೇಶ ನಾಯಕ ಮಸ್ಕಿ, ಚಂದ್ರಶೇಖರ ಉದ್ಬಾಳ,ರಾಕೇಶ ಪಾಟೀಲ್,ಆರ್.ಕೆ ನಾಯಕ ಮಸ್ಕಿ, ಮಹಾದೇವಪ್ಪ ನಾಯಕ ಉಸ್ಕಿಹಾಳ, ಶರಣು ನಾಯಕ,ಇನ್ನೂ ಅನೇಕ ತಾಲ್ಲೂಕಿನ ವಾಲ್ಮೀಕಿ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Tags
ಜಿಲ್ಲಾ ಸುದ್ದಿಗಳು