UDAYAVANI NEWS
ಮಸ್ಕಿ, ಡಿಸೆಂಬರ್ 31 : ಮಸ್ಕಿ ತಾಲೂಕಿನ ದಿಗ್ಗೆ ನಾಯಕನ ಭಾವಿ ಗ್ರಾಮದ ರಂಗನಗೌಡ ಎಂಬುವವರ ಪುತ್ರ ಶರಣ ಗೌಡ ಅವರಿಗೆ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯವು ಪಿಹೆಚ್ ಡಿ ಪದವಿ ಪ್ರಧಾನ ಮಾಡಿದ್ದು, ಬಳ್ಳಾರಿಯ ಆಂಗ್ಲ ಮಾಧ್ಯಮ ವಿಭಾಗದ ಬಳಿ ಗೆಳೆಯರ ಬಳಗದ ವತಿಯಿಂದ ಹೂ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಯ ಆಂಗ್ಲ ವಿಭಾಗದ ಪ್ರಾಧ್ಯಾಪಕರಾದ ಡಾ. ಎನ್ ಶಾಂತನಾಯ್ಕ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾ ಪ್ರಬಂಧವಾದ "ಸೋಶಿಯಲ್ ರಿಯಾಲಿಟಿ ಅಂಡ್ ಥಿಯೇಟರ್ ಮೂವಮೆಂಟ್ ಇನ್ ಇಂಡಿಯಾ ವಿಥ್ ರೆಫರೆನ್ಸ್ ಟು ಬಾದಲ್ ಸರ್ಕಾರ್ ಉತ್ಪಲದತ್ತ ಸಪ್ದರಹಸ್ಮಿ ಅಂಡ್ ಹಬೀಬ್ ತನ್ವೀರ್ " ಎಂಬ ವಿಷಯಕ್ಕೆ ಪಿಹೆಚ್ ಡಿ ಪದವಿ ಪ್ರಧಾನ ಮಾಡಿದ್ದಾರೆ ಈ ಪಿಹೆಚ್ ಡಿ ಪದವಿ ಪ್ರಧಾನದಿಂದ ವಿಷಯ ತಿಳಿಯುತ್ತಿದ್ದಂತೆಯೇ ಬಳ್ಳಾರಿಯ ವಿವಿ ಯ ಆಂಗ್ಲ ಮಾಧ್ಯಮ ವಿಭಾಗಕ್ಕೆ ಆಗಮಿಸಿ ಗೆಳೆಯರ ಬಳಗದ ವತಿಯಿಂದ ಹೂ ಗುಚ್ಛ ನೀಡುವ ಮೂಲಕ ಶುಭ ಹಾರೈಸಿ ಅಭಿನಂದನೆ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀಕಾಂತ್ ನಾಯಕ, ತಿಪ್ಪೇಸ್ವಾಮಿ,ರಘು,ಪ್ರವೀಣ್,ಕುಮಾರ.ಬಿ ಇನ್ನಿತರೆ ಗೆಳೆಯರ ಬಳಗದವರಿದ್ದರು.
Tags
ಜಿಲ್ಲಾ ಸುದ್ದಿಗಳು