UDAYAVANI NEWS
ಮಸ್ಕಿ, ಡಿಸೆಂಬರ್ 31 : ಪಟ್ಟಣದ ವಾಲ್ಮೀಕಿ ಭವನ ದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಸ್ವಾಮೀಜಿ ರವರ ನೇತೃತ್ವದಲ್ಲಿ ಬಸವರಾಜ್ ನಾಯಕ ರಂಗಾಪುರ ರನ್ನು ಮಸ್ಕಿ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿ
ವಾಲ್ಮೀಕಿ ಭವನದ ಮುಂಭಾಗ ಮಸ್ಕಿ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾದ ಬಸವರಾಜ್ ನಾಯಕ ರಂಗಾಪುರ ರವರನ್ನು ವಾಲ್ಮೀಕಿ ನಾಯಕ ಸಮಾಜದ ಬಳಗದ ವತಿಯಿಂದ ಶಾಲು ಹೊದಿಸಿ ಹೂವಿನ ಹಾರ ಹಾಕುವ ಮೂಲಕ ಸನ್ಮಾನಿಸಲಾಯಿತು.
ಸನ್ಮಾನಿತರ ಕುರಿತು ಮಾತನಾಡುತ್ತಾ ನಮ್ಮ ಸಮಾಜದ ಏಳ್ಗೆಗೆ ಪ್ರಾಮಾಣಿಕ ಸೇವೆ ಸಲ್ಲಿಸುವಿರಿ ಎಂಬ ನಂಬಿಕೆ ನಮ್ಮಲ್ಲಿದೆ ಅದರಂತೆ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಮಸ್ಕಿ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಬಸವರಾಜ್ ನಾಯಕ ರಂಗಾಪುರ ರನ್ನು ನಮ್ಮ ಪೂಜ್ಯ ರಾಜನಹಳ್ಳಿ ಗುರುಪೀಠದ ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮೀಜಿ ನೇಮಕ ಮಾಡಿದ್ದಾರೆ ಗುರುಗಳ ಸಲಹೆ ಚಾಚೂ ತಪ್ಪದೇ ಪಾಲಿಸಿ ಸಮಾಜದ ಹಿತಕ್ಕಾಗಿ ಸೇವೆ ಸಲ್ಲಿಸಿ ಎಂದು ಸಮಾಜದ ಹಿರಿಯರಾದ ಶೇಖರಗೌಡ ಜಾಲಿ ಬಳಗಾನೂರ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ್ ನಾಯಕ ರಂಗಾಪುರ ಸಮಾಜದ ಹಿರಿಯ ಮುಖಂಡರಾದ ಹಾಗೂ ಮಸ್ಕಿ ಪುರಸಭೆಯ ಮಾಜಿ ಅಧ್ಯಕ್ಷರಾದ ಬಸನಗೌಡ ಪೊಲೀಸ್ ಪಾಟೀಲ್, ನಾರಾಯಣಪ್ಪ ಕಾಸ್ಲಿ,ಕನ್ನಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶರಣಗೌಡ, ಭೀಮಣ್ಣ ನಾಯಕ ಕಾಚಾಪುರ, ಚಂದ್ರಶೇಖರ್ ನಾಯಕ ಉದ್ಬಾಳ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಮಾಜದ ಎಲ್ಲಾ ಆತ್ಮೀಯ ಸ್ನೇಹಿತರು ಮತ್ತು ಮುಖಂಡರಿಗೆ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸಿದರು.
ಈ ವೇಳೆಯಲ್ಲಿ
ಶೇಖರಗೌಡ ಜಾಲಿ ಬಳಗಾನೂರ, ಅಮರೇಗೌಡ ತಿಮ್ಮಾಪುರ ವಕೀಲರು,ಮೌನೇಶ್ ನಾಯಕ,ರಾಕೇಶ್ ಪಾಟೀಲ್,ಬಸವರಾಜ್ ನಾಯಕ ತುಗ್ಗಲದಿನ್ನಿ, ಸಿದ್ದಾರ್ಥ್ ಪಾಟೀಲ್ ಹಾಲಾಪುರ ಪತ್ರಕರ್ತರು,ಬಸವರಾಜ್ ನಾಯಕ ಬುದ್ದಿನ್ನಿ.ಎಸ್,ಮೌನೇಶ್ ಉದ್ಬಾಳ ಸೇರಿದಂತೆ ವಾಲ್ಮೀಕಿ ನಾಯಕ ಸಮಾಜದ ಹಿರಿಯರು ಯುವಕರು ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು