ವರದಿ:ಶರಣಪ್ಪ ಹೆಳವರ,ಬಾಗಲಕೋಟೆ
ಬಾಗಲಕೋಟೆ,ಡಿಸೆಂಬರ್ 31 : ಇಂದು ಮಾಜಿ ಶಾಸಕ ಹಾಗೂ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಸ್ ಜಿ ನಂಜಯ್ಯನಮಠ ಅವರು ಸಿಕ್ಕೇರಿಯ ಮುನಿ ಹಿರಿಯ ನಾಗರಿಕ ಸೇವಾ ಟ್ರಸ್ಟ್ ವತಿಯಿಂದ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ರಾಜು ಮನ್ನಿಕೇರಿ ಅವರು ಏರ್ಪಡಿಸಿದ್ದ 71ನೆ ಹುಟ್ಟು ಹಬ್ಬವನ್ನು ಅನಾಥ ವೃದ್ಧರೊಂದಿಗೆ ಸರಳ, ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ನಂತರ ಅನಾಥ ವೃದ್ಧರಿಗೆ ಊಟವನ್ನು ಬಡಿಸಿದರು. ಈ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿಯ ಎಲ್ಲ ಮುಖಂಡರು ಹಾಗೂ ಮಹಿಳಾ ಕಾಂಗ್ರೆಸ್ ಸದಸ್ಯರು ಇದ್ದರು.
Tags
ಜಿಲ್ಲಾ ಸುದ್ದಿಗಳು