ನೂತನ ಎಸ್ ಡಿ ಎಮ್ ಸಿ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ

ಸುದ್ದಿ ಸಂಪಾದಕರು: ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ದೇವದುರ್ಗ, ಡಿಸೆಂಬರ್ 01 : ಸರಕಾರಿ ಬಾಲಕಿಯರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ದೇವದುರ್ಗ ದಲ್ಲಿ ನೂತನವಾಗಿ ಎಸ್ ಡಿ ಎಮ್ ಸಿ ಪುನರ್ ರಚನೆ ಸಭೆ ಜರುಗಿತು.


ಸಮಿತಿಯ ಅಧ್ಯಕ್ಷರಾಗಿ ಹನುಮಂತ್ರಾಯ ದೊರೆ ಉಪಾಧ್ಯಕ್ಷರಾಗಿ ತಾಯಮ್ಮ ಇವರನ್ನು ಆಯ್ಕೆ ಮಾಡಲಾಯಿತು ಈ ಸಮಯದಲ್ಲಿ ಸಮಿತಿಯ 16 ಜನ ಸದಸ್ಯರು ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷರು ಮತ್ತು ಉಪಾದ್ಯಕ್ಷರು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾರ್ಗದರ್ಶಕರಾದ ನರಸಯ್ಯ ಪಾಟೀಲ್ ಇವರು ಮಾತನಾಡಿ ಶಾಲಾ ಅಭಿವೃದ್ದಿ ಹಾಗೂ ಮೇಲ್ವಿಚಾರಣಾ ಸಮುತಿಯು ಶಾಲೆಯ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸಬೇಕು ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಪಾಲಕರು ವಹಿಸಿ ಮಧ್ಯದಲ್ಲಿಯೇ ಮಕ್ಕಳಿಗೆ ಶಾಲೆ ಬಿಡಿಸದೆ ಶಾಲೆಗೆ ಕಳಿಸುವಂತೆ ಪ್ರೆರೇಪಿಸಬೇಕು ಮತ್ತು 6 ರಿಂದ 18 ವರ್ಷದ ಮಕ್ಕಳಿಗೆ ಶಿಕ್ಷಣವಂತರನ್ನಾಗಿ ಮಾಡಿ ಎಂದು ಹೇಳಿದರು.

ಈಸಂದರ್ಭದಲ್ಲಿ ವಲಯ ಸಂಪನ್ಮೂಲ ವ್ಯಕ್ತಿ ಮಂಜುನಾಥ, ಪ್ರಭಾರಿಮುಖ್ಯಗುರುಗಳಾದಮರಿಯಪ್ಪ,
ಶಿಕ್ಷಕರಾದ ದೇವರಾಜ,ರೇವಣಸಿದ್ದಪ್ಪ
ಪೂಜಾರಿ,ವನಜಾ,ಬಸಮ್ಮ, ಮಾರ್ಗರೇಟ್ ,ವಿಜಯಲಕ್ಷ್ಮೀ, ಹಾಗೂ ಅತೀಥಿ ಶಿಕ್ಷಕರು, ಓಣಿಯ ಮುಖಂಡರಾದ ಬಸವರಾಜಸ್ವಾಮಿಚಿಗರಿಮಠ,ವೆಂಕಟೇಶನಾಯಕ ಗೂಗೇರದೊಡ್ಡಿ,ಗುರುರಾಜ ಪತ್ತಾರ್,ವೆಂಕಟೇಶ ಕರಿಗುಡ್ಡ ಓಣಿ ಉಪಸ್ಥಿತರಿದ್ದರು.

Post a Comment

Previous Post Next Post