ಕನ್ನಡ ಭಾಷಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ಕಲಿಕಾ ವಾತವರಣ ನಿರ್ಮಿಸುವದು ಅವಶ್ಯಕ: ಶಾಂತಗೌಡ ಪಾಟೀಲ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಹುಣಸಗಿ, ಡಿಸೆಂಬರ್ 01 : ಪ್ರೌಢ ಶಾಲಾ ಹಂತವು ವಿದ್ಯಾರ್ಥಿಗಳು ತಾವು ಕಲಿತ ಮಾತೃ ಭಾಷೆಗೆ ಚಿನ್ನಕ್ಕೆ ಪುಟವಿಡುವ ಕಾಲ ಆ ಕಾರಣಕ್ಕಾಗಿ ಪ್ರೌಢಶಾಲಾ ಹಂತದ ಮಕ್ಕಳಿಗೆ ಶಿಕ್ಷಕರು ಸೂಕ್ತ ಕಲಿಕಾ ವಾತವರಣ ನಿರ್ಮಿಸುವದು ತುಂಬಾ ಅವಶ್ಯಕವಾಗಿದ್ದು ಕನ್ನಡ ಭಾಷೆ ಉಳಿಸಿ, ಬೆಳೆಸುವಲ್ಲಿ ಕನ್ನಡ ಭಾಷಾ ಶಿಕ್ಷಕರ ಪಾತ್ರ ಹಿರಿದು ಎಂದು ಶಾಂತಗೌಡ ಪಾಟೀಲ್ ಹೇಳಿದರು.
     
ಪಟ್ಟಣದ ಯು.ಕೆ.ಪಿ ಕ್ಯಾಂಪಿನ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕನ್ನಡ ಭಾಷಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ಶಾಲಾ ಹಂತದಲ್ಲಿ ಮಕ್ಕಳಿಗೆ ಕನ್ನಡದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ ಮಕ್ಕಳಿಗೆ ಕನ್ನಡದಲ್ಲಿ ಗಮಕ, ನಿಘಂಟು, ವಾಕ್ಯಗಳು, ಪಾಠದಲ್ಲಿ ಬರುವಂತಹ ವಿಶೇಷತೆಗಳಾದ, ಕಾಗುಣಿತ, ಬರಹ, ಹಾಗೂ ಶಬ್ದ ಸಂಗ್ರಹಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ಸರಳವಾದ ರೀತಿಯಲ್ಲಿ ಮಕ್ಕಳಿಗೆ ಮನಮುಟ್ಟುವಂತೆ ತಿಳಿ ಹೇಳುವ ಕೆಲಸವಾಗಬೇಕು ಸಂದಾಗ ಮಾತ್ರ ಮಕ್ಕಳಲ್ಲಿ ಕನ್ನಡ ಭಾಷಾ ವಿಷಯದ ಬಗ್ಎ ಹೆಚ್ಚು ಆಸಕ್ತಿ ಉಂಟಾಗುತ್ತದೆ. ಜೊತೆಗೆ ಕನ್ನಡ ಭಾಷಾ ವಿಷಯವು ಒಂದು ವೈವಿದ್ಯಮಯ ವಿಷಯವಾಗಿದ್ದು ಕನ್ನಡ ಭಾಷಾ ಶಿಕ್ಷಕರು ಕೂಡಾ ಹೆಚ್ಚಿನ ಮುತುರ್ವಜಿಯಿಂದ ಮಕ್ಕಳಿಗೆ ಕನ್ನಡ ಪಾಠವನ್ನು ಕಂಠ ಪಾಠದ ಮೂಲಕ, ಮತ್ತು ಹಾಡಿನ ಜಾನಪದ ಸೊಗಡಿನ ಮೂಲಕ ಕಲಿಸಬೇಕು, ಕಾಗುಣಿತದ ಬರಹ ಹಾಗೂ ಮಾತಿನ ದೋಷಗಳನ್ನು ಶಿಕ್ಷಕರು ತಿದ್ದಬೇಕು ಜೊತೆಗೆ ಶಾಲಾ ಹಂತದ ಮಕ್ಕಳಿಗೆ ಶಿಕ್ಷಕರು ಸೂಕ್ತ ಕಲಿಕಾ ವಾತವರಣ ನಿರ್ಮಿಸುವದು ತುಂಬಾ ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ಕನ್ನಡ ಭಾಷೆ ಉಳಿಸಿ, ಬೆಳೆಸುವಲ್ಲಿ ಕನ್ನಡ ಭಾಷಾ ಶಿಕ್ಷಕರ ಪಾತ್ರ ಹಿರಿದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುರಪುರ ಕ್ಷೇತ್ರ ಶಿಕ್ಷಣಾಧಾರಿಗಳಾದ ಮಹೇಶ ಪೂಜಾರಿ, ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮತಿ ಅಮೃತಬಾಯಿ ಜಹಗೀರದಾರ್, ತಾಲೂಕ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಬಸವರಾಜ ತೆಗ್ಗೆಳ್ಳಿ ಹಾಗೂ ಹುಣಸಿಗಿ ತಾಲೂಕ ಕ.ಸಾ.ಪ ಅದ್ಯಕ್ಷರಾದ ವೆಂಕಟಗಿರಿ ದೇಶಪಾಂಡೆ, ಎಸ್.ಡಿ.ಎಮ್.ಸಿ ಅಧ್ಯಕ್ಷ ವಿರೇಶ ಬಿ ಚಿಂಚೋಳಿ, ಹೊನ್ನಕೇಶವ ದೇಸಾಯಿ, ಸೇರಿದಂತೆ ಕನ್ನಡ ಭಾಷಾ ಶಿಕ್ಷಕರು ಹಾಗೂ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಶಿವಶರಣಪ್ಪ ಶಿರೂರ ಪ್ರಾಸ್ತಾವಿಕ ಮಾತನಾಡಿದರು. ಯಂಕಪ್ಪಗೌಡ ಅರಿಕೇರಿ ಸ್ವಾಗತಿಸಿದರು. ಶರಣಯ್ಯ ಹಿರೇಮಠ ವಂದಿಸಿದರು. ಮಹಾಂತೇಶ ಗೋನಾಲ ನಿರೂಪಿಸಿದರು.

Post a Comment

Previous Post Next Post