UDAYAVANI NEWS
ಮಸ್ಕಿ, ಡಿಸೆಂಬರ್ 02 : ತಾಲೂಕಿನ ಮಿಟ್ಟೆಕೆಲ್ಲೂರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2 ಲಕ್ಷ ರೂಪಾಯಿಗಳ ಡಿಡಿ ಯನ್ನು ವಿತರಣೆ ಮಾಡಲಾಯಿತು.
ಸಂತೆಕೆಲ್ಲೂರು ವಲಯದ ವ್ಯಾಪ್ತಿಗೆ ಬರುವ, ಮಿಟ್ಟೆಕೆಲ್ಲೂರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಸ್ಕಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಶಾಲಿನಿ ರವರು 2 ಲಕ್ಷ ರೂಗಳ ಡಿಡಿ ಯನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಂತೆಕೆಲ್ಲೂರು ವಲಯದ ಮೇಲ್ವಿಚಾರಕರಾದ ಮಂಜುನಾಥ್, ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಅನುಸೂಯ,CSC ನೋಡಲ್ ಅಧಿಕಾರಿಗಳಾದ ಮಲ್ಲಿಕಾರ್ಜುನ್, ಮಿಟ್ಟೆಕೆಲ್ಲೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಹನುಮಂತಿ,ಊರಿನ ಗಣ್ಯರು ದೇವಸ್ಥಾನದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾದ ಮಲ್ಲಪ್ಪ ಗೌಡ, ಸಿದ್ದಪ್ಪ ಗೌಡ ದೇವಸ್ಥಾನದ ಕಮಿಟಿಯವರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು