ಶಾಸಕರ, ಗಮನಕ್ಕೂ ಇಲ್ಲದೆ ಯಾತ್ರಿ ನಿವಾಸ ಉದ್ಘಾಟನೆ : ಮಾಜಿ ಶಾಸಕರಿಂದ ಶಿಷ್ಟಾಚಾರ ಉಲ್ಲಂಘನೆ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಡಿಸೆಂಬರ್ 02 : ತಾಲೂಕಿನ ವಟಗಲ್ ಗ್ರಾಮದಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ಕಟ್ಟಡಗಳು ಹಾಲಿ ಶಾಸಕರು ಉದ್ಘಾಟಿಸುವುದು ವಾಡಿಕೆ , ಆದರೆ ತಾಲೂಕಿನ ವಟಗಲ್ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿದ ಯಾತ್ರಿ ನಿವಾಸವನ್ನು ಹಾಲಿ ಶಾಸಕರು ಹಾಗೂ ತಾಲೂಕಿ‌ನ ಯಾವುದೇ ಅಧಿಕಾರಿಗಳ ಗಮನಕ್ಕೆ ತರದೇ ಮಾಜಿ ಶಾಸಕ ಪ್ರತಾಪಗೌಡರು ಬೆಂಬಲಿಗರ ಜೊತೆಗೂಡಿ ಉದ್ಘಾಟಿಸಿರುವುದು ಕ್ಷೇತ್ರದಲ್ಲಿ ಬಹುದೊಡ್ಡ ಚರ್ಚೆಗೆ ಗ್ರಾಸವಾಗಿದೆ.

2017-2018 ನೇ ಸಾಲಿನಲ್ಲಿ 50 ಲಕ್ಷ ಅನುದಾಡಿದಡಿ ಈ ಒಂದು ಯಾತ್ರಾ ನಿವಾಸ ಕಟ್ಟಡವನ್ನು (ಕ್ಯಾಷ್ಯುಟೆಕ್ ನಿರ್ಮಿತ ಕೇಂದ್ರ ) ನಿರ್ಮಿಸಲಾಗಿತ್ತು. ಈಚೆಗಷ್ಟೇ ಪ್ರವಾಸೋದ್ಯಮ ಇಲಾಖೆಗೆ ಕಟ್ಟಡವನ್ನು ಹಸ್ತಾಂತರಿಸಲಾಗಿತ್ತು.ಆದರೆ ಹಾಲಿ ಶಾಸಕರ ಗಮನಕ್ಕೂ ತರದೇ ಬೆಂಬಲಿಗರೊಂದಿಗೆ ಅಧಿಕಾರಿಗಳಿಗೂ ತಿಳಿಯದ ರೀತಿಯಲ್ಲಿ ಉದ್ಘಾಟಿಸಿರುವುದು ಶಿಷ್ಟಾಚಾರ ಉಲ್ಲಂಘಿಸಿರುವ ಘಟನೆ ಬುಧವಾರ ನಡೆದಿದೆ.
ಯಾರ ಗಮಕ್ಕಿಲ್ಲವಂತೆ : ಮಾಜಿ ಶಾಸಕರು ಈ ರೀತಿಯಾಗಿ ಉದ್ಘಾಟಿಸಿರುವುದು ಪ್ರವಾಸೋದ್ಯಮ ಇಲಾಖೆಯ ಹಾಗೂ ತಾಲೂಕಿನ ಯಾವೊಬ್ಬ ಅಧಿಕಾರಿಗಳಿಗೂ ಕೂಡ ಮಾಹಿತಿ ನೀಡದೆ ಏಕಾಏಕಿ ಉದ್ಘಾಟಿಸಿದ್ದಾರೆಂಬುದು ತಾಲೂಕಿನ ಅಧಿಕಾರಿ ವಲಯದ ಮಾತಾಗಿದೆ.ಚುನಾವಣೆಯೂ ಹತ್ತಿರದಲ್ಲಿರುವಾಗಲೇ ಈ ರೀತಿಯ ಉದ್ಘಾಟನಾ ಜಟಾಪಟಿಯು ತಾ ಮುಂದು ನಾ ಮುಂದು ಎಂದು ಹಾಲಿ - ಮಾಜಿ ಶಾಸಕರ ನಡುವೆ ನಡೆದಿರುವುದು ಕ್ಷೇತ್ರದಲ್ಲಿ ಜನರನ್ನು ಹುಬ್ಬೇರುವಂತೆ ಮಾಡಿದೆ.
ಹೇಳಿಕೆ 1

ವಟಗಲ್ ಗ್ರಾಮದಲ್ಲಿ ಇಂದು ಮಾಜಿ ಶಾಸಕರು ಪ್ರವಾಸೋದ್ಯಮ ಇಲಾಖೆಯ ಯಾತ್ರಿ ನಿವಾಸ ಉದ್ಘಾಟನೆ ಮಾಡಿರುವುದು ನನ್ನ ಗಮನಕ್ಕಿಲ್ಲ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡುತ್ತೇನೆ.

ಆರ್.ಬಸವನಗೌಡ ತುರುವಿಹಾಳ
ಶಾಸಕರು ಮಸ್ಕಿ




ಹೇಳಿಕೆ 02

ಕಟ್ಟಡ ಕಾಮಗಾರಿ ಪೂರ್ಣಗೊಂಡ ಇತ್ತಿಚೆಗೆ ನಮ್ಮ ಇಲಾಖೆಗೆ ಹಸ್ತಾಂತರಿಸಲಾಗಿತ್ತು ಇದನ್ನು ಉದ್ಘಾಟನಾ ದಿನಾಂಕ ನಿಗದಿ ಪಡಿಸಲು ಜಿಲ್ಲಾಧಿಕಾರಿಗಳಿಗೆ ಪಟ್ಟಿ ಕಳುಹಿಸಲಾಗಿದೆ ಆದರೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಅದನ್ನು ಉದ್ಘಾಟಿಸಿರುವುದು ನಮ್ಮ ಗಮನಕ್ಕಿಲ್ಲ ಇದನ್ನು ನಾನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ.

ಮಂಜುನಾಥ ಭೋಗಾವತಿ
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು

Post a Comment

Previous Post Next Post