UDAYAVANI NEWS
ಹುಣಸಗಿ, ಡಿಸೆಂಬರ್ 02 : ಕರ್ನಾಟಕದಲ್ಲಿನ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಗೋವಾ ರಾಜ್ಯದಲ್ಲಿ ವಾಸವಿರುವ ಗೋವಾ ಕನ್ನಡಿಗರು ಕರ್ನಾಟಕದ ಕನ್ನಡಿಗರ ಸೇವೆಯನ್ನು ಗುರುತಿಸಿ ಅವರುಗಳಿಗೆ ಸನ್ಮಾನಿಸಿ ಗೌರವಿಸಿ ಪ್ರಶಸ್ತಿ ಪುರಸ್ಕಾರವನ್ನು ನೀಡಿದ್ದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ರೇಣುಕಾ ಶಿಕ್ಷಣ ಮತ್ತು ಕಲ್ಯಾಣ ಕೇಂದ್ರ ಹುಬ್ಬಳ್ಳಿ ಸಂಸ್ಥೆಯ ಅಧ್ಯಕ್ಷೆ ಡಾ|| ಸುನಿತಾ ಲ ದಿವಟೆ ಹೇಳಿದರು.
ಗೋವಾ ರಾಜ್ಯದ ಮೀರಾಮಾರ್ ಬೀಚ್ ಹತ್ತಿರವಿರುವ ಗೋವಾದ (ಪಣಜಿ)ಯ ಸೋಲ್ಮಾರ ಹೋಟೇಲ್ ನಲ್ಲಿ ದಿನಾಂಕ: ನವೆಂಬರ್ 27 ರಂದು ರೇಣುಕಾ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ (ರಿ) ಹಾಗೂ ಸಮಾಜಮುಖಿ ಸೇವಾ ಸಂಸ್ಥೆ (ರಿ) ಗೋವಾ ಕನ್ನಡಿಗರ ಸಂಘದ ವತಿಯಿಂದ ಗೋವಾ ರಾಜ್ಯದಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯೋತ್ಸವ ಗತವೈಭವ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಈ ವೇಳೆ ಯಾದಗಿರಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಡಾ: ನಂದಕುಮಾರ ಪೂಜಾರಿ ಇವರ ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆಗೆ " ರಾಷ್ಟ್ರೀಯ ಮಾಧ್ಯಮ ರತ್ನ ಪ್ರಶಸ್ತಿ," ಶರಣಾರ್ಥಿ ಕನ್ನಡಿಗರೆ ಪತ್ರಿಕೆಯ ವರದಿಗಾರ ಬಾಪುಗೌಡ ಮೇಟಿ ಇವರ ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆಗೆ "ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ" ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಕೋರಿ ಅವರು ಕರ್ನಾಟಕದಲ್ಲಿನ ಕೋವಿಡ್ ಸಂದರ್ಭದಲ್ಲಿ ಅತಿ ಹೆಚ್ಚು ಸೇವೆಯನ್ನು ಸಲ್ಲಿಸಿದ ಪ್ರಯುಕ್ತ ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ “ವೈದ್ಯಕೀಯ ಪ್ರಯೋಗ ಶಾಲಾ ರತ್ನ ಪ್ರಶಸ್ತಿ,” ಮಲ್ಲಿಕಾರ್ಜುನ ದೇಸಾಯಿ ಅವರ ಕೃಷಿ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ "ಕರ್ನಾಟಕ ಕೃಷಿ ರತ್ನ ಪ್ರಶಸ್ತಿ," ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಯಾದಗಿರಿ ಜಿಲ್ಲಾ ಅಧ್ಯಕ್ಷ ಬಸವರಾಜ ಅಂಗಡಿ ಹಾಗೂ ಗೌರವಾಧ್ಯಕ್ಷ ಅಯ್ಯಣ್ಣ ಹೂಗಾರ ಅವರ ಕನ್ನಡಪರ ಸಂಘಟನೆಯಲ್ಲಿನ ಸಾಮಾಜಿಕ ಸೇವೆಯನ್ನು ಪರಿಗಣಿಸಿ “ಸಾಮಾಜಿಕ ಸೇವಾ ರತ್ನ ಪ್ರಶಸ್ತಿ” ಹಾಗೂ ಟಿ.ವಿ ದೃಶ್ಯ ಮಾಧ್ಯಮದಲ್ಲಿನ ಸೇವೆಯನ್ನು ಪರಿಗಣಿಸಿ ಉಸ್ಮಾನ ಪಟೇಲ್ ಬಿರಾದಾರ ಅವರಿಗೆ " ಟಿ.ವಿ ದೃಶ್ಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿ" ಯನ್ನು ಕೊಟ್ಟು ಗೌರವಿಸಲಾಯಿತು.
ಇದಲ್ಲದೇ ಕರ್ನಾಟಕದಲ್ಲಿನ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತರು, ಕೃಷಿಕರು, ಉದ್ಯಮಿಗಳು, ಇವರೆಲ್ಲರ ಸಾಮಾಜಿಕ ಸೇವೆ ಪರಿಗಣಿಸಿ ಹಲವಾರು ಕ್ಷೇತ್ರದ ಸಾಧಕರಿಗೆ ಗೋವಾ ರಾಜ್ಯದಲ್ಲಿ ಕನ್ನಡಿಗರ ಸೇವೆಯನ್ನು ಗುರುತಿಸಿ ಗೌರವಿಸಿ ಪ್ರಶಸ್ತಿ ಪುರಸ್ಕಾರವನ್ನು ನೀಡಿದ್ದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಣವಿ ಹೊನ್ನಾಪುರದ ಆರೂಢ ದರ್ಶನ ಜ್ಞಾನ ಪ್ರಕಾಶನ ಆಶ್ರಮದ ವಿದ್ಯಾನಂದ ಸ್ವಾಮಿಜಿ, ಹಾಗೂ ಸಾನಿಧ್ಯ ತಾವರಗೇರಿ ಕಾಯಕಯೋಗಿ ಸದ್ಗುರು ಮಾಣಿಕ್ಯ ಆಶ್ರಮದ ಸ್ವಾಮಿಜಿ ಪ.ಪೂ. ಶ್ರೀ ಬಸವ ಶಾಸ್ತ್ರೀಗಳು ವಹಿಸಿದ್ದರು.
Tags
ಜಿಲ್ಲಾ ಸುದ್ದಿಗಳು