ನೀರಿನ ಟ್ಯಾಂಕ್ ನಲ್ಲಿ ನಾಗರಹಾವು ಪ್ರತ್ಯಕ್ಷ, ಊರಗತಜ್ಞರಿಂದ ರಕ್ಷಣೆ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಡಿಸೆಂಬರ್ 01 : ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಪಂ ವ್ಯಾಪ್ತಿಯ ಬುದ್ದಿನ್ನಿ ಎಸ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿನ ನೀರಿನ ಟ್ಯಾಂಕ್ (ಸಂಪ್) ನಲ್ಲಿ ಕಾಣಿಸಿಕೊಂಡ ನಗರ ಹಾವನ್ನು ಹಿಡಿದು ರಕ್ಷಣೆ ಮಾಡಿದ ಉರಗ ತಜ್ಞ ಶಾಂತಯ್ಯಸ್ವಾಮಿ.
ಬುಧುವಾರ ಬುದ್ದಿನ್ನಿ ಎಸ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿನ ನೀರಿನ ಟ್ಯಾಂಕ್ (ಸಂಪ್) ನಲ್ಲಿ ಕಾಣಿಸಿಕೊಂಡ ನಾಗರಹಾವನ್ನು ಕಂಡು ವಿದ್ಯಾರ್ಥಿಗಳು ಭಯಭೀತರಾಗಿದ್ದರು. ವಿಷಯ ತಿಳಿದ ಬುದ್ದಿನ್ನಿ ಎಸ್ ಶಾಲಾ ಎಸ್ ಡಿಎಂಸಿ ಅಧ್ಯಕ್ಷ ನಾಗರಡ್ಡೆಪ್ಪ ದೇವರಮನಿ ಮುಖಂಡ ಬಸವರಾಜ ಇಳಿಗೇರ ಮಸ್ಕಿಯಿಂದ ಊರಗ ತಜ್ಞ ಶಾಂತಯ್ಯಸ್ವಾಮಿಯನ್ನು ಶಾಲೆಗೆ ಕರೆತಂದು ನೀರಿನಲ್ಲಿದ್ದ ನಾಗರಹಾವನ್ನು ಹಿಡಿದು ರಕ್ಷಿಸಿದ ನಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟರು. ನಂತರ ಹಾವನ್ನು ದೂರದ ಕಾಡಿಗೆ ಬಿಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಕಳಕಪ್ಪ ಹಾದಿಮನಿ ಶಿಕ್ಷಕ ಆದೇಶ ಸಾನಬಾಳ ಗ್ರಾಮಸ್ಥರಾದ ಪಂಪಣ್ಣ ಬಡಿಗೇರ ಸೇರಿದಂತೆ ಇನ್ನಿತರರು ಇದ್ದರು.

Post a Comment

Previous Post Next Post