ಜನನಿ ಪಿಯು ಕಾಲೇಜಿನಲ್ಲಿ ಪರಿಸರ ಜಾಗೃತಿ ಶಿಬಿರ ಕಾರ್ಯಕ್ರಮ


ಸುದ್ದಿ ಸಂಪಾದಕರು: ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಡಿಸೆಂಬರ್ 01 : ತಾಲೂಕಿನ ಹಾಲಾಪೂರ ಗ್ರಾಮದಲ್ಲಿ ಇರುವ ಜನನಿ ಪದವಿ ಪೂರ್ವ ಕಾಲೇಜ್‌ನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಪರಿಸರ ಜಾಗೃತಿ ಶಿಬಿರ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಕುರಿತು ಉಪನ್ಯಾಸಕರಾದ ಸಿದ್ದಾರ್ಥ ಪಾಟೀಲ್ ರವರು ಮಾತನಾಡುತ್ತಾ ಇಂದು ಪರಿಸರದ ಜಾಗೃತಿ ಎಲ್ಲರೂ ಮಾಡಬೇಕು, ಪರಿಸರ ನಮ್ಮೆಲ್ಲರ ಉಸಿರು, ಪ್ರತಿಯೊಬ್ಬರು ತಮ್ಮ ಮನೆ ಮತ್ತು ಹೊಲ ಗದ್ದೆಗಳಲ್ಲಿ ಗಿಡಮರಗಳನ್ನು ಬೆಳಸಬೇಕು ಹಾಗೆ ಇರುವ ಗಿಡಮರಗಳನ್ನು ರಕ್ಷಿಸಬೇಕು. ಸರಕಾರ ಸಹ ಪರಿಸರ ಜಾಗೃತಿಗಾಗಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡ ದೇಶವನ್ನು ಹಸಿರುಮಯ ರಾಷ್ಟ್ರವನ್ನಾಗಿ ಮಾಡಲು ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಬೇಕು ಎಂದರು. ಹಾಗೆ ಪರಿಸರದ ಕುರಿತು ವಿದ್ಯಾರ್ಥಿನಿ ಐಶ್ವರ್ಯ ದ್ವಿತೀಯ ಪಿಯುಸಿ ಉಪನ್ಯಾಸಕರಾದ ಮರಿಸ್ವಾಮಿ ಸಂಸ್ಥೆಯ ಕೃಷಿ ಅಧಿಕಾರಿ ಶಿವಾನಂದ ರವರು ಮಾತನಾಡಿದರು.ನಂತರ ಪರಿಸರ ಜಾಗೃತಿ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಾದ ಸ್ವಾತಿ,ಭೂಮಿಕಾ, ಸುವರ್ಣ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಿದ್ದಾರ್ಥ ಪಾಟೀಲ್, ಶಿವಾನಂದ ಕೃಷಿ ಅಧಿಕಾರಿ, ವಿರೇಶ ಜಂಗಮರಹಳ್ಳಿ, ಮರಿಸ್ವಾಮಿ, ಯುನಸ್ ಅಕ್ರಮ್,ಮೇಲ್ವಿಚಾರಕ ಮುತ್ತುರಾಜ ವಿದ್ಯಾರ್ಥಿಗಳು ಇದ್ದರು.

Post a Comment

Previous Post Next Post