ಬೆಂಗಳೂರು ನಗರ ಡಿ.ಸಿ. ಕೆ.ಎ.ದಯಾನಂದ, ಐ.ಎ.ಎಸ್ ರವರಿಗೆ ಶುಭ ಕೋರಿದ ಎನ್.ಐ.ಬಿ. ಸಹೋದರರು

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬೆಂಗಳೂರು, ಡಿಸೆಂಬರ್ 27 : ಬೆಂಗಳೂರು ನಗರ ಜಿಲ್ಲೆಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳಾಗಿ 2 ನೇ ಬಾರಿಗೆ ನೇಮಕಗೊಂಡಿರುವಂತಹ ರಾಜ್ಯದ ದಕ್ಷ, ಪ್ರಾಮಾಣಿಕ, ಜನಪ್ರಿಯ ಹಾಗೂ ಜನಾನುರಾಗಿ, ಹಿರಿಯ ಐ.ಎ.ಎಸ್. ಅಧಿಕಾರಿಗಳಾದ ಶ್ರೀಯುತ ಕೆ.ಎ.ದಯಾನಂದ, ಭಾ.ಆ.ಸೇ. ಅವರನ್ನು ಎನ್.ಐ.ಬಿ. ವತಿಯಿಂದ ಭೇಟಿಯಾಗಿ ಶುಭಾಶಯ ಕೋರಿ, ಅಭಿನಂದನೆ ಸಲ್ಲಿಸಲಾಯಿತು.

ಸದರಿ ವೇಳೆಯಲ್ಲಿ ಪ್ರಥಮ ಭೇಟಿಯ ಸವಿ ನೆನಪಿನ ಕಿರು ಕಾಣಿಕೆಯಾಗಿ ರಾಷ್ಟಕವಿ ಕುವೆಂಪು ರವರ 'ವಿಚಾರ ಕ್ರಾಂತಿಗೆ ಆಹ್ವಾನ' ಮತ್ತು ಅಹಿಂದ ಶಿವ ಅವರ 'ಕೊನೆಯಲ್ಲದ ಮೊದಲು' ಕನ್ನಡ ಪುಸ್ತಕಗಳನ್ನು ಸ್ವತಃ ಲೇಖಕರು, 'ಹಾದಿಗಲ್ಲು' ಪುಸ್ತಕದ ಬರಹಗಾರರು, ಕನ್ನಡ ಸಾಹಿತ್ಯ ಪ್ರಿಯ ಬೆಂಗಳೂರು ನಗರ ಡಿ.ಸಿ. ಕೆ.ಎ.ದಯಾನಂದ, ಐ.ಎ.ಎಸ್. ಅವರಿಗೆ ಎನ್.ಐ.ಬಿ. ಸಹೋದರರು ಉಡುಗೊರೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ ಹೋಬಳಿ, ಕಾಡ ಅಗ್ರಹಾರ ಗ್ರಾಮದ ಹಿರಿಯ ಮುಖಂಡರು, ಸಮಾಜ ಸೇವಕರು ಹಾಗೂ ನಾಗಪ್ಪ ಇಂಟರ್ ಲಾಕ್ ಬ್ಲಾಕ್ ನ ಮಾಲೀಕರಾದ ಎನ್.ಐ.ಬಿ. ಕಾಂತರಾಜ್ ಮತ್ತು ಇವರ ಕಿರಿಯ ಸಹೋದರರಾದ ಯುವ ಮುಖಂಡರು, ಯುವ ಕವಿಗಳು ಹಾಗೂ ಸಾಮಾಜಿಕ ಹೋರಾಟಗಾರರಾದ ಎನ್.ಐ.ಬಿ. ಶಿವರಾಜ್ ರವರು ಜೊತೆಯಲ್ಲಿ ಉಪಸ್ಥಿತರಿದ್ದರು.

Post a Comment

Previous Post Next Post