ರಂಗೋಲಿಯಲ್ಲಿ ವಿಜ್ಞಾನ ಚಿತ್ರ ಪ್ರದರ್ಶನ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
ವರದಿ:ಶರಣಪ್ಪ ಹೆಳವರ,ಬಾಗಲಕೋಟೆ
ಇಲಕಲ್ಲ, ಡಿಸೆಂಬರ್ 27 : ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾದ ಶಾಲೆಯಲ್ಲಿ ವಿದ್ಯಾರ್ಥಿಗಳು ರಂಗೋಲಿಯಲ್ಲಿ ವಿಶಿಷ್ಠವಾದ ವಿಜ್ಞಾನ ಹಾಗೂ ಪರಿಸರ ಅಧ್ಯಯನದ ಚಿತ್ರಗಳನ್ನು ಬಿಡಿಸಿ ಪ್ರದರ್ಶನ ಮಾಡಿದರು.

ರಂಗೋಲಿ ವಿಜ್ಞಾನ ಚಿತ್ರ ಪ್ರದರ್ಶನವನ್ನು ಶಿಕ್ಷಣ ಸಂಯೋಜಕರಾದ ಶ್ರೀ ಈಶ್ವರ ಅಂಗಡಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅಂಗಡಿ ಶಾಲೆಯ ವಿದ್ಯಾರ್ಥಿ,ವಿದ್ಯಾರ್ಥಿನಿಯರು ವಿಶೇಷವಾದ ವಿಜ್ಞಾನ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಿ ಪ್ರದರ್ಶನ ಮಾಡಿರುವುದು ಮಾದರಿಯಾಗಿದ್ದು ಇದಕ್ಕಾಗಿ ಶ್ರಮಿಸಿದ ವಿಜ್ಞಾನ ಅತಿಥಿ ಶಿಕ್ಷಕಿಯರಾದ ಶ್ರೀಮತಿ ಗೀತಾಂಜಲಿ ಕನ್ನೂರ ಹಾಗೂ ಚಿತ್ರ ಬಿಡಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪಿ ಎಸ್ ಪಮ್ಮಾರ, ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಎಂ ಎಸ್ ಬೀಳಗಿ,ಹಿರಿಯ ಶಿಕ್ಷಕರಾದ ಎ ಡಿ ಬಾಗವಾನ,ಶ್ರೀಮತಿ ಜಿ ಕೆ ಮಠ,ಶ್ರೀಮತಿ ಆರ್ ಎಸ್ ಕೊಡಗಲಿ,ಶ್ರೀಮತಿ ಎಂ ಎನ್ ಅರಳಿಕಟ್ಟಿ, ಶ್ರೀಮತಿ ಎಂ ಪಿ ಚೇಗೂರ,ಶ್ರೀಮತಿ ಎಸ್ ಎನ್ ಜೋಗಿನ,ಶ್ರೀಮತಿ ಪಿ ಎಸ್ ಹೊಸೂರ, ಶ್ರೀಮತಿ ಎಸ್ ಎಂ ಮಲಗಿಹಾಳ,ಶ್ರೀಮತಿ ಸಾಯಿರಾ ಹೆರಕಲ್ ಉಪಸ್ಥಿತರಿದ್ದರು.


Post a Comment

Previous Post Next Post