UDAYAVANI NEWS
ಮಸ್ಕಿ, ಡಿಸೆಂಬರ್ 28 : ಪಟ್ಟಣದ ಭ್ರಮರಾಂಬ ದೇವಾಸ್ಥಾನದ ಭವನದಲ್ಲಿ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರಾದ ಕೆ. ನಾಗಲಿಂಗ ಸ್ವಾಮಿ ರವರು ರಾಜ್ಯಾಧ್ಯಕ್ಷ ಕೆ ಶಿವರಾಂ ಅವರ ಆದೇಶದ ಮೇರೆಗೆ ಮಂಗಳವಾರ ಛಲವಾದಿ ಮಹಾಸಭಾದ ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಯನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಮೊದಲಿಗೆ ಗಣ್ಯರನ್ನು ಸ್ವಾಗತಿಸಿ, ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ನಂತರ ಕಾರ್ಯಕ್ರಮದ ಕುರಿತು ಗಣ್ಯರು ತಮ್ಮ ಹಿತ ನುಡಿಗಳನ್ನು ತಿಳಿಸಿದರು. ನಮ್ಮ ಸಮಾಜದ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ಐಎಎಸ್,ಐಪಿಎಸ್, ಕೆಎಎಸ್ ಅಧಿಕಾರಿಗಳಾಗಿ ಹೊರ ಹೊಮ್ಮಲು ಸುಸಜ್ಜಿತವಾದ ಕೋಚಿಂಗ್ ಸೆಂಟರ್ ಗಳನ್ನು ತೆರೆಯಬೇಕು ಎಂದು ಹನುಮಂತಪ್ಪ ಗೋಮರ್ಸಿ ಜಿಲ್ಲಾ ಉಪಾಧ್ಯಕ್ಷರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಮ್ಮ ಸಮಾಜವು ಸಮಾಜದ ಹೇಳ್ಗೆ ಜೊತೆಗೆ ಇತರ ಸಮಾಜದವರನ್ನು ಗಣನೆಗೆ ತೆಗೆದುಕೊಳ್ಳಬೇಕು. ಒಂದು ವೇಳೆ ಒಂದೇ ಸಮಾಜದ ಬಗ್ಗೆ ನಾವು ಯೋಚಿಸದರೇ ಅದು ಸ್ವಾರ್ಥದ ಭಾವನೆ ಮೂಡುವುದು. ಹಾಗಾಗಿ ಎಲ್ಲರನ್ನು ಗಣನೆಗೆ ತೆಗೆದುಕೊಂಡು ಎಲ್ಲರ ಸಮಸ್ಯೆಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಶಿಕ್ಷಣ, ರಾಜಕೀಯ,ಸಂಘಟನೆ ಸೇರಿ ಎಲ್ಲಾ ರಂಗದಲ್ಲಿ ಜನಮನಗೆದ್ದು ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜದ ಹಿತಕ್ಕಾಗಿ ಸೇವೆ ಸಲ್ಲಿಸಿ ಎಂದು ಛಲವಾದಿ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಕೆ.ನಾಗಲಿಂಗ ಸ್ವಾಮಿ ಮಾತನಾಡಿದರು.
ಹೀಗೆ ವೇದಿಕೆಯ ಕಾರ್ಯಕ್ರಮದ ಕುರಿತು ನೂತನ ಅಧ್ಯಕ್ಷ ಅಶೋಕ ಕಟ್ಟಿಮನಿ, ಮೌನೇಶ್ ಅಮೀನಗಡ, ಮಲ್ಲಪ್ಪ ಗೋನಾಳ, ಶಿವು ರಾಮಣ್ಣ ಗೋನವಾರ, ಹನುಮಂತಪ್ಪ ವಕೀಲರು ಮಾತನಾಡಿದರು.
ತದ ನಂತರ ನೂತನ ಅಧ್ಯಕ್ಷರಾಗಿ ಅಶೋಕ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಹುಚ್ಚರೆಡ್ಡಿ ಹಿರೇದಿನ್ನಿ ಯವರನ್ನು ಆಯ್ಕೆ ಮಾಡಲಾಯಿತು.ನಂತರ ನೂತನ ಛಲವಾದಿ ಮಹಾಸಭಾದ ಮಸ್ಕಿ ತಾಲೂಕ ಅಧ್ಯಕ್ಷರಿಗೆ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಅಧ್ಯಕ್ಷರಿಗೆ ವಿವಿಧ ತಾಲೂಕ ಪದಾಧಿಕಾರಿಗಳಿಗೆ ಹಾಗೂ ಇತ್ತೀಚೆಗೆ ನೂತನ ಎಸ್ ಡಿ ಎಂ ಸಿ ಸಮಿತಿಯ ಸಮುದಾಯದ ಪದಾಧಿಕಾರಿಗಳಿಗೆ ಶಾಲು ಹೂವಿನ ಹಾರ ಹಾಕುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ
ವೇದಿಕೆಯ ಮೇಲೆ ಆಸೀನರಾಗಿದ್ದ ಲಕ್ಷ್ಮಣ ಜಾನೆಕಲ್, ನರಸಪ್ಪ ಕಟ್ಟಿಮನಿ, ಮೌನೇಶ್ ದೊಡ್ಡಮನಿ, ಬಸವರಾಜ್ ಇರಕಲ್, ಹುಲುಗಪ್ಪ ಹಸ್ಮಕಲ್, ಯಮುನಪ್ಪ ತಳವಾರ್, ದುರುಗಮ್ಮ ಹಾಗೂ
ಛಲುವಾದಿ ಸಮುದಾಯದ ಮುಖಂಡರುಗಳಾದ
ನಾಗರತ್ನ ಕಟ್ಟಿಮನಿ, ಬಸವರಾಜ್ ಗೌಡನಭಾವಿ, ನೀಲಕಂಠಪ್ಪ ರಂಗಾಪುರ,ಗಂಗಪ್ಪ ಹಸ್ಮಕಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು