UDAYAVANI NEWS
ಮಸ್ಕಿ, ಡಿಸೆಂಬರ್ 28 : ಶಾಸಕ ಆರ್ ಬಸನಗೌಡ ತುರುವಿಹಾಳ ಅವರ ಸಹೋದರ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ದ್ರೋಹ ಮಾಡಿದ್ದಾರೆ. ಆದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಿಂದ ನಾನೂ ಸ್ಪರ್ಧೆ ಮಾಡುವುದು ಖಚಿತ ಎಂದು ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ ಮಾದ್ಯಮಕ್ಕೆ ತಿಳಿಸಿದ್ದಾರೆ.
ಮಂಗಳವಾರ UDAYAVANI NEWS ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ಶಾಸಕ ಆರ್.ಬಸನಗೌಡ ತುರುವಿಹಾಳ ಅವರ ಗೆಲುವಿಗಾಗಿ ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರು ಶ್ರಮಿಸಿದ್ದಾರೆ. ಆದರೆ ಶಾಸಕರು ಹಾಗೂ ಅವರ ಸಹೋದರ ನಮ್ಮನ್ನು ಬಳಸಿಕೊಂಡು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು. ಸೌಜನ್ಯಕ್ಕಾದರೂ ನಮ್ಮನ್ನು ಕೇಳದೆ ಅಪಮಾನ ಮಾಡುತ್ತಿದ್ದಾರೆ ಅವರು ಅಧಿಕಾರದ ರುಚಿ ಉಂಡು ಈಗ ದರ್ಪದಿಂದ ಮೆರೆಯುತ್ತಿದ್ದಾರೆ. ಅಲ್ಲದೇ ಆರಿಸಿದ್ದನಗೌಡ ಅವರು ಹಿರಿಯ ರಾಜಕಾರಣಿಗಳಿಗೆ ಏಕವಚನದಲ್ಲಿ ಮಾತಾಡಿ ಸಣ್ಣ ತನ ತೋರಿಸುತ್ತಿದ್ದಾರೆ ಎಂದರು.
ಮಸ್ಕಿ ಕ್ಷೇತ್ರದ ಅಭಿವೃದ್ಧಿಗಿಂತ ಅವರು ಸ್ವಂತ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ ನಾನು ತಾಲೂಕು ಪಂಚಾಯತ್ ಅಧ್ಯಕ್ಷ ಆಗಿದ್ದು ಸಂಸದ ಸಂಗಣ್ಣ ಕರಡಿ, ಶಾಸಕರಾದ ಶಿವನಗೌಡ ನಾಯಕ,ರಾಜುಗೌಡ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ಬೆಂಬಲದಿಂದ ಹೊರೆತು
ಆರ್ .ಬಸನಗೌಡ ಹಾಗೂ ಅವರ ಸಹೋದರನಿಂದಲ್ಲ. ಅಲ್ಲದೆ ಮುಂದಿನ ದಿನಮಾನಗಳಲ್ಲಿ ಆರ್.ಬಸನಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದರು ಅಚ್ಚರಿ ಪಡಬೇಕಾಗಿಲ್ಲ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದ ಖಚಿತ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ಮುಂದೆ ತಿಳಿಸುತ್ತೇನೆ ಅಲ್ಲದೆ ಕ್ಷೇತ್ರದಲ್ಲಿ ಮುಂದೆ ಭಾರಿ ಬದಲಾವಣೆಯಾಗಲಿದೆ ಕಾಂಗ್ರೆಸ್ ಮುಖಂಡರು ನನಗೆ ಬೆಂಬಲಿಸಿಲಿದ್ದಾರೆ ಎಂದು ತಮ್ಮ ಮನದಾಳದ ಮಾತುಗಳನ್ನು UDAYAVANI NEWS ಮೂಲಕ ಹೊರ ಹಾಕಿದರು.
Tags
ಜಿಲ್ಲಾ ಸುದ್ದಿಗಳು