ಎಚ್.ಡಿ ಕುಮಾರಣ್ಣನವರ ಕುಟುಂಬಸ್ಥರು ಅಭ್ಯರ್ಥಿಯಾಗಲಿ- ಮುದ್ದಲಪಲ್ಲಿ ರಾಜಾರೆಡ್ಡಿ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
ವರದಿ : ಡಿ.ವಿ ರಮೇಶ್ ಕುಮಾರ್ 
ಬಾಗೇಪಲ್ಲಿ, ಡಿಸೆಂಬರ್ 11 : ಪಕ್ಷ ಸಂಘಟನೆ ಹಾಗೂ ಅಧಿಕಾರಕ್ಕೆ ತರಲು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಕುಟುಂಬಸ್ಥರಾದ ನಿಖಿಲ್ ಕುಮಾರಸ್ವಾಮಿ ಅಥವಾ ಅನಿತಾ ಕುಮಾರಸ್ವಾಮಿಯವರು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸ್ಪರ್ಧಿಸಿದರೆ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಎರಡು ಜಿಲ್ಲೆಗಳಲ್ಲಿ 11 ಕ್ಷೇತ್ರಗಳು ಸಹ ಗೆಲುವನ್ನು ಸಾದಿಸಬಲ್ಲೇವು ಎಂಬ ಅಭಿಪ್ರಾಯವನ್ನು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ರಾಜ್ಯ ಜೆಡಿಎಸ್ ಯುವ ಬ್ರಿಗೇಡ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್.ರಾಜಾರೆಡ್ಡಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಸಾಂಪ್ರದಾಯಿಕ ಮತಗಳಿವೆ. ಅವನ್ನು ಹೊರತು ಪಡಿಸಿದರೆ ಪಕ್ಷ ಸಂಘಟನೆ ಬಹಳಷ್ಟು ಹಿನ್ನಡೆಯಲ್ಲಿದೆ.ಆದರೆ ಜೆಡಿಎಸ್ ಮತದಾರರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಅಪಾರ ಬೆಂಬಲಿಗರು ಸರಿಯಾದ ನಾಯಕನಿಲ್ಲದೆ ಅತಂತ್ರದಲ್ಲಿದ್ದಾರೆ.ಬಾಗೇಪಲ್ಲಿ ಮತಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿ ಹಲವರು ಪ್ರಯತ್ನಿಸುತ್ತಿರುವುದು ನಿಜಾ. ಆದರೆ ಅವರ ರಾಜಕೀಯ ಚಾರಿತ್ರ್ಯ ಪರಿಶೀಲಿಸಿದಾಗ ಮತದಾರರನ್ನು ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಪಷ್ಟವಾಗಿ ಕಾಣುತ್ತಿದೆ. ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಗುಡಿಬಂಡೆ, ಬಾಗೇಪಲ್ಲಿ ಮತ್ತು ಚೇಳೂರು ತಾಲ್ಲೂಕುಗಳಲ್ಲಿ ಸಂಘಟಿಸಿದರೆ ಪಕ್ಷದ ಗೆಲವು ನಿಶ್ಚಿತವಾಗುತ್ತದೆ. ಏಕೆಂದರೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜನರಿಗೆ ಚಿಕ್ಕಬಳ್ಳಾಪುರವನ್ನು ಜಿಲ್ಲೆಯನ್ನಾಗಿ ಮಾಡಿ ದಶಕಗಳ ನೋವನ್ನು ನಿವಾರಿಸಿದರೆ. ಅಷ್ಟೇ ಅಲ್ಲದೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಚೇಳೂರು ಹೋಬಳಿಯನ್ನು ತಾಲ್ಲೂಕಾಗಿ ಮಾಡಿದವರು ಕುಮಾರಸ್ವಾಮಿಯವರ ಸರ್ಕಾರ. ಅಷ್ಟೆ ಅಲ್ಲದೆ ಲಕ್ಷಾಂತರ ಬಡ ರೈತರ ಸಾಲವನ್ನು ಮನ್ನಾ ಮಾಡಿದರು.‌ಹಾಗಾಗಿ ಜನಪರವಾಗಿ ನಿರಂತರ ಶ್ರಮಿಸುವ ಜೆಡಿಎಸ್ ಸರ್ಕಾರ ಬಂದರೇನೆ ಸರ್ವಜನಾಂಗದ ನೆಮ್ಮದಿ ಕಾಣಲು ಸಾಧ್ಯ ಎಂದು ರಾಜ್ಯ ಜೆಡಿಎಸ್ ಯುವ ಬ್ರಿಗೇಡ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್.ರಾಜಾರೆಡ್ಡಿ ರವರು ತಿಳಿಸಿದರು. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷವನ್ನು ಈ ಕ್ಷೇತ್ರದಲ್ಲಿ ಗೆಲ್ಲಿಸಬೇಕಾದರೆ ಡಿ.ಜೆ ನಾಗರಾಜರೆಡ್ಡಿಯವರ ಬದಲಾಗಿ ಕುಮಾರಣ್ಣನವರ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನಾಗಲಿ ಅಥವಾ ಅನಿತಾ ಕುಮಾರಸ್ವಾಮಿಯವರನ್ನಾಗಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇದೇ ಅಂಶವನ್ನು ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲೂ ಈ ಕ್ಷೇತ್ರದ ಸುಮಾರು 500 ಕ್ಕೂ ಹೆಚ್ಚು ಮಂದಿ ಅಭ್ಯರ್ಥಿ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ ಎಂದು ಅವರು ತಿಳಿಸಿದರು. ಈ ಸಂಧರ್ಭದಲ್ಲಿ ಗೊಟ್ಟಿಗೆರೆ ಮಂಜುನಾಥ್,ಹರಿನಾಥರೆಡ್ಡಿ,ಕೆ.ರಾಮಕೃಷ್ಣರೆಡ್ಡಿ,
ಮಾಜಿ ವಿಧಾನ ಪರಿಷತ್ತಿನ ತುಪಲ್ಲಿ ಚೌಡರೆಡ್ಡಿ,ತಾಲೂಕು ಪಂಚಾಯತಿ ಮಾಜಿ ಸದಸ್ಯ ವೆಂಕಟರಾಮರೆಡ್ಡಿ,ಚಂದ್ರ ಶೇಖರ್ ,ಪೆದ್ದರೆಡ್ಡಿಪಲ್ಲಿ ಆದಿನಾರಾಯಣ ಸೇರಿದಂತೆ ಹಲವರು ಮುಖಂಡರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post