ಗವಿಶ್ರೀ ಅವರ ಆಶ್ರಯದಲ್ಲಿ ಸಂಡೆ ಫಾರ್ ಸೋಶಿಯಲ್ ವರ್ಕ್ ನ ಅಮೃತ ಮಹೋತ್ಸವ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಕೊಪ್ಪಳ, ಡಿಸೆಂಬರ್ 11 : ಸ್ವಚ್ಛ ಭಾರತದ ಹಾದಿಯಲ್ಲಿ ನಡೆದು ಬಂದ ಅಭಿನಂದನ್ ಸಂಸ್ಥೆಯ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನವು ಸತತವಾಗಿ 75 ವಾರಗಳ ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದ್ದು, ಪ್ರಸ್ತುತ ಈ ವಾರ ಈ ಅಭಿಯಾನದ ಅಮೃತ ಮಹೋತ್ಸವದ ಹೊನಲಲ್ಲಿದ್ದು ಈ ವಿಶೇಷ ಸೇವಾ ಕಾರ್ಯವನ್ನು ಕೊಪ್ಪಳದ ಗವಿ ಮಠದ ಶ್ರೀಗಳ ಅಮೃತ ಹಸ್ತದಿಂದ ಚಾಲನೆಯನ್ನು ಪಡೆದುಕೊಂಡಿತು. ಶ್ರೀಗಳ ಅಪ್ಪಣೆಯಂತೆ ಗವಿಮಠದ ಗವಿಸಿದ್ದೇಶ್ವರ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿನ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಚತಾ ಕಾರ್ಯ ಮಾಡಲಾಯಿತು. ಅಮೃತ ಮಹೋತ್ಸವ ಆವೃತ್ತಿಗೆ ಚಾಲನೆ ನೀಡಿದ ನಂತರ ಈ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನವು ಬಹಳ ಒಳ್ಳೆಯ ಕಾರ್ಯವಾಗಿದೆ. ಇದರಿಂದಾಗಿ ಯುವಕರಲ್ಲಿ ಸ್ವಚ್ಚತೆಯ ಬಗ್ಗೆ ಅರಿವನ್ನು ಮೂಡಿಸಲು ಒಂದು ಉತ್ತಮ ಅಭಿಯಾನವಾಗಿದೆ. ಈ ಅಭಿಯಾನ ಇನ್ನೂ ಹೆಚ್ಚಿನ ಯಶಸ್ವಿ ಆವೃತ್ತಿಯ ವಾರಗಳನ್ನು ಪೂರೈಸಲಿ ಎಂದು ಆಶಿರ್ವಚನ ನೀಡಿದರು.


ಈ ಸೇವಾ ಕಾರ್ಯದಲ್ಲಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಪದಾಧಿಕಾರಿಗಳಾದ ಜಾಫರಮಿಯ, ಮಲ್ಲಿಕಾರ್ಜುನ ಬಡಿಗೇರ, ರವಿಚಂದ್ರ, ಅಮಿತಕುಮಾರ್ ಪುಟ್ಟಿ, ಕಾರ್ತಿಕ್ ಜೋಗಿನ್, ಮಂಜುನಾಥ, ಬಸಲಿಂಗಪ್ಪ ಬಾದರ್ಲಿ, ಮಲ್ಲಯ್ಯ, ಕಿಶೋರ್ ಹಾಗೂ ಸ್ವಯಂ ಸೇವಕರಾದ ಅಮರೇಶ, ವೀರೇಶ ದೇವರಮನಿ, ವೀರೇಶ ಬೆಳಗುರ್ಕಿ, ಜಡೇಶ, ಸಂತೋಷ್, ಶರಣಬಸವ ಮತ್ತಿತರರು ಭಾಗವಹಿಸಿದ್ದರು.

Post a Comment

Previous Post Next Post