ಅಪರಾಧ ತಡೆ ಮಾಸಾಚರಣೆ: ರಸ್ತೆ ಅಪಘಾತ ಹಾಗೂ ನಿಯಮಗಳನ್ನು ತಡಯಲು ಸಾರ್ವಜನಿಕರ ಸಹಕಾರ ಅಗತ್ಯ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಹುಣಸಗಿ, ಡಿಸೆಂಬರ್ 12 : ಸಮೀಪದ ಬಲಶೆಟ್ಟಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆಯನ್ನು ಹುಣಸಗಿ ಪೋಲಿಸ್ ಠಾಣೆ ವತಿಯಿಂದ ಆಚರಿಸಲಾಯಿತು.

ಈ ವೇಳೆ ಹುಣಸಗಿ ಠಾಣೆ ಪಿ.ಎಸ್.ಐ ಚಿದಾನಂದ ಸೌದಿ ಮಾತನಾಡಿ ಇತ್ತೀಚಿಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು ಇದರಿಂದಾಗಿ ಅಪಘಾತಕ್ಕೆ ಒಳಗಾದ ಕುಟುಂಬ ವರ್ಗಕ್ಕೆ ತುಂಬಾ ನೋವುಂಟಾಗುತ್ತಿದ್ದು ಆ ಕುಟುಂಬಗಳು ಕಣ್ಣಿರಿನಲ್ಲಿ ತೇಲುವಂತಾಗಿದೆ ಹಾಗಾಗಿ ಪ್ರತಿಯೊಬ್ಬರೂ ರಸ್ತೆ ಅಪಘಾತ ಮತ್ತು ರಸ್ತೆ ನಿಯಮಗಳನ್ನು ತಡೆಯಲು ಪೋಲಿಸರಿಗೆ ಸಹಕರಿಸುವುದರ ಜೊತೆಗೆ ಇತರೆ ಕುಟುಂಬವನ್ನು ರಕ್ಷಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.

ಜೊತೆಗೆ ಸರಕಾರಿ ಪ್ರೌಢ ಶಾಲೆ ಬಲಶೆಟ್ಟಿಹಾಳದ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ರಸ್ತೆ ತಡೆ ಮಾಸಾಚರಣೆ ಆಚರಿಸುವುದರೊಂದಿಗೆ
 ರಸ್ತೆ ಅಪಘಾತ, ರಸ್ತೆ ನಿಯಮಗಳು ಮತ್ತು ಅಪರಾಧ ತಡೆಯುವಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರ ಅತ್ಯವಶ್ಯಕವಿದ್ದು ಅವಶ್ಯಕತೆ ಇರುವ ಏರಿಯಾಗಳಲ್ಲಿ CCTV ಕ್ಯಾಮೆರಗಳ ಅಳವಡಿಕೆ , ಗೃಹ ಸುರಕ್ಷಾ ಅಪ್ಲಿಕೇಶನ್ ಬಳಕೆ ಮಾಡಬೇಕು ಮತ್ತು ERSS 112 ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಈ ವೇಳೆ ಶಾಲೆಯ ಶಿಕ್ಷಕರಾದ ವಿಜಯಕುಮಾರ, ಬಸವರಾಜ ನೀಲಗಾರ, ಸೇರಿದಂತೆ ಶಾಲೆಯ ಶಿಕ್ಷಕರು ಇದ್ದರು.

Post a Comment

Previous Post Next Post