ಎಸ್. ಎಫ್.ಐ ನ 17 ನೇ ಅಖಿಲ ಭಾರತ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ರಮೇಶ ವೀರಾಪೂರು ಆಯ್ಕೆ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ರಾಯಚೂರು, ಡಿಸೆಂಬರ್ 12 : ಕ್ರಾಂತಿಕಾರಿ ಹೋರಾಟದ ಚರಿತ್ರೆಯ ನೆಲ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ 13 ರಿಂದ 16 ಡಿಸೆಂಬರ್ 2022ರ ವರೆಗೆ "Educate All, Employ All, Unite All " ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ) 17ನೇ ಅಖಿಲ ಭಾರತ ಸಮ್ಮೇಳನಕ್ಕೆ ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರು ಆಯ್ಕೆಯಾಗಿದ್ದಾರೆ.

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆಯು ದೇಶದ ಸ್ವಾತಂತ್ರಕ್ಕಾಗಿ 23 ನೇ ವಯಸ್ಸಿಗೆ ನೇಣುಗಂಬಕ್ಕೇರಿದ ಅಪ್ರತಿಮ ದೇಶಪ್ರೇಮಿ ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳ ಆಶಯಗಳನ್ನು ಮುಂದಕ್ಕೊಯ್ಯುತ್ತಿರುವ ವಸಹಾತುಶಾಹಿ, ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಪರಂಪರೆ ಹೊಂದಿರುವ ಭಾರತ ದೇಶದ ವಿದ್ಯಾರ್ಥಿಗಳನ್ನು ಪ್ರತಿನಿಧಿಸುವ ಅತಿ ದೊಡ್ಡ ಸಂಘಟನೆಯಾಗಿದೆ. " ಸರ್ವರಿಗೂ ಶಿಕ್ಷಣ- ಸರ್ವರಿಗೂ ಉದ್ಯೋಗ " ಹಕ್ಕಿಗಾಗಿ ಅಧ್ಯಯನ ಮತ್ತು ಹೋರಾಟದ ಧ್ಯೇಯಗೊಳೊಂದಿಗೆ ದೇಶದ ವಿದ್ಯಾರ್ಥಿ ಸಮುದಾಯವನ್ನು ಸಂಘಟಿಸುತ್ತಿದೆ.

ಶಿಕ್ಷಣದ ಖಾಸಗೀಕರಣ ನೀತಿಗಳಿಂದ ವ್ಯಾಪಾರದ ಸರಕಾಗಿದೆ. ಇದರ ನಡುವೆ ರಾಷ್ಟ್ರೀಯ ಶಿಕ್ಷಣ ನೀತಿ (ಎಸ್ಇಪಿ) ಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಪ್ರಜಾಸತ್ತಾತ್ಮಕವಾಗಿ ಅವಸರದಲ್ಲಿ ಜಾರಿಗೊಳಿಸುತ್ತಿರುವುದರಿಂದ ಪಠ್ಯ ಪುಸ್ತಕಗಳ ಕೇಸರೀಕರಣ, ಶಿಕ್ಷಣದ ಕಾರ್ಶೋರೇಟೀಕರಣ ತೀವ್ರವಾಗುತ್ತಿದೆ. ಇದರ ನಡುವೆ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಫೆಲೋಶಿಪ್ , ಶಿಕ್ಷಣ ಸಂಸ್ಥೆಗಳಲ್ಲಿ ಅಗತ್ಯ ಮೂಲ ಸೌಕರ್ಯಗಳು ಸಮರ್ಪಕವಾಗಿ ಸಿಗದೆ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇನ್ನೊಂದು ಕಡೆ ದೇಶದ ಜನರ ಐಕ್ಯತೆಯನ್ನು ನಾಶಗೊಳಿಸಲು ದಿನ ನಿತ್ಯ ಮತಾಂಧತೆ,ಕೋಮು ದ್ವೇಷ ಬಿತ್ತಲಾಗುತ್ತಿದೆ. ಆಳುವ ಸರ್ಕಾರ ಬಂಡವಾಳಶಾಹಿಗಳ ಕೈಗೊಂಬೆಯಾಗಿ ಶಿಕ್ಷಣ, ಉದ್ಯೋಗ, ಆರೋಗ್ಯ ವನ್ನು ಹಣ ಉಳ್ಳವರ ಸ್ವತ್ತಾಗಿಸುತ್ತಿರುವ ಈ ದುರಿತ ಕಾಲದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಅಖಿಲ ಭಾರತ ಸಮ್ಮೇಳನದಲ್ಲಿ ದೇಶದ ಶಿಕ್ಷಣ ರಂಗದ ಮೇಲಿನ NEP ದಾಳಿ, ನಿರುದ್ಯೋಗ, ಕೋಮುವಾದ, ಖಾಸಗೀಕರಣದ ವಿರುದ್ದ ಮತ್ತು ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣ, ಉದ್ಯೋಗ, ಜನರ ಐಕ್ಯತೆಯನ್ನು ಸಾಧಿಸಲು ವಿದ್ಯಾರ್ಥಿ ಚಳುವಳಿಯ ಹೋರಾಟಗಳನ್ನು ಬಲಪಡಿಸುವ ಕುರಿತು ಕರ್ನಾಟಕ ರಾಜ್ಯದ 12 ಜನ ಪ್ರತಿನಿಧಿಗಳು ದೇಶದ ಎಲ್ಲಾ ರಾಜ್ಯಗಳವಿದ್ಯಾರ್ಥಿ ಚಳುವಳಿಯ 700 ಜನ ವಿದ್ಯಾರ್ಥಿ ಪ್ರತಿನಿಧಿಗಳು, ಈ ಅಖಿಲ ಭಾರತ ಸಮ್ಮೇಳನದಲ್ಲಿ 4 ದಿನಗಳ ಕಾಲ ಚರ್ಚಿಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ.

Post a Comment

Previous Post Next Post