ಜಿಲ್ಲಾ ಕಸಾಪ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಗಮನ ಸೆಳೆದ‌ ಸ್ಟಾಲ್

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಡಿಸೆಂಬರ್ 11 : ಲಿಂಗಸುಗೂರಿನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಭ್ರಮರಾಂಭ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ, ತಾಲೂಕು ಪಂಚಾಯತಿ ಆಶ್ರಯದಲ್ಲಿ ಹಾಕಿರುವ ಸ್ಟಾಲ್ ಸಾರ್ವಜನಿಕರ ಗಮನ ಸೆಳೆಯಿತು.

ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್.ಹೂಲಗೇರಿ ಯವರು ಸ್ಟಾಲ್ ಗೆ ಚಾಲನೆ ನೀಡಿದರು‌. ಹಪ್ಪಳ, ಉಪ್ಪಿನಕಾಯಿ, ಗೃಹಉಪಯೋಗಿ ಸಾಮಗ್ರಿ ಸೇರಿ ಮನೆಗೆ ಅವಶ್ಯ ಇರುವ ಸಾಮಗ್ರಿಗಳ ಮಾರಾಟ ಜೋರಾಗಿತ್ತು. ಸಾಹಿತ್ಯ ಆಸಕ್ತರು, ಯುವಕರು ಸ್ಟಾಲ್ ಗೆ ಭೇಟಿ ನೀಡಿ ಆಹಾರ ಉತ್ಪನ್ನಗಳನ್ನು ಖರೀದಿಸಿದರು. 

ಲಿಂಗಸುಗೂರು ತಾಪಂ ಇಒ ಅಮರೇಶ ಯಾದವ್, ಮಸ್ಕಿ ತಾಪಂ ಸಹಾಯಕ ನಿರ್ದೇಶಕ (ಪಂಚಾಯತ್ ರಾಜ್) ಪಂಪನಗೌಡ ಪಾಟೀಲ್, ಲಿಂಗಸುಗೂರು ತಾಪಂ ಸಹಾಯಕ ನಿರ್ದೇಶಕ ಮಂಜುನಾಥ ಜಾವೂರ್, ಒಕ್ಕೂಟದ ತಾಲೂಕು ಅಧ್ಯಕ್ಷೆ ಪಾರ್ವತಿ, ಎನ್ ಆರ್ ಎಲ್ಎಂ ಮಸ್ಕಿ ವಲಯ ಮೇಲ್ವಿಚಾರಕ ಪ್ರಕಾಶ, ಅರ್ಜುನ ಇತರರಿದ್ದರು.



Post a Comment

Previous Post Next Post