ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರಬರಲು ಸಂಕಲ್ಪ : ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ಡಾ.ಸುಧಾಮೂರ್ತಿ ಸಹಾಯಹಸ್ತ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಹುಣಸಗಿ, ಡಿಸೆಂಬರ್ 07 : ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದಾದ ಯಾದಗಿರಿ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿಯಿಂದ ಕೈಬಿಡಲು ಕಲ್ಯಾಣ ಕರ್ನಾಟಕ ಯುವ ಬ್ರೀಗೇಡ್ ಸಂಕಲ್ಪ ಮಾಡಿದ್ದು ಪ್ರತಿಯೊಬ್ಬರೂ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದುಳಿದ ಜಿಲ್ಲೆಯವರು ಎಂಬ ಹೆಸರನ್ನು ಕಿತ್ತೆಸೆಯಲು ಸಂಕಲ್ಪ ಮಾಡಲು ಮುಂದೆ ಬರಬೇಕೆಂದು ಯುವ ಬ್ರೀಗೇಡ್ ನ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಖಾನಾಪೂರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರಲ್ಲಿ ಆಯೋಜಿಸಲಾದ ಮಾದ್ಯಮ ಘೋಷ್ಠಿಯಲ್ಲಿ ಮಾತನಾಡಿ ಡಿ.೦೯ ರಂದು ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಸ್ಥನದ ಆವರಣದಲ್ಲಿ ಸಾಯಂಕಾಲ ೫.೦೦ ಗಂಟೆಗೆ ದಿಕ್ಸೂಚಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರು ಆಗಮಿಸಿ ಉಘೇ ಕಲ್ಯಾ ಕರ್ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದು ನಮ್ಮ ರಾಜ್ಯದಲ್ಲಿಯೇ ಯಾದಗಿರಿ ಜಿಲ್ಲೆಯು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಹೊಂದಿದ್ದು ಇದರಿಂದಾಗಿ ನಾವುಗಳು ನಮ್ಮ ತನವನ್ನೇ ಮರೆತು ಹಿಂದುವಳಿದವರು ಎಂದು ಹೇಳಿಕೊಳ್ಳುತ್ತಾ ಅನುಕಂಪದ ಆಸರೆಯನ್ನು ಪಡೆಯುವುದನ್ನು ನಿಲ್ಲಿಸಬೇಕು ಹಾಗೂ ಕಲ್ಯಾಣ ಕರ್ನಾಟಕ ವಿಮೋಚನೆಗೆ ಎಪ್ಪತ್ತೆöÊದು ವರ್ಷಗಳು ತುಂಬುತ್ತಾ ಬಂದಿದ್ದು ಇದರ ಸವಿನೆನಪಿಗಾಗಿ ಯುವ ಬ್ರೀಗೇಡ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ರೀತಿಯ ಶೈಕ್ಷಣಿಕ, ಆರ್ಥಿಕ ಮತ್ತು ಇನ್ನಿತರೆ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವ ಚಿಂತನೆಯನ್ನು ಮಾಡಿದೆ ಹಾಗಾಗಿ ಈ ಒಂದು ಯಾದಗಿರಿ ಜಿಲ್ಲೆಯನ್ನು ಶೈಕ್ಷಣಿಕ, ಆರ್ಥಿಕ ಹಾಗೂ ಇತರೆ ಚಟುವಟಿಕೆಗಳಲ್ಲಿ ತನ್ನದೇ ಆದ ಅಸ್ತಿತ್ವವನ್ನು ಕಂಡುಕೊಳ್ಳಬೇಕಾದರೆ ಈ ಭಾಗದ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು. 
ಇದಲ್ಲದೇ ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾದ ಇನ್ಪೋಸಿಸ್‌ನ ಮುಖ್ಯಸ್ಥರು ಆದ ಡಾ. ಸುಧಾಮೂರ್ತಿ ಅವರು ಕೂಡಾ ಕಲ್ಯಾಣ ಕರ್ನಾಟಕದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಹಾಯಹಸ್ತ ಚಾಚಲು ಮುಂದೆ ಬಂದಿದ್ದಾರೆ ಅವರ ಸಹಾಯ ಹಸ್ತವನ್ನು ಸಹ ಪಡೆದುಕೊಂಡು ಯಾದಗಿರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬ ಯುವಕರು ಮುಂದೆ ಬರಬೇಕೆಂದು ಹೇಳಿದರು.
ಈ ಒಂದು ಕಾರ್ಯಕ್ರಮದಲ್ಲಿ ದೇವಾಪೂರದ ಜಡಿ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯರು ಉಪಸ್ಥಿತಿ ವಹಿಸಲಿದ್ದಾರೆ. ಮತ್ತು ಈ ವೇಳೆ ಉಘೇ ಕಲ್ಯಾಣ ಕರ್ನಾಟಕ ಕಾರ್ಯಕ್ರಮದ ಭಿತ್ತಿ ಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡರುಗಳಾದ ವಿರೇಶ. ಬಿ.ಚಿಂಚೋಳಿ, ಬಸವರಾಜ ಸ್ಥಾವರಮಠ, ಎಮ್.ಎಸ್.ಚಂದಾ, ಹಾಗೂ ಡಾ.ಯೂಸೂಫ್ ಡೆಕ್ಕನ್, ಬಸವರಾಜ ಮೇಲಿನಮನಿ, ಅಮರಯ್ಯಸ್ವಾಮಿ ಜಾಲಿಬೆಂಚಿ, ವೆಂಕಟೇಶ ಇಸ್ಲಾಂಪೂರ, ಸೇರಿದಂತೆ ಇನ್ನಿತರರು ಇದ್ದರು.

ಬಾಕ್ಸ್: ಮನೆ ಮನೆ ಭೇಟಿ ಉಘೇ ಕಲ್ಯಾಣ ಕರ್ನಾಟಕ ಭಿತ್ತಿ ಚಿತ್ರ ವಿತರಣೆ: ಬುಧವಾರ ಹುಣಸಗಿ ಪಟ್ಟಣ ಸೇರಿದಂತೆ ತಾಲೂಕಿನ ಪ್ರತಿ ಹಳ್ಳಿಗಳಲ್ಲಿನ ಮನೆ ಮನೆಗಳಿಗೆ ಯುವ ಬ್ರೀಗೇಡ್ ವತಿಯಿಂದ ಉಘೇ ಕಲ್ಯಾಣ ಕರ್ನಾಟಕ ಭಿತ್ತಿಚಿತ್ರಗಳನ್ನು ಹಿಡಿದುಕೊಂಡು ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಯುವ ಬ್ರೀಗೇಡ್ ಸ್ವಯಂ ಸಂಚಾಲಕರು ಪಟ್ಟಣದ ಪ್ರತಿಯೊಂದು ಬೀದಿಗಳಿಗೆ ತೆರಳಿ ಉಘೇ ಕಲ್ಯಾಣ ಕರ್ನಾಟಕ ಭಿತ್ತಿಚಿತ್ರಗಳನ್ನು ವಿತರಿಸಿದರು.

Post a Comment

Previous Post Next Post