66 ನೇ ಮಹಾ ಪರಿನಿರ್ವಾಣ ಅಂಗವಾಗಿ ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಡಿಸೆಂಬರ್ 07 : ಪಟ್ಟಣದ ವಿವಿಧ ಕಛೇರಿಯಲ್ಲಿ ಭಾರತ ಸಂವಿಧಾನದ ಸಮಗ್ರತೆಗೆ ಕಾರಣೀಭೂತರಾದ ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66 ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ತಾಲೂಕ ಆಡಳಿತದ ವತಿಯಿಂದ ಅಂಬೇಡ್ಕರ್ ಪುತ್ತಳಿಗೆ ಮತ್ತು ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66 ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಬಸವೇಶ್ವರ ನಗರದ ಕಾಂಗ್ರೇಸ್ ಪಾರ್ಟಿ ಕಛೇರಿಯಲ್ಲಿ,ಶಾಸಕರ ಭವನದಲ್ಲಿ ಪೂಜೆ ಸಲ್ಲಿಸಿ ನಮಸ್ಕರಿಸಿ ನಂತರ ಹಳೇ ಬಸ್ ನಿಲ್ದಾಣದ ಅಂಬೇಡ್ಕರ್ ಮೂರ್ತಿಗೆ ಹಾಗೂ ಗಾಂಧೀ ನಗರದ ಅಂಬೇಡ್ಕರ್ ಮೂರ್ತಿಗೆ ಮಸ್ಕಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಆರ್ ಬಸನಗೌಡ ತುರುವಿಹಾಳ ಹಾಗೂ ತಾಲೂಕಾ ದಂಡಾಧಿಕಾರಿ ಮತ್ತು ಪುರಸಭೆ ಮುಖ್ಯಾಧಿಕಾರಿ ವಿವಿಧ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ಹೂವಿನ ಮಾಲೆ ಹಾಕಿ ಗೌರವ ನಮನ ಸಲ್ಲಿಸುವ ಮೂಲಕ ಮಹಾ ಪರಿನಿರ್ವಾಣ ದಿನವನ್ನು ಸರಳತೆಯಿಂದ ಆಚರಣೆ ಮಾಡಲಾಯಿತು. 


ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಗ್ರಾಮೀಣ ಘಟಕದ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಮುದ್ದಾಪುರ, ಕಿಸಾನ್ ಘಟಕದ ಅಧ್ಯಕ್ಷರಾದ ಮೈಬುಬ ಸಾಬ್ ಮುದ್ದಾಪುರ, ಎಸ್.ಸಿ ಗ್ರಾಮೀಣ ಘಟಕದ ಅಧ್ಯಕ್ಷರಾದ ಹುಲುಗಪ್ಪ ತೋಪ್ಪಲದೊಡ್ಡಿ,ಸುರೇಶ ಬ್ಯಾಳಿ, ನಾರಾಯಣಪ್ಪ ಕಾಸ್ಲಿ ಮಸ್ಕಿ, ಭೀಮಣ್ಣ ತೊಪ್ಪಲದೊಡ್ಡಿ,ಸಿದ್ದು ಮುರಾರಿ,ಭದ್ರಿ ಕೊಠಾರಿ, ಶ್ರೀ ದುರುಗರಾಜ ಶ್ರೀ ಸುರೇಶ ಖೈರವಾಡಗಿ,ಸದ್ದಾಂ ಮಸ್ಕಿ, ಮಸ್ಕಿ ತಾಲೂಕ ದಂಡಧಿಕಾರಿಗಳು ವಿವಿಧ ಅಧಿಕಾರಿ ವರ್ಗದವರು ಮತ್ತು ಮುಖಂಡರು ಭಾಗಿಯಾಗಿದ್ದರು.

Post a Comment

Previous Post Next Post