UDAYAVANI NEWS
ಮಸ್ಕಿ,ಡಿಸೆಂಬರ್ 08 : ತಾಲೂಕಿನ ಗುಂಡ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಗ್ರಾಮಸ್ಥರು ಹಲವಾರು ಬಾರಿ ಶಾಸಕರ,ಸಂಸದರ, ತಾಲೂಕ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಇದರಿಂದ ಗುಂಡ ಗ್ರಾಮಸ್ಥರು ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾಸಾಹೇಬ್ ಡಾಕ್ಟರ್ ಎನ್ ಮೂರ್ತಿ ಸ್ಥಾಪಿತ ತಾಲೂಕು ಸಮಿತಿ ಮಸ್ಕಿ ಮುಂದಾಳತ್ವದಲ್ಲಿ ಗುಂಡ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಗ್ರಾಮ ಪಂಚಾಯಿತಿ ಮುಂದೆ ಧರಣಿ ನಡೆಸಿ ಪ್ರತಿಭಟನೆ ಮಾಡಲಾಯಿತು.
ಅಶೋಕ್ ನಂಜಲದಿನ್ನಿ ಜಿಲ್ಲಾಧ್ಯಕ್ಷರು ಮಾತನಾಡುತ್ತಾ ಗ್ರಾಮದಲ್ಲಿ ಸುಮಾರು 3000 ಜನಸಂಖ್ಯೆ ಇದ್ದು ಗ್ರಾಮ ಪಂಚಾಯತಿ ಸದಸ್ಯರಿದ್ದರು ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಲವಾರು ವರ್ಷಗಳಿಂದ ಗುಂಡ ಗ್ರಾಮದಲ್ಲಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಳ್ಳಿಗಳಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಜನರು ವಂಚಿತರಾಗಿದ್ದಾರೆ ವಿವಿಧ ಕಾಮಗಾರಿ ಮಾಡದೆ ಬೋಗಸ್ಬಿಲ್ಲೆ ಎತ್ತಿಕೊಂಡಿದ್ದಾರೆ. ಮಾಹಿತಿಯನ್ನು ಕೇಳಿದರೆ ಸರಿಯಾದ ಮಾಹಿತಿಯನ್ನು ನೀಡಲಿ ನಿರ್ಲಕ್ಷ ವಹಿಸಿದ್ದಾರೆ ಗುಂಡ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಾದ ನೀರು ಚರಂಡಿ ಜನತಾ ಮನೆಗಳು ಶುದ್ಧ ನೀರಿನ ಘಟಕ ಇವೆಲ್ಲವುಗಳು ಒದಗಿಸಿ ಕೊಡಬೇಕಾದ ಅಧಿಕಾರಿಗಳೇ ಮೌನವಾಗಿದ್ದಾರೆ ಏಕೆಂದರೆ ಇದರಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೂಡ ಭಾಗಿಯಾಗಿದ್ದಾರೆ ಕಳಪೆ ಮಟ್ಟದ ಹಲವಾರು ಕಾಮಗಾರಿಗಳನ್ನು ಮಾಡಿಸಿ ಹಣ ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇಂತಹ ಅಧಿಕಾರಿಗಳನ್ನು ಕೂಡಲೇ ಮಾಡಬೇಕು ನಂತರ ಗ್ರಾಮದ ಅಭಿವೃದ್ಧಿಯ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿದರೆ ಇನ್ನು 15 ದಿನದ ಒಳಗೆ ಗುಂಡ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕು ಇಲ್ಲದಿದ್ದಲ್ಲಿ ನಮ್ಮ ಸಂಘಟನೆಯ ಪದಾಧಿಕಾರಿಗಳು ಹಾಗೂ ಗುಂಡ ಗ್ರಾಮಸ್ಥರು ತಾಲೂಕು ಪಂಚಾಯತ್ ಕಛೇರಿ ಎದುರು ಪ್ರತಿಭಟನೆ ನಡೆಸುವ ಜೊತೆಗೆ ಮುಂಬರುವ ದಿನಗಳಲ್ಲಿ ಚುನಾವಣೆಗಳಿಗೆ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಸಿದರು.
ನಿಮ್ಮ ಹೋರಾಟ ಮುಂದುವರೆಯುವುದು ಬೇಡ ನಾವು ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ತಾಲೂಕ ಪಂಚಾಯತ ಅಧಿಕಾರಿ ಶಿವಾನಂದ ರೆಡ್ದಿ ಹಿಂಬರಹ ನೀಡಿದರು ಬರವಣಿಗೆಯ ಹಿಂಬರಹ ಈ ರೀತಿಯಾಗಿದೆ ತಾವುಗಳು ದಿನಾಂಕ 05 /12 /2022 ರಂದು ಗುಂಡ ಗ್ರಾಮ ಪಂಚಾಯಿತಿ ಮುಂದುಗಡೆ ಪಿಡಿಓ ರವರ ಕರ್ತವ್ಯ ನಿರ್ಲಕ್ಷತೆ ಹಾಗೂ ಸಾರ್ವಜನಿಕರ ಜೊತೆ ಅಸಹಕಾರ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿ ಎಲ್ಲಾ ಗ್ರಾಮಗಳ ಮೂಲಭೂತ ಸೌಕರ್ಯ ಒದಗಿಸುವ ವಿಷಯ ಆಧಾರಿತ ಬೇಡಿಕೆ ಸಂಬಂಧಿಸಿದಂತೆ ಮನವಿ ಪಡೆಯಲಾಗಿದ್ದು ಸದರಿ ಆಪಾದನೆ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ 30 ದಿನಗಳ ಒಳಗಾಗಿ ನಿಯಮಾನಸಾರವಾಗಿ ಕ್ರಮ ಕೈಗೊಳ್ಳಲಾಗುವುದು ಹಾಗೂ ವಿವಿಧ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಈಡೇರಿಕೆಗಾಗಿ 2023-24ನೇ ಸಾಲಿನಲ್ಲಿ ವಿವಿಧ ಯೋಜನೆಯ ಕ್ರಿಯೆ ಯೋಜನೆಯಲ್ಲೇ ಸೇರ್ಪಡೆಗೊಳಿಸಿ ಕಾಮಗಾರಿ ಅನುಷ್ಠಾನ ಮಾಡಲಾಗುವುದು ಅದೇ ರೀತಿ ಬೇರೆ ಇಲಾಖೆಗಳ ಬೇಡಿಕೆಗಳನ್ನು ಸಂಬಂಧಿಸಿದ ಪತ್ರದ ಮೂಲಕ ಸಮಾವೇಶದ ಇಲಾಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ಆದೇಶಿಸಲಾಗುವುದು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ಮಸ್ಕಿ ಇವರ ಪರವಾಗಿ ತಾಲೂಕು ಪಂಚಾಯತ್ ಮಸ್ಕಿ ಎಂದು ಭರವಸೆಯನ್ನು ನೀಡಿದ ನಂತರ ತಾಲೂಕ ಪಂಚಾಯತ್ ಅಧಿಕಾರಿಗೆ ಮತ್ತು ಕಂದಾಯ ಇಲಾಖೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಹೋರಾಟವನ್ನು ಹಿಂಪಡೆಯಲಾಯಿತು.
ಇದೇ ಸಂದರ್ಭದಲ್ಲಿ
ಅಶೋಕ್ ನಂಜಲದಿನ್ನಿ ಜಿಲ್ಲಾಧ್ಯಕ್ಷರು,ದುರ್ಗಪ್ಪ ಡಬ್ಬೆರಮಡಗು ಜಿಲ್ಲಾ ಉಪಾಧ್ಯಕ್ಷರು, ಚಿನ್ನಪ್ಪ ಹಂಪ್ನಾಳ ಜಿಲ್ಲಾ ಕಾರ್ಯದರ್ಶಿ, ಮರಿಸ್ವಾಮಿ ಕೊಪ್ಪಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಮಸ್ಕಿ ತಾಲೂಕ್ ಅಧ್ಯಕ್ಷ ಜಮದಗ್ನಿ ಗೋನಾಳ್, ಬಸವರಾಜ್ ಕುಣಿಕೆಲ್ಲೂರು ಲಿಂಗಸಗೂರು ತಾಲೂಕ ಅಧ್ಯಕ್ಷರು, ಮೌನೇಶ್ ಮೆದಿಕಿನಾಳ ಉಪಾಧ್ಯಕ್ಷರು, ಮರಿಸ್ವಾಮಿ ಮುದಬಾಳ, ಶ್ರೀಕಾಂತ್ ಚಿಕ್ಕ ಕಡಬೂರು, ಸಿದ್ದು ಉದ್ಬಾಳ, ನಿರುಪಾದಿ ಸುಂಕನೂರು ಸೇರಿದಂತೆ ಗಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸೇರಿದಂತೆ ಇನ್ನಿತರರಿದ್ದರು.
Tags
ಜಿಲ್ಲಾ ಸುದ್ದಿಗಳು