UDAYAVANI NEWS
ಮಸ್ಕಿ, ಡಿಸೆಂಬರ್ 15 : ತಾಲೂಕಿನ ಬುದ್ಧಿನ್ನಿ. ಎಸ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಮುಖ್ಯ ಅಡುಗೆದಾರ ಹಾಗೂ ಅಡುಗೆ ಸಹಾಯಕ ಸಿಬ್ಬಂದಿ ನೇಮಕಾತಿ ಮಾಡುವ ಮುನ್ನ ಶಾಲೆಗೆ ಶಾಶ್ವತ ಕುಡಿಯುವ ನೀರು, ವಿದ್ಯುತ್ ಸೌಕರ್ಯ ಸೇರಿದಂತೆ ಮಕ್ಕಳಿಗೆ ಬಿಸಿಊಟ ತಯಾರಿಸಲು ಅವಶ್ಯವಿರುವ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಸ್ಥಳೀಯರು ಶಾಸಕರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಅಂಕುಶದೊಡ್ಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುದ್ಧಿನ್ನಿ. ಎಸ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಮುಖ್ಯ ಅಡುಗೆದಾರ ಹಾಗೂ ಅಡುಗೆ ಸಹಾಯಕ ಸಿಬ್ಬಂದಿ ನೇಮಕಾತಿ ಕುರಿತಂತೆ ಗ್ರಾಮ ಪಂಚಾಯತಿಯಿಂದ ದಿನಾಂಕ 29.11.2022 ರಂದು ಪ್ರಕಟಣೆ ಹೊರಡಿಸಲಾಗಿದ್ದು, ಆದರೆ ಶಾಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಮತ್ತು ವಿದ್ಯುತ್ ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಇಲ್ಲ ಇದರಿಂದಾಗಿ ಬಿಸಿಯೂಟ ತಯಾರಿಕೆಗೆ ತೊಂದರೆಯಾಗಲಿದೆ.
ಹಾಗಾಗಿ ಸಿಬ್ಬಂದಿ ನೇಮಕಾತಿಗೂ ಮುಂಚೆ ಶಾಲೆಗೆ ಶಾಶ್ವತ ಕುಡಿಯುವ ನೀರು, ವಿದ್ಯುತ್ ಸೌಕರ್ಯ ಸೇರಿದಂತೆ ಮಕ್ಕಳಿಗೆ ಬಿಸಿಊಟ ತಯಾರಿಸಲು ಅವಶ್ಯವಿರುವ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಬಿಸಿಊಟ ಯೋಜನೆ ಸಮರ್ಪಕ ಕಾರ್ಯ ಅನುಷ್ಠಾನಗೊಳಿಸಲು ಮುಂದಾಗ ಬೇಕೆಂದು ಕ್ಷೇತ್ರದ ಶಾಸಕರಾದ ಆರ್ ಬಸನಗೌಡ ತುರುವಿಯಾಳಿಯವರಿಗೆ ಮನವಿ ಪತ್ರವನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ
ನಾಗರೆಡಪ್ಪ ದೇವರಮನಿ ಎಸ್‌ಡಿಎಂಸಿ ಅಧ್ಯಕ್ಷರು,ಮೌನೇಶ್ ಬುದ್ದಿನ್ನಿ ಮಾಜಿ ತಾಲೂಕ ಪಂಚಾಯತ್ ಸದಸ್ಯರು, ಅಂಬಣ್ಣ ಮರಕಲದಿನ್ನಿ ಮಾಜಿ ಎಸ್‌ಡಿಎಂಸಿ ಅಧ್ಯಕ್ಷರು, ಈಶಪ್ಪ ಆಮದಿಹಾಳ, ಅಮರೇಶ್ ಮುದಬಾಳ, ಬಸವರಾಜ ಇಳಿಗೇರ ಸೇರಿದಂತೆ ಇನ್ನಿತರರು ಇದ್ದರು.
Tags
ಜಿಲ್ಲಾ ಸುದ್ದಿಗಳು