ನೆಟ್ಟಕುಂಟಪಲ್ಲಿ ಗ್ರಾಮದ ದಲಿತರ ಜೀವನ ತಿಪ್ಪೆಗುಂಡಿಗಳ ಮಧ್ಯೆಯೇ : ಸ್ಥಳೀಯರ ಆಕ್ರೋಶ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಬಾಗೇಪಲ್ಲಿ, ಡಿಸೆಂಬರ್ 15 : ತಾಲ್ಲೂಕಿನ ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನೆಟ್ಟಕುಂಟಪಲ್ಲಿ ಗ್ರಾಮದ ದಲಿತ ಸಮುದಾಯದ ಮನೆಗಳ ಮುಂದೆ ಸವರ್ಣೀಯರು ತಿಪ್ಪೆಗುಂಡಿ ಗಳನ್ನೂ ಹಾಕಿದ್ದು ಅದರ ವಾಸನೆಗೆ ಸೊಳ್ಳೆಗಳು ಕಾಟ ಹೆಚ್ಚಾಗಿದ್ದು ಮನೆಯಲ್ಲಿ ಇರಲು ಆಗುತ್ತಿಲ್ಲ ಅನೇಕ ರೋಗ ರುಜಿನುಗಳು ಬರುವ ಸಂದ್ರತೆ ಹೆಚ್ಚು ಹಾಗೂ ಮಳೆಗಾಲದಲ್ಲಿ ಮಳೆನೀರು ನಿಂತು ಗಬ್ಬು ನಾರುತ್ತಿದೆ.ಸುತ್ತಲೂ ಸುಂದರ ಮನೆಗಳು ನಿರ್ಮಾಣವಾಗಿದ್ದು ನಡುವೆ ಗಬ್ಬುನಾರುವ ತಿಪ್ಪೆಗುಂಡಿಗಳಿಂದ ಜನರ ಬದುಕು ಹೈರಾಣಾಗಿದೆ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನೆಟ್ಟಕುಂಟಪಲ್ಲಿ ಗ್ರಾಮದ ದಲಿತ ಸಮುದಾಯದ ಮನೆಗಳ ಮುಂದೆ ಸವರ್ಣೀಯರು ತಿಪ್ಪೆಗುಂಡಿ ಗಳನ್ನೂ ಹಾಕಿ ಗಬ್ಬುನಾರುವ ಮತ್ತು ಸುತ್ತಮುತ್ತಲ ಪ್ರದೇಶದ ಕಸ, ತ್ಯಾಜ್ಯ ವಿಲೇ ಮಾಡುವ ತಿಪ್ಪೆಗುಂಡಿಯನ್ನಾಗಿ ಮಾಡಿಕೊಳ್ಳಲಾಗಿದೆ. ಕೆರೆಯ ಮೇಲ್ಬಾಗದ ಜಾಗದಲ್ಲಿಯೇ ಸರ್ಕಾರಿ ಕಟ್ಟಡ ನಿರ್ಮಿಸಲಾಗಿದೆ. ಕೆಲವೆಡೆ ಒತ್ತುವರಿ ಮಾಡಿಕೊಳ್ಳಲಾಗಿದೆ.ಆದರೆ ಕಾರಬು, ಹದ್ದಬಸ್ತು ನಿಗದಿ ಮಾಡಿ ತಿಪ್ಪೆಗುಂಡಿಗಳು ಒತ್ತುವರಿ ತೆರವುಗೊಳಿಸುವ ಕಾರ್ಯ ಮಾಡಿದರೆ ಇಲ್ಲಿನ ದಲಿತರ ಜೀವನವು ರೋಗ ಮುಕ್ತ ರಾಗಬಹುದು ಹಾಗಾಗಿ ಗ್ರಾಮ ಪಂಚಾಯತಿ ಅಧಿಕಾರಿಗಳು ತ್ವರಿತವಾಗಿ ತೆರವುಗೊಳಿಸುವ ಮೂಲಕ ಕಾಯಕಲ್ಪ ಮಾಡಬೇಕೆಂಬುದು ಸ್ಥಳೀಯ ಒತ್ತಾಸೆಯಾಗಿದೆ.ಸಂಬಂಧ ಪಟ್ಟ ಜನಪ್ರತಿನಿಧಿಗಳು ಹಾಗೂ ಪಂಚಾಯತಿ ಅಧಿಕಾರಿಗಳು ಇದರ ಬಗ್ಗೆ ಗೊತ್ತಿದ್ದೂ ಮೌನ ವಹಿಸಿದ್ದಾರೆ ಈ ಕೂಡಲೇ ಮೇಲಾಧಿಕಾರಿಗಳು ಈ ಗ್ರಾಮದ ದಲಿತ ಸಮುದಾಯದ ಮನೆಗಳ ಮುಂದೆ ಗಬ್ಬು ನಾರುತ್ತಿರುವ ತಿಪ್ಪೆ ಗುಂಡಿಗಳನ್ನು ಮುಚ್ಚಿಸಿ. ವಸತಿ ರಹಿತರಿಗೆ ನಿವೇಶನ ದೊರಕಿಸಿ ಕೊಡಬೇಕೆಂದು ಗ್ರಾಮದ ಪ್ರಜ್ಞಾವಂತ ಯುವಕರು ತಮ್ಮ ಅಭಿಪ್ರಾಯವನ್ನು ಮಾದ್ಯಮಕ್ಕೆ ವ್ಯಕ್ತಪಡಿಸಿದರು.

Post a Comment

Previous Post Next Post