ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಹನುಮೋತ್ಸವ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬೆಂಗಳೂರು,ಡಿಸೆಂಬರ್ 06 : ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಹನುಮಂತನಗರ, ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ 6.00 ಗಂಟೆಯಿಂದ ಧರ್ಮದರ್ಶಿಗಳು ಪದ್ಮನಾಭನ್ ಹಾಗೂ ವೇಣುಗೋಪಾಲ್ ರವರ ನೇತೃತ್ವದಲ್ಲಿ
ಹನುಮೋತ್ಸವ ನಡೆಯಿತು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ದೇವತಾ ಕಾರ್ಯಗಳು ಹಾಗೂ ವಿಶೇಷ ಅಭಿಷೇಕ, ಅಲಂಕಾರ ಇದರ ಜೊತೆಗೆ ಹನುಮ ವೃತದ ಅಂಗವಾಗಿ ಪವಮಾನ ಹೋಮ ಹಾಗೂ ಇತರ ಪೂಜಾ ಕೈಂಕರ್ಯಗಳು ನಡೆಯಿತು. ಬೆಳಗ್ಗೆ 7 ರಿಂದ ರಾತ್ರಿ 9 ವರೆಗೆ ಭಕ್ತಾದಿಗಳಿಗೆ ವೋದ ದೋಸೆ ಪ್ರಸಾದ ವಿತರಣೆ ಮಾಡಿದರು.

Post a Comment

Previous Post Next Post