ಪ.ಜಾತಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಕಾಲ್ನಡಿಗೆ ಜಾಥಾ 8ನೇ ದಿನಕ್ಕೆ : ಕಾಲ್ನಡಿಗೆ ಜಾಥಕ್ಕೆಹಿರಿಯೂರು ಷಡಕ್ಷರಿ ಸ್ವಾಮೀಜಿ ಬೆಂಬಲ

ಸುದ್ದಿ ಸಂಪಾದಕರು: ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಡಿಸೆಂಬರ್ 05 : ಪರಿಶಿಷ್ಟ ಜಾತಿ ಒಳಮೀಸಲಾತಿ ಹೋರಾಟ ಸಮಿತಿ ಕಳೆದ ನ.28ರಿಂದ ಹರಿಹರದಿಂದ ಪ್ರಾರಂಭಿಸಿದ ಬೃಹತ್ ಕಾಲ್ನಡಿಗೆ ಜಾಥಾ 8ನೇ ದಿನಕ್ಕೆ ಹಿರಿಯೂರು ತಾಲೂಕಿನ ಆದಿವಾಲ ಗ್ರಾಮಕ್ಕೆ ಇಂದು ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮದ ಕೋಡಿಹಳ್ಳಿ ದೇಶಿಕೇಂದ್ರ ಮಠದ ಶ್ರೀಷಡಕ್ಷರಿಮುನಿಸ್ವಾಮಿ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ ಬೆಂಬಲಿಸಿದರು ಎಂದು ಮಸ್ಕಿ ತಾಲೂಕಿನ ಒಳ ಮೀಸಲಾತಿ ಹೋರಾಟ ಸಮಿತಿಯು ಮಾದ್ಯಮಕ್ಕೆ ತಿಳಿಸಿದ್ದಾರೆ.


ನ್ಯಾ.ಎ.ಜೆ ಸದಾಶಿವ ಅಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿ ಪರಿಶಿಷ್ಟ ಜಾತಿ ಒಳಮೀಸಲಾತಿ ಹೋರಾಟ ಸಮಿತಿ ಕಳೆದ ನ.28ರಿಂದ ಹರಿಹರದಿಂದ ಪ್ರಾರಂಭಿಸಿದ ಬೃಹತ್ ಕಾಲ್ನಡಿಗೆ ಜಾಥಾ 8ನೇ ದಿನಕ್ಕೆ ಹಿರಿಯೂರು ತಾಲೂಕಿನ ಆದಿವಾಲ ಗ್ರಾಮಕ್ಕೆ ಇಂದು ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮದ ಕೋಡಿಹಳ್ಳಿ ದೇಶಿಕೇಂದ್ರ ಮಠದ ಶ್ರೀಷಡಕ್ಷರಿಮುನಿಸ್ವಾಮಿ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ ಬೆಂಬಲಿಸಿದರು.
ನಂತರ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಬೇಡಿಕೆ ನ್ಯಾಯ ಸಮ್ಮತವಾಗಿದ್ದು, ನಿಮ್ಮ ಹೋರಾಟ ಬದ್ಧತೆಯಿಂದ ಕೂಡಿದೆ. ಈ ಹೋರಾಟ ತುಂಬಾ ಯಶಸ್ವಿಯಾಗಲಿದೆ. ರಾಜ್ಯದ ವಿವಿಧ ಜಿಲ್ಲೆ, ತಾಲೂಕು, ಗ್ರಾಮಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಯಾವುದೇ ಕಾರಣಕ್ಕೆ ಯಾರಿಂದಲೂ ಈ ಹೋರಾಟವನ್ನು ಹತ್ತಿಕ್ಕಲೂ ಸಾಧ್ಯವಿಲ್ಲ. ಈ ಹೋರಾಟಕ್ಕೆ ನನ್ನ ಬೆಂಬಲ ಸದಾ ಇದೆ ಎಂದರು. ಈ ಹೋರಾಟ ಎಲ್ಲಾ ಜಾತಿ ಜನಾಂಗಕ್ಕೆ ದೊಡ್ಡ ಸ್ಪೂರ್ತಿಯಾಗಲಿದೆ ಕೂಡಲೇ ಆಡಳಿತ ಸರಕಾರ ಪ್ರತಿ ಪಕ್ಷಗಳು ಈ ಬಹುದಿನಗಳ ಬೇಡೀಕೆಯನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಬಹುದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಂತರ ಸ್ವಾಮಿಜೀಗಳು ಹಿರಿಯ ಹೋರಾಟಗಾರರಾದ ಕರಿಯಪ್ಪ ಕಟ್ಟಿಮನಿ, ಅಂಬಣ್ಣ ಆರೋಲಿಕರ್ ಅವರನ್ನು ಸನ್ಮಾನಿಸಿ ಆಶೀರ್ವದಿಸಲಾಯಿತು ಎಂದು ಈ ಕುರಿತು ಮಸ್ಕಿ ತಾಲೂಕಿನ ಒಳ ಮೀಸಲಾತಿ ಹೋರಾಟ ಸಮಿತಿಯು ಮಾದ್ಯಮಕ್ಕೆ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ  
ಹಿರಿಯೂರು ತಾ.ಪಂ. ಮಾಜಿ ಅಧ್ಯಕ್ಷರಾದ ಸುಜಾತ, ಹೆಣ್ಣೂರು ಶ್ರೀನಿವಾಸ, ಶರಣಪ್ಪ ಹಿರಿಯೂರು, ಹಿರಿಯೂರು ನಗರಸಭೆ ಪೌರಾಯುಕ್ತರಾದ ಉಮೇಶ, ತಹಸೀಲ್ದಾರ್ ಪ್ರಶಾಂತ ಪಾಟೀಲ್, ಅಬ್ರಾಹಂ ಹೊನ್ನಟಗಿ, ಪ್ರಭುರಾಜ ಕೊಡ್ಲಿ, ಮೌನೇಶ ತುಗ್ಗಲದಿನ್ನಿ, ಡಿ.ಜಯಪ್ಪ ಸಿರವಾರ, ಕಾಸಿಂ ಡಿ.ಮುರಾರಿ ಮಸ್ಕಿ,
ಎಲ್.ವಿ.ಸುರೇಶ ಸಿರವಾರ, ಜಯಪ್ಪ ಸಿರವಾರ, ಗುಂಡಪ್ಪ ಸಿರವಾರ, ಅರಳಪ್ಪ, ಮಾರೇಶ ಭಂಡಾರಿ, ಎಲ್.ಕೆ.ಸುರೇಶ, ಚನ್ನಪ್ಪ ಸಿರವಾರ, ಗೋವಿಂದರಾಜು ಮಾನ್ವಿ, ಮಲ್ಲಪ್ಪ ನವಲಕಲ್, ಚನ್ನಪ್ಪ ಬೂದಿನಾಳ, ಮೇಶಕ್ ದೊಡ್ಡಮನೆ, ಪ್ರಭಕರ್ ಹರನಹಳ್ಳಿ, 
ಪರಮೇಶ ಲಕ್ಕಂದಿನ್ನಿ, ಸುಂದರರಾಜ್, ಹನುಮೇಶ ಶಾಖಾಪೂರು, ಅರ್ಜುನ ಜಕ್ಕಲದಿನ್ನಿ, ಮೌನೇಶ ಸೇರಿದಂತೆ ಅನೇಕರಿದ್ದರು.

Post a Comment

Previous Post Next Post