ಅಮರೇಗೌಡ ಬಯ್ಯಾಪೂರ ಬದ್ಧತೆಯಿಂದ ಮಾತನಾಡಲಿ : ಬಿ.ಮೌನೇಶ್ ಬಳಗಾನೂರ

ಸುದ್ದಿ ಸಂಪಾದಕರು: ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಡಿಸೆಂಬರ್ 06 : ಕೊಪ್ಪಳದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಬದಲಾವಣೆ ಮಾಡಬೇಕು ಎಂದು ಉದ್ಧಟತನದ ಮಾತುಗಳಾಡಿ ಸಂವಿಧಾನಕ್ಕೆ ಅಪಮಾನ ಮಾಡಿದ ಅಮರೇಗೌಡ ಪಾಟೀಲ ಬಯ್ಯಾಪೂರ ಕ್ಷಮೆ ಯಾಚಿಸಲಿ ಹಾಗೂ ಬದ್ಧತೆಯಿಂದ ಮಾತನಾಡಲಿ ಎಂದು ಕರ್ನಾಟಕ ದಲಿತ ಸಂರಕ್ಷ ಸಮಿತಿ ಜಿಲ್ಲಾ ಉಪಾಧ್ಯಕ್ಷ ಬಿ. ಮೌನೇಶ್ ಬಳಗಾನೂರ ಮಾದ್ಯಮ ಹೇಳಿಕೆ ಮೂಲಕ ಒತ್ತಾಯ.


ಕಳೆದ ಶನಿವಾರದಂದು ಕೊಪ್ಪಳದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಬದಲಾವಣೆ ಮಾಡಬೇಕು ಎಂದು ಉದ್ಧಟತನದ ಮಾತುಗಳಾಡಿ ಸಂವಿಧಾನಕ್ಕೆ ಅಪಮಾನ ಮಾಡಿದ್ದು ಇದು ತಮ್ಮ ಶಾಸಕ ಸ್ಥಾನಕ್ಕೆ ಶೋಭೆತರುವಂತದ್ದಲ್ಲ ನ್ಯಾಯವಾದಿಗಳ ಎದುರಿಗೆ ಈ ತರ ಮಾತನಾಡಿ ಬಾಬಾಸಾಹೇಬ ಅಂಬೇಡ್ಕರವರಿಗೆ ಅಗೌರವ ತೋರಿದ್ದಾರೆ. ಈ ಕೂಡಲೇ ಅಮರೇಗೌಡ ಪಾಟೀಲ ಬಯ್ಯಾಪೂರ ರವರು ಅಂಬೇಡ್ಕರವರ ಅನುಯಾಯಿಗಳಲ್ಲಿ ಕ್ಷಮೆಯಾಚಿಸಬೇಕು.
ಬಾಬಾಸಾಹೇಬ ಅಂಬೇಡ್ಕರವರ ಜೀವಿತಾವಧಿಯಲ್ಲೇ ಕಾಂಗ್ರೆಸ್ ನವರು ಹಲವಾರು ರೀತಿಯ ಹಿಂಸೆಕೊಟ್ಟಿದ್ದು ಯಾರು ಮರೆಯುವಂತಿಲ್ಲ. ಅದಕ್ಕೆ ಅಂದಿನ ದಿನಗಳಲ್ಲಿ ಅಂಬೇಡ್ಕರವರು ಮನನೊಂದು ಕಾಂಗ್ರೆಸ್ ಪಕ್ಷ ಉರಿಯುವಮನೆ ಇದರಲ್ಲಿ ಹೋದವರು ಸುಟ್ಟು ಹೋಗುತ್ತೀರಿ ಎಂಬ ಸಂದೇಶ ಈಗ ಮರುಕಳಿಸುವಂತಾಗಿದೆ ಎಂದು ಕರ್ನಾಟಕ ದಲಿತ ಸಂರಕ್ಷ ಸಮಿತಿಯ ರಾಯಚೂರು ಜಿಲ್ಲಾ ಉಪಾಧ್ಯಕ್ಷರಾದ ಬಿ. ಮೌನೇಶ ಬಳಗಾನೂರ ಮಾದ್ಯಮಕ್ಕೆ ತಿಳಿಸಿದ್ದಾರೆ. 


Post a Comment

Previous Post Next Post